Malpe Beach : ಮತ್ಸ್ಯಪ್ರಿಯರೇ ಹುಷಾರ್..! – ಇಲ್ಲಿನ ಮೀನು ತಿಂದ್ರೆ ಕ್ಯಾನ್ಸರ್ ಬರೋದು ಗ್ಯಾರಂಟಿ..!!

Malpe Beach : ಮತ್ಸ್ಯಪ್ರಿಯರೇ ಹುಷಾರ್..! – ಇಲ್ಲಿನ ಮೀನು ತಿಂದ್ರೆ ಕ್ಯಾನ್ಸರ್ ಬರೋದು ಗ್ಯಾರಂಟಿ..!!

ನ್ಯೂಸ್ ಆ್ಯರೋ : ಕರಾವಳಿ ಅಂದ್ರೆನೇ ಅದು ಮೀನುಗಳ ತವರೂರು. ಮೀನುಪ್ರಿಯರ ಪ್ರೀತಿಯ ಊರು. ಪ್ರತಿದಿನ ಮೀನಿಲ್ಲದಿದ್ದರೆ ಮನೆಯಲ್ಲಿ ಊಟ ಸೇರದು. ಕರಾವಳಿಗರಾಗಿದ್ದುಕೊಂಡು ಬೆಂಗಳೂರಿನಲ್ಲೋ ಅಥವಾ ಇನ್ನೆಲ್ಲೋ ನೆಲೆಸೋದಂದ್ರೆ ಕಷ್ಟ ಬಿಡಿ. ಮೀನೂಟ ಬಿಟ್ಟು ಬದುಕೋ ಪಾಡು ವಿವರಿಸಲಾಗದು.

ಆದರೆ ಪ್ರವಾಸಿಗರೆ ನೀವೇನಾದ್ರೂ ಮೀನು ಪ್ರಿಯರಾಗಿದ್ರೆ ಎಚ್ಚರ.. ಎಚ್ಚರ! ಬೀಚ್​ಗೆ ಹೋಗಿ ಮೀನು ಸವಿಯುವ ಪ್ಲಾನ್ ಏನಾದ್ರೂ ಇದ್ರೆ ನಿಮ್ಮ ಆರೋಗ್ಯದ ಕಡೆ ಗಮನ ಇರಲಿ.‌ ಅರೆ ಬೀಚ್​ಗೂ ಮೀನಿಗೂ ನಮ್ಮ ಆರೋಗ್ಯಕ್ಕೂ ಏನು ಸಂಬಂಧ?

ಕಡು ಕೆಂಪು ಮಸಾಲೆ ಮೀನು ತಿನ್ನೋ ಮುನ್ನ ಎಚ್ಚರ…

ಸಾಲು ಸಾಲು ರಜೆ, ವೀಕೆಂಡ್ ಮೂಡ್ ಅಂತ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಹೆಚ್ಚಿನ ಪ್ರವಾಸಿಗರು ಅದರಲ್ಲೂ ಶಾಲಾ ಮಕ್ಕಳು ಕೃಷ್ಣನಗರಿ ಉಡುಪಿಗೆ ಆಗಮಿಸುತ್ತಿದ್ದಾರೆ. ಹೀಗೆ ಆಗಮಿಸುವವರ ನೆಚ್ಚಿನ ತಾಣ ಅಂದ್ರೆ ಮಲ್ಪೆ ಬೀಚ್​.. ಇಲ್ಲಿ ಬರುವ ಬಹುತೇಕರು ನಾನ್ ವೆಜ್ ಪ್ರಿಯರು, ಅದರಲ್ಲೂ ಮೀನಂದ್ರೆ ಬಾಯಿ ಚಪ್ಪರಿಸಿ ತಿಂತಾರೆ.

ಇವರಿಗಾಗಿಯೇ ವ್ಯಾಪಾರಸ್ಥರು ಲಾಭದ ಲೆಕ್ಕಾಚಾರದಲ್ಲಿ ಬೀಚ್ ಬಳಿಯೇ ಫಿಶ್ ಲ್ಯಾಂಡ್, ಮೀನ್ ಲಂಚ್ ರೀತಿ ನಾನಾ ನಾನ್ ವೆಜ್​ ಆಹಾರ ಮಳಿಗೆಗಳನ್ನ ಹಾಕಿದ್ದಾರೆ. ಇಲ್ಲಿ ಪ್ರವಾಸಿಗರನ್ನು ಸೆಳೆಯಲೆಂದೇ ಕಣ್ಣು ಕುಕ್ಕುವಂತೆ ಮೀನಿಗೆ ಕಡುಕೆಂಪು ಬಣ್ಣದ ಮಸಾಲೆ ಹಚ್ಚಿ ಹೊರಗೆ ಸಾಲಾಗಿ ಇಡಲಾಗಿದೆ.‌ ಆದ್ರೆ ಹೀಗೆ ಮಸಾಲೆ ಹಚ್ಚಿ ಇಡಲಾದ ಮೀನು‌ಗಳನ್ನು ಬಾಯಿ ಚಪ್ಪರಿಸಿ ತಿಂದ್ರೆ ಕ್ಯಾನ್ಸರ್ ಬರಬಹುದು ಎಚ್ಚರ. ಯಾಕಂದ್ರೆ ಅದರಲ್ಲಿರುವ ರಾಸಾಯನಿಕ ಹಾಗೂ ಮಿತಿ ಮೀರಿದ ಟೇಸ್ಟಿಂಗ್ ಪೌಡರ್.

