ಸುಬ್ರಹ್ಮಣ್ಯ : ಕೃಷಿ ಉತ್ಪನ್ನ ಖರೀದಿಸಿ ಹಣ ಕೊಡದೇ ಐದು ಲಕ್ಷಕ್ಕೂ ಅಧಿಕ ವಂಚನೆ – ಹಣ ಮರುಪಾವತಿಸುವಂತೆ ತಪ್ಪಿದಲ್ಲಿ ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು

ಸುಬ್ರಹ್ಮಣ್ಯ : ಕೃಷಿ ಉತ್ಪನ್ನ ಖರೀದಿಸಿ ಹಣ ಕೊಡದೇ ಐದು ಲಕ್ಷಕ್ಕೂ ಅಧಿಕ ವಂಚನೆ – ಹಣ ಮರುಪಾವತಿಸುವಂತೆ ತಪ್ಪಿದಲ್ಲಿ ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು

ನ್ಯೂಸ್ ಆ್ಯರೋ : ಕೃಷಿ ಉತ್ಪನ್ನ ವ್ಯಾಪಾರ ವ್ಯವಹಾರಕ್ಕೆ ಸಂಬಂದಿಸಿದಂತೆ ಪಡೆದ ಹಣ ನೀಡದೆ ವಂಚಿಸಿದ್ದಲ್ಲದೆ ಕೊಟ್ಟ ಚೆಕ್ ಕೂಡ ಬೌನ್ಸ್ ಆದ ಪ್ರಕರಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮೂಲದ ಟಿ.ಎಸ್ ಶ್ರೀನಾಥ್ ಎಂಬವರಿಗೆ ಹಣ ಮರು ಪಾವತಿಸುವಂತೆ ಆದೇಶಿಸಿದ್ದು ಇದಕ್ಕೆ ತಪ್ಪಿದಲ್ಲಿ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ಚಿಕ್ಕಮಗಳೂರು ಜೆಎಂಎಸಿ ನ್ಯಾಯಾಲಯ ನ.22 ರಂದು ತೀರ್ಪು ನೀಡಿದೆ.

ಕಡಬ ತಾಲೂಕು ಕುಲ್ಕುಂದ ನಿವಾಸಿ ಲಕ್ಷ್ಮಿ ನಿವಾಸದ ಟಿ.ಎಸ್ ಶ್ರೀನಾಥ್ ಎಂಬಾತ ಚಿಕ್ಕಮಗಳೂರು ಗೌರಿಕಲ್ವೆ ನಿವಾಸಿ ಕೃಷಿಕ ಕೆ. ಸುರಕ್ಷಾ( 37) ಎಂಬವರ ಜೊತೆ ವ್ಯವಹಾರ ಹೊಂದಿದ್ದರು.

ವ್ಯಾಪಾರದ ದುಡ್ಡು ಕೊಡುವ- ಪಡೆಯುವ ವೇಳೆ ಪ್ರತಿಯಾಗಿ ಶ್ರೀನಾಥ್ ಚೆಕ್ ಅನ್ನು ದೂರುದಾರರಿಗೆ ನೀಡಿದ್ದು ಬಳಿಕ ಖಾತೆ ಬರಿದಾಗಿ ಚೆಕ್ ಬೌನ್ಸ್ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ಯಾಯಕ್ಕೆ ಒಳಗಾದ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿದ್ದರು.

C C 782/2021 ಪ್ರಕರಣ ಸಂಬಂಧ ನ.22ರಂದು ಚಿಕ್ಕಮಗಳೂರು ಸಿವಿಲ್ ಜಡ್ಜ್ ಮತ್ತು ಐಎಂಎಪ್ ಸಿ ಕೋರ್ಟ್ ತೀರ್ಪು ಪ್ರಕಟಿಸಿದ್ದು, ತೀರ್ಪಿನಲ್ಲಿ ಎಸ್.ಶ್ರೀನಾಥ್ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಕಲಂ 255 ( 2 ) ರ ಅಡಿಯಲ್ಲಿ ಕಾರ್ಯನಿರ್ವಹಿಸಿ, ಆರೋಪಿಯನ್ನು ಈ ಮೂಲಕ ಅಪರಾಧ 1 ನೇ ಕಲಂ 3 ರ ಅಪರಾಧಕ್ಕಾಗಿ ಶಿಕ್ಷೆಗೆ ಗುರಿಪಡಿಸಲಾಗಿದೆ.

NI ಆಕ್ಟ್ 1881 ಪ್ರಕಾರ ಆರೋಪಿಗೆ ರೂ. 5,18,100/( ಆರು ಲಕ್ಷ ಹತ್ತು ಸಾವಿರ ರೂಪಾಯಿಗಳು ಮಾತ್ರ) ದಂಡವನ್ನು ಪಾವತಿಸಲು ಈ ಮೂಲಕ ತೀರ್ಪಿನಲ್ಲಿ ತಿಳಿಸಲಾಗಿದೆ. ತಪ್ಪಿದಲ್ಲಿ ಆರೋಪಿಯು ಮೂರು ತಿಂಗಳ ಅವಧಿಗೆ ಸರಳ ಜೈಲು ಶಿಕ್ಷೆಗೆ ಗುರಿಪಡಿಸುವಂತೆ ಸೂಚಿಸಿದೆ.

ಮೇಲ್ಕಂಡ ದಂಡದ ಮೊತ್ತದಲ್ಲಿ Cr.P.C ಯ ಸೆಕ್ಷನ್ 357 ( 3 ) ಅಡಿಯಲ್ಲಿ ಆರೋಪಿಯು ರೂ. 5,08,100 / – ಪರಿಹಾರದ ಮೂಲಕ ದೂರುದಾರರಿಗೆ ಪಾವತಿಸಬೇಕು ಮತ್ತು ಉಳಿದ ರೂ 10,000 / – ಅನ್ನು ರಾಜ್ಯಕ್ಕೆ ಪಾವತಿಸಬೇಕು. ಹಾಗೆಯೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಬಾಂಡ್ ಮತ್ತು ಜಾಮೀನು ಬಾಂಡ್ ಅನ್ನು ರದ್ದುಗೊಳಿಸಿ ಕೋರ್ಟ್ ತೀರ್ಪು ಪ್ರಕಟಿಸಿದೆ.

ದೂರುದಾರರ ಪರವಾಗಿ ನ್ಯಾಯವಾದಿ ದೇವೆಂದರ್ ಕುಮಾರ್ ಜೈನ್ ವಾದಿಸಿದ್ದು ಶಿಕ್ಷೆಗೊಳಗಾದ ವ್ಯಕ್ತಿಯ ನ್ಯಾಯವಾದಿ ಕೆ. ಆರ್. ಪ್ರಶಾಂತ್ ಪ್ರತಿವಾದಿಯಾಗಿದ್ದರು. ಟಿ.ಎಸ್… ಶ್ರೀನಾಥ್ ಕೆಲ ಸಮಯದ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರನ್ನು ದಾರಿ ತಪ್ಪಿಸಿದ ಬಗ್ಗೆಯೂ ದೂರುಗಳು, ಆರೋಪಗಳು ಕೇಳಿ ಬಂದಿದ್ದವು ಎಂದು ಮೂಲಗಳು ತಿಳಿಸಿವೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *