ಸ್ಯಾಮ್‌ಸಂಗ್‌ ಫೋನ್ ಬಳಕೆದಾರರೇ ಹುಷಾರ್ – ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ ಕೊಟ್ಟಿದ್ಯಾಕೆ..!?

ಸ್ಯಾಮ್‌ಸಂಗ್‌ ಫೋನ್ ಬಳಕೆದಾರರೇ ಹುಷಾರ್ – ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ ಕೊಟ್ಟಿದ್ಯಾಕೆ..!?

ನ್ಯೂಸ್ ಆ್ಯರೋ : ಮೊಬೈಲ್ ಫೋನ್ ಜೀವನದಲ್ಲಿ ಎಷ್ಟು ಅನಿವಾರ್ಯವೋ ಅಷ್ಟೇ ತೊಂದರೆಗಳನ್ನು ಕೂಡಾ ಸೃಷ್ಟಿಸಬಹುದು. ಸ್ಮಾರ್ಟ್‌ಫೋನ್ ಬಳಕೆ ಸುಲಭ ಆದರೆ ಅಪಾಯವೂ ಹೆಚ್ಚು. ಮಾಹಿತಿ ಕದಿಯುವಿಕೆ, ಡೇಟಾ ಸೋರಿಕೆ ಸೇರಿದಂತೆ ಹಲವು ಅಪಾಯ ಸ್ಮಾರ್ಟ್‌ಫೋನ್ ಬಳಕೆದಾರರು ಎದುರಿಸುತ್ತಾರೆ. ಇದೀಗ ಕೇಂದ್ರ ಸರ್ಕಾರದ ಮಹತ್ವದ ಎಚ್ಚರಿಕೆ ನೀಡಿದೆ. ಪ್ರಮುಖವಾಗಿ ಸ್ಯಾಮ್ಸಂಗ್ S23 ಸೇರಿದಂತೆ ಸ್ಯಾಮ್‌ಸಂಗ್ ಮೊಬೈಲ್ ಫೋನ್ ಬಳಕೆದಾರರು ತಕ್ಷಣವೇ ಫೋನ್ ಪರಿಶೀಲಿಸಿ ಸಲಹೆ ಪಾಲಿಸುವಂತೆ ಸೂಚಿಸಿದೆ.

ಭಾರತದ ವಿಶ್ವದಲ್ಲೇ ಅತೀ ದೊಡ್ಡ ಮೊಬೈಲ್ ಮಾರುಕಟ್ಟೆ ಹೊಂದಿದೆ. ಸ್ಮಾರ್ಟ್‌ಫೋನ್ ಬಳಕೆ, ಮಾರಾಟದಲ್ಲೂ ಭಾರತ ದಾಖಲೆ ಬರೆದಿದೆ. ಸ್ಮಾರ್ಟ್‌ಫೋನ್ ಬಳಕೆಯಿಂದ ಗ್ರಾಹಕರು ಡೇಟಾ ಸೋರಿಕೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಇದೀಗ ಸ್ಯಾಮ್‌ಸಂಗ್‌ ಬಳಕೆದಾರರಿಗೆ ಭಾರತ ಸರ್ಕಾರವು ಮಹತ್ವದ ಎಚ್ಚರಿಕೆ ನೀಡಿದೆ. ಸ್ಯಾಮ್‌ಸಂಗ್ ಕೆಲ ಸೀರಿಸ್ ಫೋನ್‌ಗಳಲ್ಲಿ ಡೇಟಾ ಕಳುವು ಅಪಾಯವಿದೆ ಎಂದಿದೆ. ಇಷ್ಟೇ ಅಲ್ಲ ಈ ಬಳಕೆದಾರರು ತಮ್ಮ ಫೋನ್ ತಕ್ಷಣ ಅಪ್‌ಡೇಟ್ ಮಾಡುವಂತೆ ಸೂಚಿಸಿದೆ. ಸ್ಯಾಮ್‌ಸಂಗ್ S23 ಸೇರಿದಂತೆ ಗ್ಯಾಲಕ್ಸಿ ಸೀರಿಸ್ ಫೋನ್‌ಗಳ Android 11, 12, 13 ಮತ್ತು 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲ ದೋಷಗಳಿವೆ.

ಈ ದೋಷವನ್ನೇ ಸದುಪಯೋಗ ಪಡಿಸಿಕೊಂಡ ಹ್ಯಾಕರ್ಸ್, ನಿಮ್ಮ ಫೋನ್‌ಗಳಿಂದ ಮಹತ್ವದ ಮಾಹಿತಿ ಕದಿಯುವ ಸಾಧ್ಯತೆ ಹೆಚ್ಚಿದೆ.ಹೀಗಾಗಿ ತಕ್ಷಣವೇ ಸಾಫ್ಟ್‌ವೇರ್ ಅಪ್‌ಡೇಟ್ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಏನ್ ಹೇಳಿದೆ..?

ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಈ ಕುರಿತು ಮಹತ್ವದ ಸೂಚನೆ ನೀಡಿದೆ. ಹೆಚ್ಚು ಬಳಕೆಯಲ್ಲಿರುವ ಈ Android ಆವೃತ್ತಿಯ ಫೋನ್ ಗಳು ಮುಂದಿನ ದಿನಗಳಲ್ಲಿ ಇತರ ಸಂಭಾವ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂದು ತಿಳಿಸಿದೆ.
ಸ್ಯಾಮ್‌ಸಂಗ್ ಫೋನ್‌ಗಳಲ್ಲಿ ಸ್ಯಾಮ್‌ಸಂಗ್ ಸೆಕ್ಯೂರಿಟಿ ಮ್ಯಾನೇಜ್ಮೆಂಟ್ ಇನ್‌ಸ್ಟಾಲ್ ಮಾಡಲಾಗಿರುತ್ತದೆ. ಆದರೆ ಈ ಸೆಕ್ಯೂರಿಟಿ ಮ್ಯಾನೇಜ್ಮೆಂಟ್‌ನಲ್ಲಿ ಕೆಲ ದೋಷಗಳಿಂದ ಅಸಮರ್ಪಕ ಪ್ರವೇಶ ನಿಯಂತ್ರ, ಫೇಶಿಯಲ್ ರೆಕಗ್ನೀಶನ್ ಸಾಫ್ಟ್‌ವೇರ್, ಕಂಪ್ಯೂಟರ್ ಪ್ರೋಗಾಮಿಂಗ್ ಮೇಲೆ ಅತಿಯಾದ ನ್ಯೂಮರಿಟ್ ಡೇಟಾ ಫ್ಲೋ, AR ಎಮೋಜಿ ಅಪ್ಲಿಕೇಶನ್‌ನೊಂದಿಗೆ ದೃಢೀಕರಣ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದೆ.

Samsung Knox ದೋಷಗಳಿಂದ ಫೋನ್ ನಿರ್ವಹಣೆಯಲ್ಲಿ ಸಮಸ್ಯೆ ಎದುರಾಗಲಿದೆ. ಮೆಮೊರಿ ಕರಪ್ಶನ್ ಸೇರಿದಂತೆ ಹಲವು ತಾಂತ್ರಿಕ ಸಮಸ್ಯಗಳು ಬಳಕೆದಾರರಿಗೆ ಎದುರಾಗಲಿದೆ. ಇದೇ ವೇಳೆ ಡೇಟಾ ಸೋರಿಕೆ, ಮಾಹಿತಿ ಕಳುವು ಸಮಸ್ಯೆಗಳನ್ನು ಬಳಕೆದಾರರು ಗಂಭೀರವಾಗಿ ಎದುರಿಸಬೇಕಾಗುತ್ತದೆ.

ಆಕ್ರಮಣಕಾರರಿಗೆ ಹೀಪ್ ಓವರ್‌ಫ್ಲೋ ಮತ್ತು ಸ್ಟಾಕ್-ಆಧಾರಿತ ಬಫರ್ ಓವರ್‌ಫ್ಲೋ ಮಾಡುವುದು, ಮೊಬೈಲ್ ಸಿಮ್ ಪಿನ್ ಪ್ರವೇಶಿಸಲು, AR ಎಮೋಜಿಯ ಸ್ಯಾಂಡ್‌ಬಾಕ್ಸ್ ಡೇಟಾವನ್ನು ಓದಲು, ಸಿಸ್ಟಮ್ ಸಮಯವನ್ನು ಬದಲಾಯಿಸುವ ಮೂಲಕ ನಾಕ್ಸ್ ಗಾರ್ಡ್ ಲಾಕ್ ಅನ್ನು ಬೈಪಾಸ್ ಮಾಡಲು, ಅನಿಯಂತ್ರಿತ ಫೈಲ್‌ಗಳನ್ನು ಪ್ರವೇಶಿಸುವುದು, ಸೂಕ್ಷ್ಮ ಮಾಹಿತಿಗೆ ಪ್ರವೇಶ ಪಡೆದು ಸುಲಭವಾಗಿ ಸೋರಿಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಈ ಭದ್ರತಾ ಸಮಸ್ಯೆಗಳನ್ನು ಪರಿಹರಿಸಲು ಸ್ಯಾಮ್‌ಸಂಗ್ ಈಗಾಗಲೇ ಸಾಫ್ಟ್‌ವೇರ್ ಪ್ಯಾಚ್ ಅನ್ನು ಬಿಡುಗಡೆ ಮಾಡಿದೆ.

ಜೊತೆಗೆ ಬಳಕೆದಾರರು ತಮ್ಮ ಫೋನ್‌ನ OS ಅಥವಾ ಫರ್ಮ್‌ವೇರ್ ಅನ್ನು ಆಪ್ ಡೇಟ್ ಮಾಡುವುದು ಮುಖ್ಯವಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *