2023ರಲ್ಲಿ ಸ್ವಿಗ್ಗಿಯಲ್ಲಿ ಅತೀ ಹೆಚ್ಚು ಆರ್ಡರ್ ಮಾಡಿದ ಫುಡ್ ಯಾವುದು ಗೊತ್ತಾ…? – ಸತತ ಎಂಟನೇ ವರ್ಷವೂ ಇದೇ ನಂ.1…!!

ನ್ಯೂಸ್ ಆ್ಯರೋ : ಇತ್ತೀಚಿನ ದಿನಗಳಲ್ಲಿ ನಾವು ಮನೆಯ ಅಡುಗೆಗಿಂತ ಹೆಚ್ಚಾಗಿ ಆರ್ಡರ್ ಮಾಡಿ ತಿನ್ನುವ ಪ್ರಮೇಯ ಹೆಚ್ಚಾಗಿದೆ. ಸ್ವಿಗ್ಗಿ, ಜೊಮ್ಯಟೋದಂತಹ ಆ್ಯಪ್ ಗಳಿಗೆ ಅನೇಕ ಜನರು ಎಡಿಕ್ಟ್ ಆಗಿದ್ದಾರೆ. ಇದೀಗ ಸ್ವಿಗ್ಗಿಗೆ ವಿಶೇಷ ಮಾನ್ಯತೆಯೊಂದು ದೊರೆತಿದೆ.

ಇತ್ತೀಚಿನ ವರ್ಷಗಳಲ್ಲಿ ಕಾಲೇಜು, ಆಫೀಸು ಅನ್ನೋ ಧಾವಂತದಲ್ಲಿ ಜನರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತಿನ್ನೋದೆ ಹೆಚ್ಚು. ನಮಗೆ ಬೇಕಾದ ಆಹಾರ ಕೆಲವೇ ಕ್ಷಣಗಳಲ್ಲಿ ಸುಲಭವಾಗಿ ನಮ್ಮ ಮನೆ ಬಾಗಿಲಿಗೆ ಸೇರೋ ಕಾರಣ ಹೆಚ್ಚಿನವರು ಸ್ವಿಗ್ಗಿ, ಝೊಮೆಟೋದಲ್ಲಿ ಆರ್ಡರ್ ಮಾಡುತ್ತಾರೆ. ಹಾಗೆಯೇ ಈ 2023ರಲ್ಲಿ ಜನರು ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿರೋ ಫುಡ್ ಯಾವ್ದು ನಿಮ್ಗೆ ಗೊತ್ತಿದ್ಯಾ?

2023ರಲ್ಲಿ ಜನರು ಆನ್‌ಲೈನ್‌ಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಫುಡ್‌ ಬಿರಿಯಾನಿ. ಸತತ ಎಂಟನೇ ವರ್ಷ ಸ್ವಿಗ್ಗಿಯಲ್ಲಿ ಬಿರಿಯಾನಿ, ಜನರು ಅತಿ ಹೆಚ್ಚು ಆರ್ಡರ್ ಮಾಡಿದ ಆಹಾರವೆಂದು ಗುರುತಿಸಿಕೊಂಡಿದೆ. ಆಹಾರ ವಿತರಣಾ ವೇದಿಕೆ ಸ್ವಿಗ್ಗಿ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಭಾರತವು 2023ರಲ್ಲಿ ಸೆಕೆಂಡಿಗೆ 2 ಬಿರಿಯಾನಿಗಳನ್ನು ಆರ್ಡರ್ ಮಾಡುವುದರೊಂದಿಗೆ ಸತತ ಎಂಟನೇ ವರ್ಷಕ್ಕೆ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯವಾಗಿ ಗುರುತಿಸಿಕೊಂಡಿದೆ.

ಜನವರಿ 1ರಂದು ಒಂದೇ ದಿನ ಸ್ವಿಗ್ಗಿಯಲ್ಲಿ ಬರೋಬ್ಬರಿ 4,30,000 ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿದೆ. ಜನವರಿ 1 ಮತ್ತು ನವೆಂಬರ್ 23ರ ನಡುವಿನ ಆರ್ಡರ್ ಡೇಟಾದ ಆಧಾರದದಲ್ಲಿ ಪರಿಶೀಲಿಸಿದಾಗ ಭರ್ತಿ 2.49 ಮಿಲಿಯನ್ ಗ್ರಾಹಕರು ಬಿರಿಯಾನಿ ಆರ್ಡರ್‌ನೊಂದಿಗೆ ಸ್ವಿಗ್ಗಿಯಲ್ಲಿ ಆರ್ಡರ್‌ ಆರಂಭಿಸಿದ್ದಾರೆ.

