ಬಂಟ್ವಾಳ : KSRTC ಬಸ್ ಏರಿದ ಮಹಿಳೆ ಚೀಲದಲ್ಲಿ ಬಾಂಬ್‌ ಇತ್ತಾ?‌ ಎಣ್ಣೆನಾ? – ಮಂಗಳೂರು-ಹಾಸನ ಬಸ್‌ ಪ್ರಯಾಣದ ವೇಳೆ ಆಗಿದ್ದೇನು?

ಬಂಟ್ವಾಳ : KSRTC ಬಸ್ ಏರಿದ ಮಹಿಳೆ ಚೀಲದಲ್ಲಿ ಬಾಂಬ್‌ ಇತ್ತಾ?‌ ಎಣ್ಣೆನಾ? – ಮಂಗಳೂರು-ಹಾಸನ ಬಸ್‌ ಪ್ರಯಾಣದ ವೇಳೆ ಆಗಿದ್ದೇನು?

ನ್ಯೂಸ್ ಆ್ಯರೋ‌ : ಸರಕು ಸಾಗಾಟಕ್ಕೆ ಸಂಬಂಧಿಸಿದಂತೆ ಬಿ.ಸಿ.ರೋಡಿನಲ್ಲಿ ಕೆಎಸ್ಸಾರ್ಟಿಸಿ ಪ್ರಯಾಣಿಕರ ಮಧ್ಯೆ ವಾಗ್ವಾದದ ಎರಡನೇ ಘಟನೆ ವರದಿಯಾಗಿದ್ದು, ರವಿವಾರ ಮಂಗಳೂರಿನಿಂದ ಹಾಸನಕ್ಕೆ ತೆರಳುವ ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ತೆಂಗಿನೆಣ್ಣೆ ತುಂಬಿದ ಕ್ಯಾನ್‌ಗಳ ಜತೆ ಪ್ರಯಾಣಿಸುತ್ತಿದ್ದಾರೆ ಎಂದು ನಿರ್ವಾಹಕ ಇಳಿಸಿ ವಾಗ್ವಾದ ನಡೆಸಿದ್ದು, ಬಳಿಕ ಪೊಲೀಸರ ಮಾತುಕತೆಯಿಂದ ಮಹಿಳೆ ಅದೇ ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ‌.

ರವಿವಾರ ಹಾಸನಕ್ಕೆ ತೆರಳುವ ಬಸ್ಸಿಗೆ ಮಂಗಳೂರಿನಲ್ಲಿ ಚೀಲವೊಂದನ್ನು ಹಿಡಿದು ಮಹಿಳೆ ಹತ್ತಿದ್ದರು. ನಿರ್ವಾಹಕ ಟಿಕೆಟ್‌ ನೀಡುವ ವೇಳೆ ಚೀಲದಲ್ಲೇನು ಎಂದು ಪ್ರಶ್ನಿಸಿದಾಗ ಮಹಿಳೆ ವ್ಯಂಗ್ಯವಾಗಿ ಬಾಂಬ್‌ ಎಂದು ಉತ್ತರಿಸಿದ್ದಾರೆ.

ನಿರ್ವಾಹಕ ಚೀಲವನ್ನು ಪರಿಶೀಲಿಸಿದಾಗ ಮೂರು ಕ್ಯಾನ್‌ ತೆಂಗಿನೆಣ್ಣೆ ಕಂಡುಬಂದಿದೆ. ಈ ವೇಳೆ ಯಾವುದೇ ರೀತಿಯ ಎಣ್ಣೆಯನ್ನು ಬಸ್ಸಿನಲ್ಲಿ ಸಾಗಿಸುವಂತಿಲ್ಲ ಎಂದು ತಗಾದೆ ತೆಗೆದಿದ್ದು, ಈ ವೇಳೆ ನಿರ್ವಾಹಕ-ಮಹಿಳೆಗೆ ಬಿ.ಸಿ.ರೋಡಿನವರೆಗೂ ವಾಗ್ವಾದ ನಡೆದಿದೆ.

ಬಿ.ಸಿ.ರೋಡು ನಿಲ್ದಾಣದಲ್ಲಿ ಮಹಿಳೆ ಟ್ರಾಫಿಕ್‌ ಪೊಲೀಸ್‌ ಸಿಬಂದಿ ಬಳಿ ಘಟನೆಯನ್ನು ವಿವರಿಸಿದ ಬಳಕ ಅವರು ಈ ವಿಚಾರವನ್ನು ನಗರ ಠಾಣಾ ಪಿಎಸ್‌ಐ ಗಮನಕ್ಕೆ ತಂದರು. ನಾವು ಸಂಸ್ಥೆಯ ನಿಯಮ ಪಾಲಿಸುತ್ತಿದ್ದು, ನಿಯಮ ದ ಪ್ರಕಾರ ಎಣ್ಣೆ ಸಾಗಿಸುವಂತಿಲ್ಲ, ಜತೆಗೆ ಮಹಿಳೆ ಕೇಳಿದಾಗ ಬಾಂಬ್‌ ಎಂಬ ಉತ್ತರ ನೀಡಿದ್ದಾರೆ ಎಂದು ನಿರ್ವಾಹಕ ವಿವರಿಸಿದ್ದಾರೆ.

ನಿರ್ವಾಹಕ ಎಣ್ಣೆ ಎಂದು ಗೊತ್ತಿದ್ದರೂ, ಮತ್ತೆ ಅದನ್ನು ಏನು ಎಂದು ಪ್ರಶ್ನಿಸಿರುವುದಕ್ಕೆ ಬಾಂಬ್‌ ಎಂಬ ಉತ್ತರ ನೀಡಿದ್ದೇನೆ ಎಂದು ಮಹಿಳೆ ಸ್ಪಷ್ಟನೆ ನೀಡಿದರು. ಬಳಿಕ ಪಿಎಸ್‌ಐಯವರು ನಿರ್ವಾಹಕರ ಮನವೊಲಿಸಿ ಮಹಿಳೆಯು ಅದೇ ಬಸ್ಸಿನಲ್ಲಿ ಪ್ರಯಾಣಿಸುವ ವ್ಯವಸ್ಥೆ ಕಲ್ಪಿಸಿದರು.

Related post

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಆರೋಗ್ಯ ಪರಿಪೂರ್ಣವಾಗಿರುತ್ತದೆ. ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯುವ ಕಾರಣದಿಂದಾಗಿ ಇಂದು ನೀವು ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ನಿಮ್ಮ ಕುಟುಂಬದೊಂದಿಗೆ…
ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…

Leave a Reply

Your email address will not be published. Required fields are marked *