ಮೀನು ಮಾತ್ರವಲ್ಲ ಗೋಬಿ, ಚಿಕನ್ ಕಬಾಬ್ ಕೂಡಾ ಡೇಂಜರ್…!

ಇಲ್ಲಿರುವ ಮೀನಷ್ಟೇ ಅಲ್ಲದೆ ಚಿಕನ್ ಕಬಾಬ್, ಗೋಬಿ ಮಂಚೂರಿ, ಫಿಂಗರ್ ಚಿಪ್ಸ್ ಹೀಗೆ ಕರಿದ ಆಹಾರ ತಿನಿಸು ಸಖತ್ ಡೇಂಜರ್ ಅನ್ನೋದು ಕನ್ ಫರ್ಮ್ ಆಗಿದೆ. ದೂರಿನ ಮೇರೆಗೆ ಬೀಚ್ ಸಮೀಪ‌ ಇರುವ ಸುಮಾರು 28 ಆಹಾರ ಮಳಿಗೆಗಳ ಮೇಲೆ ದಾಳಿ ಮಾಡಿ ನಗರಸಭೆ ಪೌರಾಯುಕ್ತ ರಾಯಪ್ಪ ಹಾಗೂ ಅಧಿಕಾರಿಗಳ ತಂಡ ತಪಾಸಣೆ ನಡೆಸಿದೆ.

ಈ ವೇಳೆ ಬರೋಬ್ಬರಿ 6.5 ಕೆಜಿ ಟೇಸ್ಟಿಂಗ್ ಪೌಡರ್ ಸಿಕ್ಕಿದೆ. ಅಷ್ಟೇ ಅಲ್ಲ ರಾಸಾಯನಿಕ ಬಣ್ಣಗಳು ಪತ್ತೆಯಾಗಿವೆ. ಈ ಪ್ರಮಾಣದ ಟೇಸ್ಟಿಂಗ್ ಪೌಡರ್ ಕಂಡು ಪೌರಾಯುಕ್ತರೇ ಶಾಕ್ ಆಗಿದ್ದಾರೆ. ಹೀಗೆ ಸಿಕ್ಕಿರುವ ಟೇಸ್ಟಿಂಗ್ ಪೌಡರ್, ರಾಸಾಯನಿಕ ಬಣ್ಣಗಳನ್ನು ಸೀಜ್ ಮಾಡಿ ವ್ಯಾಪಾರಿಗಳಿಗೆ ಬುದ್ಧಿವಾದ ಹೇಳಿದ್ದಾರೆ. ಮಾತ್ರವಲ್ಲದೆ ನಿತ್ಯ ತಪಾಸಣೆ ಮಾಡುವುದಾಗಿ ಪೌರಾಯುಕ್ತ ಹೇಳಿದ್ದಾರೆ.

ಹೆಚ್ಚಿನ ಪ್ರಮಾಣದ ರಾಸಾಯನಿಕ, ಟೇಸ್ಟಿಂಗ್ ಪೌಡರ್ ಬಳಸಿ ಪ್ರವಾಸಿಗರ ಪ್ರಾಣದ ಜೊತೆ ವ್ಯಾಪಾರಸ್ಥರು ಆಟವಾಡುತ್ತಿದ್ದಾರೆ. ಇಂತ ವ್ಯಾಪಾರಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬದಲು ಬುದ್ಧಿವಾದ ಹೇಳಿದ್ರೆ ಯಾವ ಬದಲಾವಣೆ ಸಾಧ್ಯ. ಮತ್ತೆ ಕದ್ದು ಮುಚ್ಚಿ ಅದೇ ಟೇಸ್ಟಿಂಗ್ ಪೌಡರ್ ಬಳಸಲ್ಲ ಅನ್ನೋದು ಏನು ಗ್ಯಾರಂಟಿ ಅಂತ ಸಾರ್ವಜನಿಕರು ಪ್ರಶ್ನಿಸ್ತಿದ್ದಾರೆ.

ಒಟ್ಟಾರೆಯಾಗಿ ಆರೋಗ್ಯದ ಕಡೆ ಲಕ್ಷ್ಯವಿರಬೇಕು. ನಾಲಗೆ ರುಚಿಗೆ ಲಗಾಮು ಹಾಕಬೇಕು. ರಸ್ತೆ ಬದಿ ಅಥವಾ ಎಲ್ಲೆಂದರಲ್ಲಿ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಮನೆಯಲ್ಲೇ ತಯಾರಿಸಿ ತಿಂದರೆ ರುಚಿಯು ಹೌದು. ಆರೋಗ್ಯಕ್ಕೂ ಒಳ್ಳೆಯದು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *