ಪುತ್ತೂರು : ಅಪ್ರಾಪ್ತೆಯನ್ನು ರಕ್ಷಿಸಿದ ಪುತ್ತೂರಿನ ಯುವಕರ ಗಡಿಪಾರಿನ ಆದೇಶಕ್ಕೆ ವಿಶ್ವಹಿಂದು ಪರಿಷತ್ ಬಜರಂಗದಳ ಆಕ್ರೋಶ – ಬಜರಂಗಳದ ದಕ್ಷಿಣ ಪ್ರಾಂತ ಸಹ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ ತೀವ್ರ ಖಂಡನೆ

ಪುತ್ತೂರು : ಅಪ್ರಾಪ್ತೆಯನ್ನು ರಕ್ಷಿಸಿದ ಪುತ್ತೂರಿನ ಯುವಕರ ಗಡಿಪಾರಿನ ಆದೇಶಕ್ಕೆ ವಿಶ್ವಹಿಂದು ಪರಿಷತ್ ಬಜರಂಗದಳ ಆಕ್ರೋಶ – ಬಜರಂಗಳದ ದಕ್ಷಿಣ ಪ್ರಾಂತ ಸಹ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ ತೀವ್ರ ಖಂಡನೆ

ನ್ಯೂಸ್ ಆ್ಯರೋ : ಅಪ್ರಾಪ್ತ ಬಾಲಕಿಯನ್ನು ಅನ್ಯಮತೀಯನಿಂದ ರಕ್ಷಣೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಯುವಕರನ್ನು ಪೊಲೀಸ್ ಇಲಾಖೆ ಗಡಿಪಾರಿಗೆ ಶಿಪಾರಸ್ಸು ಆದೇಶಿಸಿರುವುದನ್ನು ವಿಶ್ವಹಿಂದು ಪರಿಷತ್ ಬಜರಂಗದಳ ಕಟುವಾಗಿ ಖಂಡಿಸುತ್ತಿದೆ. ಆ ನಾಲ್ವರ ವಿರುದ್ದ ನಗರ ಠಾಣೆಯಲ್ಲಿ ಯಾವುದೇ ಪ್ರಕರಣಗಳಿಲ್ಲ. ಬಾಲಕಿಯನ್ನು ರಕ್ಷಿಸಿ ಪೋಷಕರ ಗಮನಕ್ಕೆ ತಂದಿರುವ ಒಂದೇ ಕಾರಣಕ್ಕೆ ಗಡಿಪಾರಿಗೆ ನೋಟೀಸ್ ನೀಡಲಾಗಿದೆ.

ಅವರು ರೌಡಿಸಂ, ಕೋಮುವಾದ ಹಾಗೂ ಅಶಾಂತಿ ಮಾಡಿರುವುದೇ ಆಗಿದ್ದಲ್ಲಿ ಅದನ್ನು ಸ್ಪಷ್ಟಪಡಿಸಲಿ. ಸುಳ್ಳು ಕೇಸು ಹಾಕಿ ಸರಕಾರವೇ ಅಶಾಂತಿ ಸೃಷ್ಠಿಸುತ್ತಿದ್ದು ಇದಕ್ಕೆ ಸರಕಾರವೇ ಹೊಣೆ ಎಂದು ಭಜರಂಗಳದ ದಕ್ಷಿಣ ಪ್ರಾಂತ ಸಹ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ತಿಂಗಳ ಹಿಂದೆ ಚುನಾವಣಾ ಸಮಯದಲ್ಲಿ ಅಪ್ರಾಪ್ತ ಯುವತಿಯನ್ನು ಯುವಕನೋರ್ವ ಪುಸಲಾಯಿಸಿ ಸಿನಿಮಾ ಕರೆದುಕೊಂಡು ನಂತರ ಹೊಟೇಲ್‌ನಲ್ಲಿ ಜ್ಯೂಸ್ ಕುಡಿಸುವ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಗಮನಿಸಿ ಅವರನ್ನು ಠಾಣೆಗೆ ಕರೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ. ಆ ಘಟನೆ ಸಂಬಂಧಿಸಿದಂತೆ ಕಬಕದ ಮುಸ್ಲಿ ಯುವಕ ಮೇಲೆ ಪೋಕ್ಸೋ ಕೇಸು ದಾಖಲಾಗಿದೆ. ಇದೇ ಘಟನೆಗೆ ಸಂಬಂಧಿಸಿ ಆತನ್ನು ಅಕ್ರಮವಾಗಿ ಕಿಡ್ನಾಪ್ ಮಾಡಲಾಗಿದೆ ಎಂದು ನಾಲ್ವರ ಮೇಲೆ ಕೇಸು ದಾಖಲಾಗಿದೆ.

