ಮದ್ಯದಂಗಡಿ ಮುಂದೆ ಇರಬೇಕಂತೆ ಆಸ್ಪತ್ರೆ, ವಿಶ್ರಾಂತಿ ಭವನ..! – ಅಬ್ಬಬ್ಬಾ.. ಒಂದೆರಡಲ್ಲ ಕುಡುಕರ ಡಿಮ್ಯಾಂಡ್..!

ನ್ಯೂಸ್ ಆ್ಯರೋ : ಮದ್ಯಪ್ರಿಯರ ಬೇಡಿಕೆಗೆ ಅನುಗುಣವಾಗಿ ಪ್ರತಿಭಟನೆ ಕೂಡಾ ನಡೆಯುತ್ತಿರುತ್ತದೆ. ನಿತ್ಯ ದುಡಿ, ಸತ್ಯ ನುಡಿ, ಸ್ವಲ್ಪ ಕುಡಿ, ಮನೆಗೆ ನಡಿ. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಚಿತ್ರ ವಿಭಿನ್ನ ಹೋರಾಟ ನಡೆಯುತ್ತಿದೆ. ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದಿಂದ ಪ್ರತಿಭಟನೆ ನಡೆಸಿದ್ದು, ತಮ್ಮ ಬೇಡಿಕೆಗಳನ್ನ ಮುಂದಿಟ್ಟಿದ್ದಾರೆ.

ಈ ಮದ್ಯಪಾನ ಪ್ರಿಯರ ಬೇಡಿಕೆಗೆ ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಸಚಿವ ಸಂತೋಷ ಲಾಡ್ ಭೇಟಿ ನೀಡಿ, ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದಿಂದ ಪ್ರತಿಭಟನೆ ಮದ್ಯಪಾನ ಪ್ರಿಯರ ಬೇಡಿಕೆ ಕೇಳಿ ಸಚಿವ ಸಂತೋಷ ಲಾಡ್ ಸುಸ್ತೋ ಸುತ್ತು ಆಗಿದ್ದಾರೆ. ಇನ್ನೂ ಮದ್ಯಪಾನ ಪ್ರಿಯರ ವಿಚಿತ್ರ ಹೋರಾಟ ಕಂಡು ಶಾಕ್ ಆಗಿದ್ದಾರೆ.

ಸರ್ಕಾರದ ಪರವಾಗಿ ಪ್ರತಿಭಟನಾಕಾರರ ಮನವಿ ಸ್ವೀಕಾರ ಮಾಡಲು ಬಂದಿದ್ದ ಲಾಡ್ ಮುಂದೆ ರಾಜ್ಯ ಕುಡುಕರಿಗೆ ಆಗುತ್ತಿರುವ ಅನ್ಯಾಯ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಮದ್ಯ ಪ್ರಿಯರನ್ನ ಮದುವೆಯಾಗುವ ಮಹಿಳೆಯರಿಗೆ ಸರ್ಕಾರ 2 ಲಕ್ಷ ರೂಪಾಯಿ ನೀಡಬೇಕು. ಪ್ರತಿಯೊಬ್ಬರೂ 1 ಕ್ವಾರ್ಟರ್ ಮದ್ಯವನ್ನು ಪಡೆಯಬೇಕು ಮತ್ತು ಬಾರ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕು.

ಡಿಸೆಂಬರ್ 31 ರಂದು ಮದ್ಯಪಾನ ಪ್ರಿಯರ ದಿನವನ್ನಾಗಿ ಆಚರಣೆ ಮಾಡಬೇಕು. ಅಂದು ಎಲ್ಲಾ ರೀತಿಯ ಬಾರ್, ರೆಸ್ಟೋರೆಂಟ್ ನಲ್ಲಿ 50 ರಷ್ಟು ರಿಯಾಯಿತಿ ನೀಡಬೇಕು, ಕುಡುಕ ಎಂಬ ಪದಬಳಕೆ ನಿಷೇಧ ಮಾಡಬೇಕು. ಮದ್ಯಪಾನ ಪ್ರಿಯರ ಅಭಿವೃದ್ಧಿ ನಿಗಮ ಆರಂಭಿಸಿ ಹತ್ತರಷ್ಟು ಅನುದಾನ ನೀಡಬೇಕು. ಪ್ರತಿ ಬಾಟಲ್ ಗೆ ಇನ್ಸ್ಯೂರೆನ್ಸ್ ಮಾಡಬೇಕು, ಪ್ರತಿ ಬಾರ್ ಮುಂದೆ ಆಂಬುಲೆನ್ಸ್ ಸೇವೆ ನೀಡಬೇಕು, ಬಾರ್ ಪಕ್ಕದಲ್ಲಿ ಕುಡುಕರ ವಿಶ್ರಾಂತಿಗಾಗಿ ಭವನ ನಿರ್ಮಾಣ ಬೇಕೆಂದ ಮದ್ಯಪಾನ ಪ್ರಿಯರು ಆಗ್ರಹಿಸಿದ್ದಾರೆ.

ಕಳೆದ ವರ್ಷ ನವೆಂಬರ್ 6 ರಂದು ಮದ್ಯ ಪ್ರೇಮಿಗಳ ಸಂಘವನ್ನು ರಚಿಸಲಾಯಿತು. ಸಂಘದ ಅಧ್ಯಕ್ಷ ವೆಂಕಟೇಶ ಬೋರೇಹಳ್ಳಿ ಕಳೆದ ವರ್ಷವೂ ಸರ್ಕಾರದ ಮುಂದೆ ವಿವಿಧ ಬೇಡಿಕೆಗಳನ್ನು ಮಂಡಿಸಿದ್ದರು. ಸರಕಾರಕ್ಕೆ ಮದ್ಯದಿಂದ ಅತಿ ಹೆಚ್ಚು ಆದಾಯ ಬರುತ್ತಿದೆ ಆದರೆ ಅದರ ಬಳಕೆದಾರರ ಹಿತವನ್ನು ಸರಕಾರ ಕಡೆಗಣಿಸಿದೆ ಎಂದು ಸಂಘದ ಸದಸ್ಯರು ದೂರಿದರು. ಮದ್ಯದ ಬಾಟಲಿಗೆ ವಿಮೆ ಮಾಡಿಸಬೇಕು. ಮದ್ಯವ್ಯಸನಿ ಮೃತಪಟ್ಟರೆ ಕುಟುಂಬಕ್ಕೆ 10 ಲಕ್ಷ ರೂ. ಮದ್ಯ ಪ್ರಿಯರ ಆರೋಗ್ಯ ತಪಾಸಣೆಯನ್ನು ತಾಲ್ಲೂಕು ಮಟ್ಟದಲ್ಲಿ ನಿಯಮಿತವಾಗಿ ನಡೆಸಬೇಕು’ ಎಂದು ಬೋರೇಹಳ್ಳಿ ಹೇಳಿದರು. ಒಟ್ಟಾರೆಯಾಗಿ ಇವರ ಬೇಡಿಕೆ ಈಡೇರುತ್ತಾ ನೋಡಬೇಕಷ್ಟೆ..!