
ವೃದ್ಧನ ವಯಸ್ಸನ್ನು 25 ವರ್ಷಕ್ಕೆ ಇಳಿಸಿದ ಸೂಪರ್ ಬ್ಲಡ್..! – ಹೀಗೂ ಆಗುತ್ತಾ..? ಈ ಫೋಟೋ ನೋಡಿ
- ಲೈಫ್ ಸ್ಟೈಲ್
- November 17, 2023
- No Comment
- 79
ನ್ಯೂಸ್ ಆ್ಯರೋ : ಜಗತ್ತಿನಲ್ಲಿ ಅದೆಷ್ಟೋ ಅಚ್ಚರಿಯ ಸಂಗತಿಗಳು, ಮಾನವ ನಿರ್ಮಿತ ವಿಸ್ಮಯಗಳು ನಡೆಯುತ್ತಲೇ ಇರುತ್ತದೆ. ಹೀಗೂ ಆಗುತ್ತಾ ಎಂದು ಮೂಗಿಗೆ ಕೈ ಇಟ್ಟು ನೋಡುವ ಸೋಜಿಗ ಸಂಗತಿಗಳು ನಮ್ಮ ವಿಜ್ಞಾನ ಲೋಕದಲ್ಲಿ ನಡೆಯುತ್ತಲೇ ಇರುತ್ತದೆ. ಅಂತಹುದೇ ಅಚ್ಚರಿಯ ಘಟನೆ ಇಲ್ಲೂ ಇದೆ…ನೋಡಿ.
ಸಾಫ್ಟ್‌ವೇರ್ ಬಿಲಿಯನೇರ್ ಬ್ರಿಯಾನ್ ಜಾನ್ಸನ್ ವಿಜ್ಞಾನಕ್ಕೆ ಸೆಡ್ಡು ಹೊಡೆಯುವ ಕಾರ್ಯವೊಂದರಲ್ಲಿ ಮಗ್ನರಾಗಿದ್ದಾರೆ. ತಮ್ಮ ವಯಸ್ಸನ್ನು ಕಡಿಮೆ ಮಾಡಿಕೊಳ್ಳುವ ಹೆಣಗಾಟದಲ್ಲಿರುವ ಬ್ರಿಯಾನ್ ಇದಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದಾರೆ. ತಮ್ಮ ನಿಜವಾದ ವಯಸ್ಸನ್ನು ಕಾಣದಂತೆ ಮಾಡಿ ತರುಣನಂತೆ ಕಾಣಿಸಿಕೊಳ್ಳಲು ಅವರು ಸತತವಾಗಿ ಶ್ರಮ ಪಡುತ್ತಿದ್ದಾರೆ. ಇದೀಗ ತನ್ನ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದು ಹೇಳಿಕೊಂಡಿರುವ ಬ್ರಿಯಾನ್ ತನ್ನ ತಂದೆಯ ಮೇಲೆ ತಾವು ನಡೆಸಿರುವ ಶೋಧನೆಯು ಅವರ ವಯಸ್ಸನ್ನು 25ವರ್ಷ ಕಡಿಮೆ ಮಾಡಿದೆ ಎಂದು ತಿಳಿಸಿದ್ದಾರೆ.
ತಂದೆಗೆ ರಕ್ತ ನೀಡಿದ ಪುತ್ರ ಬ್ರಿಯಾನ್..!
ತನ್ನ 71ವರ್ಷದ ತಂದೆ ಬ್ರಿಯಾನ್ ಜಾನ್ಸನ್ ನ 1 ಲೀಟರ್ ಪ್ಲಾಸ್ಮಾವನ್ನು ಪಡೆದುಕೊಂಡ ಬಳಿಕ 46ವರ್ಷದವರಂತೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಕೆಲವು ಇತಿಮಿತಿಗಳಿದ್ದು ಸ್ವಲ್ಪ ಏರುಪೇರು ಆದರೂ ಫಲಿತಾಂಶವೂ ಉಲ್ಟಪಲ್ಟ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಮಿಲಿಯನ್ ಗಟ್ಟಲೆ ಹಣ ಖರ್ಚು ಮಾಡುವ ಬಿಲಿಯನೇರ್..!
ತಮ್ಮ ಪುತ್ರನಿಂದ ಕೂಡ ಬ್ರಿಯಾನ್ ಪ್ಲಾಸ್ಮಾವನ್ನು ಪಡೆದುಕೊಂಡಿದ್ದು ಬಹುಶಃ ಅದುವೇ ಕಾರಣದಿಂದ ತಮ್ಮ ತಂದೆಯಲ್ಲಿ ಈ ರೀತಿ ಬದಲಾವಣೆ ಕಂಡುಬಂದಿರಬಹುದು ಎಂದು ಹೇಳಿಕೊಂಡಿದ್ದಾರೆ. ಈ ವೈದ್ಯಕೀಯ ರೋಗ ನಿರ್ಣಯ ಮತ್ತು ಚಿಕಿತ್ಸೆಗಳಿಗೆ ವರ್ಷಕ್ಕೆ $2 ಮಿಲಿಯನ್ ಖರ್ಚು ಮಾಡುತ್ತಾರೆ ಎಂಬ ಲೇಖನ ಪ್ರಕಟಿಸಿತ್ತು.
ಬ್ರಿಯಾನ್ ದಿನಚರಿ ಹೇಗಿದೆ..?
ತಾವು ಅನುಸರಿಸುತ್ತಿರುವ ದಿನಚರಿಯಿಂದ 18ರ ಹರೆಯದ ಶ್ವಾಸಕೋಶ ಹಾಗೂ ದೈಹಿಕ ಸಹಿಷ್ಣುತೆ, 37ರ ಹರೆಯದ ಹೃದಯ ಹಾಗೂ 28ರ ಹರೆಯದವರಿಗಿರುವ ಅದೇ ತ್ವಚೆಯನ್ನು ಪಡೆದುಕೊಂಡಿರುವುದಾಗಿ ಬ್ರಿಯಾನ್ ಹೇಳಿಕೊಂಡಿದ್ದಾರೆ.
ಇದಕ್ಕಾಗಿ ಕಠಿಣವಾಗಿ ಶ್ರಮಿಸುವ ಬ್ರಿಯಾನ್ ರಾತ್ರಿ 8.30ಕ್ಕೆ ಮಲಗುತ್ತಾರೆ. ದಿನವೊಂದಕ್ಕೆ 2250 ಕ್ಯಾಲೋರಿಗಳಷ್ಟು ಆಹಾರ ಸೇವಿಸುತ್ತಿದ್ದು ಬೆಳಿಗ್ಗೆ 6ರಿಂದ ಬೆಳಿಗ್ಗೆ 11 ರ ಒಳಗೆ ಆಹಾರ ಸೇವಿಸುತ್ತಾರೆ. ಯಾವುದೇ ದುರಾಭ್ಯಾಸಗಳಿಗೆ ಬ್ರಿಯಾನ್ ಬಲಿಯಾಗಿಲ್ಲ. ದಿನಕ್ಕೆ 111ಮಾತ್ರೆಗಳನ್ನು ವೈದ್ಯರ ಶಿಫಾರಸ್ಸಿನ ಮೇರೆಗೆ ಸೇವಿಸುತ್ತಾರೆ. ಅಷ್ಟೇ ಅಲ್ಲದೆ 30ವೈದ್ಯರ ತಂಡದ ಸಹಾಯದೊಂದಿಗೆ ದಿನಂಪ್ರತಿ ದೇಹದ ಕೊಬ್ಬಿನ ಸ್ಕ್ಯಾನ್ ಹಾಗೂ ಎಂಆರ್ ಐ ಸ್ಕ್ಯಾನಿಂಗ್ ಗೆ ಒಳಗಾಗುತ್ತಾರೆ.