ವಿಶ್ವಕಪ್ 2023ರ ಫೈನಲ್‌ ದಿನ 188 ಪಿಜ್ಜಾ ಆರ್ಡರ್‌

ಒಬ್ಬ ಬಳಕೆದಾರನು ಪಾರ್ಟಿಗಾಗಿ ಒಂದೇ ಆರ್ಡರ್‌ನಲ್ಲಿ 269 ಐಟಂಗಳನ್ನು ಆರ್ಡರ್ ಮಾಡಿದರು. ವಿಶ್ವಕಪ್ 2023ರ ಫೈನಲ್‌ಗಳ ದಿನದಂದು, ನವೆಂಬರ್ 19ರಂದು, ಭಾರತವು ಪ್ರತಿ ನಿಮಿಷಕ್ಕೆ 188 ಪಿಜ್ಜಾಗಳನ್ನು ಆರ್ಡರ್ ಮಾಡಿದೆ. ಗರಿಷ್ಠ ಸಂಖ್ಯೆಯ ಆರ್ಡರ್‌ಗಳು ಚೆನ್ನೈ, ದೆಹಲಿ ಮತ್ತು ಹೈದರಾಬಾದ್‌ನಲ್ಲಿರುವ ಬಳಕೆದಾರರ ಖಾತೆಗಳಿಂದ ಆಗಿದ್ದು, ಅವರು ತಲಾ 10,000 ಕ್ಕೂ ಹೆಚ್ಚು ಆರ್ಡರ್‌ಗಳನ್ನು ಮಾಡಿದ್ದಾರೆ ಎಂದು ವರದಿಯು ಹೈಲೈಟ್ ಮಾಡಿದೆ.

ಆಹಾರಕ್ಕಾಗಿ ಅತಿ ಹೆಚ್ಚು ಖರ್ಚು ಮಾಡಿದ್ದು ಮುಂಬೈ ಬಳಕೆದಾರರು. ಬರೋಬ್ಬರಿ 42.3 ಲಕ್ಷ ರೂ. ಮೌಲ್ಯದ ಆಹಾರವನ್ನು ಆರ್ಡರ್ ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ಗ್ರಾಹಕರು ಬರೋಬ್ಬರಿ 6 ಲಕ್ಷ ಖರ್ಚು ಮಾಡಿ ಇಡ್ಲಿಯನ್ನು ಆರ್ಡರ್‌ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಅತಿ ಹೆಚ್ಚು ಚಾಕೋಲೇಟ್ ಕೇಕ್ ಆರ್ಡರ್

ದುರ್ಗಾ ಪೂಜೆಯ ಸಮಯದಲ್ಲಿ ಭರ್ತಿ 7.7 ಮಿಲಿಯನ್‌ ಗುಲಾಬ್ ಜಾಮೂನ್‌ನ್ನು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಲಾಗಿದೆ. ಕಳೆದ ಬಾರಿ ಜನರು ಅತಿ ಹೆಚ್ಚು ರಸಗುಲ್ಲಾವನ್ನು ಆರ್ಡರ್‌ ಮಾಡಿದ್ದರು. ಆದರೆ ಈ ಬಾರಿ ಗುಲಾಬ್‌ ಜಾಮೂನ್‌ ಆರ್ಡರ್‌ ಪ್ರಮಾಣ ಇವೆಲ್ಲವನ್ನೂ ಮೀರಿಸಿದೆ. ನವರಾತ್ರಿಯ ಎಲ್ಲಾ ಒಂಬತ್ತು ದಿನಗಳ ಕಾಲ ಸಸ್ಯಾಹಾರಿ ಆರ್ಡರ್‌ಗಳಲ್ಲಿ ಮಸಾಲೆ ದೋಸೆಯು ಅಗ್ರ ನೆಚ್ಚಿನದಾಗಿತ್ತು. ಈ ವರ್ಷ, ಬೆಂಗಳೂರು ದೇಶದ ಕೇಕ್ ರಾಜಧಾನಿ ಆಗಿತ್ತು, ಕೇವಲ ಚಾಕೊಲೇಟ್ ಕೇಕ್‌ಗಾಗಿ 8.5 ಮಿಲಿಯನ್ ಆರ್ಡರ್‌ಗಳನ್ನು ಸ್ವಿಗ್ಗಿ ಪಡೆದುಕೊಂಡಿದೆ.. ತಾಯಂದಿರ ದಿನದಂದು (ಮೇ 14) ಅತಿ ಹೆಚ್ಚು ಚಾಕೊಲೇಟ್ ಕೇಕ್‌ಗಳನ್ನು ಆರ್ಡರ್ ಮಾಡಲಾಗಿದೆ.

ಇನ್‌ಸ್ಟಾಮಾರ್ಟ್‌ನಲ್ಲಿ ಅತಿ ಹೆಚ್ಚು ಸರ್ಚ್‌ ಆಗಿದ್ದು ಏನು?

ವರದಿಯು ಅದರ ನಂತರ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಆರ್ಡರ್‌ ಮಾಡಿದ ಡೇಟಾವನ್ನು ಸಹ ನೀಡಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಐಟಂ ಹಾಲು, ಮೊಸರು ಮತ್ತು ಈರುಳ್ಳಿಯಾಗಿದೆ. ಜೈಪುರದ ಬಳಕೆದಾರರೊಬ್ಬರು ಒಂದೇ ದಿನದಲ್ಲಿ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ 67 ಆರ್ಡರ್‌ಗಳನ್ನು ಮಾಡಿದ್ದಾರೆ. ದೆಹಲಿಯಲ್ಲಿ ಅತಿ ವೇಗದ ವಿತರಣೆಯಾಗಿದ್ದು, ಸ್ವಿಗ್ಗಿ ಇನ್‌ಸ್ಟಾಮಾರ್ಟ್ 65 ಸೆಕೆಂಡುಗಳಲ್ಲಿ ತ್ವರಿತ ನೂಡಲ್ಸ್‌ನ ಪ್ಯಾಕೆಟ್ ಅನ್ನು ವಿತರಿಸಿದೆ.