ಈ ಪ್ರಕರಣದಲ್ಲಿದ್ದ ರಿಕ್ಷಾ ಚಾಲಕ ದಿನೇಶ್ ತಿಂಗಳಾಡಿ, ಎಲೆಕ್ಟ್ರಿಷಿಯನ್ ಪ್ರಜ್ವಲ್ ಸಂಪ್ಯ, ಕೂಲಿ ಕಾರ್ಮಿಕರಾದ ನಿಶಾಂತ್ ತಿಂಗಳಾಡಿ ಹಾಗೂ ಪ್ರದೀಪ್ ಅಜಲಡ್ಕರವರನ್ನು ಪೊಲೀಸ್ ಇಲಾಖೆ ಬಾಗಲಕೋಟೆಗೆ ಗಡಿಪಾರಿಗೆ ಶಿಪಾರಸ್ಸು ಮಾಡಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ. ಆ ನಾಲ್ವರು ರೌಡಿಸಂ, ಕೋಮುವಾದ ಹಾಗೂ ಅಶಾಂತಿ ಸೃಷ್ಠಿಸುವಲ್ಲಿ ಭಾಗಿಗಳಾಗಿಲ್ಲ.

ಆದರೂ ಪೊಲೀಸ್ ಇಲಾಖೆ ನೀಡಿರುವ ನೋಟೀಸ್‌ನಲ್ಲಿ ನಾಲ್ವರು ಕೋಮುವಾದಿ, ರೌಡಿಸಂ, ಅಶಾಂತಿ ಸೃಷ್ಟಿಸುವಲ್ಲಿ ಭಾಗಿಗಳಾಗಿದ್ದಾರೆ ಎಂದು ಉಲ್ಲೇಖಿಸಿ ಸಹಾಯಕ ಆಯುಕ್ತರ ಮೂಲಕ ಗಡಿಪಾರಿಗೆ ನೊಟೀಸ್ ನೀಡಲಾಗಿದ್ದು ಪೊಲೀಸ್ ಇಲಾಖೆಯ ಈ ನಡೆ ಹಲವು ಪ್ರಶ್ನೆಗಳು ಹುಟ್ಟು ಹಾಕುತ್ತದೆ. ಅಲ್ಲದೆ ಗ್ರಾಮಾಂತರ ಪ್ರದೇಶದಲ್ಲಿರುವ ನಾಲ್ವರು ಯುವಕರನ್ನು ನಗರ ಠಾಣೆಯವರು ಗಡಿಪಾರಿಗೆ ಶಿಪಾರಸ್ಸು ಮಾಡಿರುವುದರಿಂದ ಪೊಲೀಸ್ ಇಲಾಖೆಯ ಮೇಲೆ ಸಂಶಯದಿಂದ ನೋಡುವಂತೆ ಮಾಡಿದೆ.

ಸರಕಾರ, ಜನಪ್ರತಿನಿಧಿಗಳ ಒತ್ತಡಕ್ಕೋಸ್ಕರ ಯಾರನ್ನೋ ರೌಡಿಸಂ, ಕೋಮುವಾದಿ ಮಾಡುವಲ್ಲಿ ಪೊಲೀಸ್ ಇಲಾಖೆ ನೇರ ಕಾರಣ. ಇದಕ್ಕೆ ಪ್ರೇರಣೆ ನೀಡಲು ಪ್ರಾರಂಭ ಮಾಡಿದ್ದು ತಕ್ಷಣ ನಿಲ್ಲಸಬೇಕು. ಅಂತಹ ಕೃತ್ಯಗಳಲ್ಲಿ ಭಾಗಗಳಾದವರನ್ನು ಗಡಿಪಾರು ಮಾಡುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಈ ರೀತಿ ಕೃತ್ಯಗಳನ್ನು ಕೆಟ್ಟ ಶಬ್ದಗಳನ್ನು ಖಂಡಿಸಿತ್ತೇವೆ. ಸುಳ್ಯದಲ್ಲಿ ಎರಡು ಕೇಸು ದಾಖಲಾಗಿರುವ ಲತೇಶ್ ಗುಂಡ್ಯರವರನ್ನು ಗಡಿಪಾಡು ಆದೇಶಸಲಾಗಿದೆ. ಸರಕಾರ ಹಿಂದು ವಿರೋಧಿಯಾಗಿ ಯೋಚನೆ ಮಾಡಿದರೆ ಅದಕ್ಕೆ ಖಂಡಿತವಾಗಿ ಇಡೀ ಸಮಾಜ, ಜನತೆ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು.

ಇದಕ್ಕೆ ಹೋರಾಟಗಳು ಅನಿವಾರ್ಯ. ನಮ್ಮದು ಸುಮ್ಮನೆ ಕುಲಿತು ಕೊಳ್ಳುವ ಸಂಘಟನೆಯಲ್ಲ. ನಾವು ನ್ಯಾಯ ಕೇಳಲು ಬಂದಿದ್ದೇವೆ. ಇಲಾಖೆ ಸಾಮಾನ್ಯ ವ್ಯಕ್ತಿಗಳ ಮೇಲೆ ಕೇಸು ಹಾಕಿ ಗಡಿಪಾರು ಮಾಡುವ ಕೆಲಸ ಮಾಡಿದರೆ ನಾವು ಹೋರಾಟ ಮಾಡಲು ಸಿದ್ದ. ಇದರ ಕುರಿತು ಇಲಾಖೆಯ ಮೇಲಾಧಿಕಾರಿಗಳು, ಗೃಹ ಸಚಿವರು ಪರಮೇಶ್ವರ್‌ರವರು ಯೋಚಿಸಿ ಸ್ಪಷ್ಟ ಸೂಚನೆ ನೀಡಬೇಕು.

ಸಂಘಟನೆ ಹಾಗೂ ಸಂಘಟನೆಯ ಕಾರ್ಯಕರ್ತರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದರೆ ಅದನ್ನು ಸ್ಪಷ್ಟಪಡಿಸಿ. ಅದನ್ನೂ ಎದುರಿಸಲು ನಾವು ಸಿದ್ದ. ಅಶಾಂತಿ, ರೌಡಿಸಂ ನಿಲ್ಲಿಸುವುದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ. ಆದರೆ ಸಂಘಟನೆಗೆ ಉತ್ತಮ ಕೆಲಸ ಮಾಡುವವರನ್ನು ಈ ರೀತಿಯಾಗಿ ಮಾಡಬಾರದು. ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆಯ ಮೇಲಾಧಿಕಾರಿ ಇದರ ಬಗ್ಗೆ ಗಮನಿಸಿ ಮುಂದೆ ಇಂತಹ ತಪ್ಪ ಕೆಲಸ ಮಾಡಬಾರದು ಎಂದು ಆಗ್ರಹಿಸಿದರು.

ಸಮಾಜದಲ್ಲಿ ಅಶಾಂತಿ ನಿಲ್ಲಿಸುವಲ್ಲಿ ಪೊಲೀಸ್ ಇಲಾಖೆ ಮಾಡುವ ಕೆಲಸಗಳಿಗೆ ನಮ್ಮ ಬೆಂಬಲವಿದೆ. ನಮ್ಮ ಸಂಘಟನೆ, ಸಮಾಜದ ರಾಷ್ಟ್ರಕ್ಕೆ ಪೂರಕವಾದ ಸಂಘಟನೆ, ಅದನ್ನು ಬಿಟ್ಟು ನಮ್ಮ ಸಂಘಟನೆ ಕಾರ್ಯಕರ್ತರು ಬೇರೆ ಕೆಲಸ ಮಾಡಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆ ಕಾನೂನು ಪಾಲನೆಗಾಗಿರುವುದು. ನಡೆದ ಘಟನೆಗಳಿಗೆ ಸಂಬಂಧಿಸಿ ಕೇಸು ದಾಖಲಿಸಲಿ. ಇದರ ಹೊರತಾಗಿ ಯಾವುದೇ ಘಟನೆಗಳು ನಡೆಯದೇ ಇದ್ದರೂ ಕೇಸು ದಾಖಲಿಸುವುದನ್ನು ನಾವು ಸಹಿಸುವುದಿಲ್ಲ ಎಂದು ಡಿವೈಎಸ್‌ಪಿಯವರ ವಿರುದ್ದ ಮುರಳಿ ಕೃಷ್ಣ ಆಕ್ರೋಷ ವ್ಯಕ್ತಪಡಿಸಿದರು.

ಗಡಿಪಾರು ಮಾಡಿರುವ ವಿಚಾರ್‍ಕಕೆ ಸಂಬಂಧಿಸಿ ನ.22ಕ್ಕೆ ವಿಚಾರಣೆ ಹಾಜರಾಗುವಂತೆ ಸಹಾಯಕ ಆಯುಕ್ತರಿಂದ ನೋಟೀಸ್ ಬಂದಿದೆ. ಈ ಘಟನೆಯ ಮೇಲೆ ವಕೀಲರ ಮೂಲಕ ಹೈಕೋಟ್‌ಗೆ ಅರ್ಜಿ ಸಲ್ಲಿಸಲಾಗುವುದು. ಗಡಿಪಾರು ಮಾಡಲು ಆಯಾ ಠಾಣಾ ವ್ಯಾಪ್ತಿಯವರು ಮಾಡಬೇಕು. ಆದರೆ ಈಗಾಗಲೇ ಗಡಿಪಾರಿಗೆ ಶಿಪಾರಸ್ಸು ಮಾಡಲಾದ ನಾಲ್ವರು ನಗರ ಠಾಣಾ ವ್ಯಾಪ್ತಿಯವರಲ್ಲ. ಅವರ ಮೇಲೆ ಯಾವುದೇ ಕೇಸುಗಳಿಲ್ಲ. ಅಪ್ರಾಪ್ತ ಬಾಲಕಿಗೆ ರಕ್ಷಣೆ ನೀಡಿದ ಮಾತ್ರ ಕಾರಣಕ್ಕೆ ಗಡಿಪಾರಿಗೆ ನೊಟೀಸ್ ನೀಡಲಾಗಿದೆ ಎಂದು ಮುರಳಿಕೃಷ್ಣ ಹಸಂತಡ್ಕ ಆರೋಪಿಸಿದರು.

ಈ ವೇಳೆ ಜಿಲ್ಲಾ ಸಹಕಾರ್ಯದರ್ಶಿ ಶ್ರೀಧರ ತೆಂಕಿಲ, ಗ್ರಾಮಾಂತರ ಪ್ರಖಂಡ ಸಂಚಾಲಕ ವಿಶಾಖ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *