Indian pacer Navdeep Saini marries his girlfriend Swati Asthana

ದಾಂಪತ್ಯ ಜೀವನಕ್ಕೆ ಕಾಲಿಟ್ರು ನೋಡಿ ಟೀಂ ಇಂಡಿಯಾ ವೇಗಿ ನವದೀಪ್ ಸೈನಿ – ಸ್ಟಾರ್ ವೇಗಿಯ ಕೈ ಹಿಡಿಯಲಿರುವ ಕುವರಿ ಯಾರು ಗೊತ್ತಾ?

ನ್ಯೂಸ್ ಆ್ಯರೋ : ನಮಗೆಲ್ಲರಿಗೂ ಸಿನಿಮಾ ರಂಗದಲ್ಲಿ ಅದು ಹೇಗೆ ಇಷ್ಟದ ನಟ ಅಥವಾ ನಟಿಯರು ಅಂತ ಒಬ್ಬರಿರುತ್ತಾರೋ ಅದೇ ರೀತಿ ಕ್ರಿಕೆಟ್ ಲೋಕದಲ್ಲಿ ಕೂಡಾ ನಮ್ಮಿಷ್ಟದ ಬೌಲರ್ಸ್ ಅಥವಾ ಬ್ಯಾಟಿಂಗ್ ಮಾಡುವ ಕ್ರಿಕೆಟಿಗ ಇದ್ದೇ ಇರುತ್ತಾರೆ. ಅವರ ವೈಯಕ್ತಿಕ ಬದುಕಿನಲ್ಲೂ ನಡೆಯುವ ಅನೇಕ ರೀತಿಯ ಬದಲಾವಣೆಗಳನ್ನು ತಿಳಿದುಕೊಳ್ಳಲು ನಾವು ಕೂಡಾ ಉತ್ಸಾಹದಿಂದಲೇ ಕಾಯುತ್ತಿರುತ್ತೇವೆ. ಇದೀಗ ಭಾರತದ ಮತ್ತೊಬ್ಬ ಕ್ರಿಕೆಟಿಗ ಕೂಡಾ ಜಂಟಿಯಾಗಲು ನಿರ್ಧರಿಸಿದ್ದಾರೆ. ಅರ್ಥಾತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಯಾರು..? ಮತ್ತು ಅವರು ಕೈ ಹಿಡಿದಿರುವ ಆ ಕುವರಿ ಯಾರು ಗೊತ್ತಾ ಇಲ್ಲಿ ನೋಡಿ..

ಭಾರತದ ವೇಗದ ಬೌಲರ್ ನವ್‌ದೀಪ್ ಸೈನಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೈರ್ಯಾಣದಲ್ಲಿ ಹುಟ್ಟಿ ಬೆಳೆದಿರುವ ಅವರು 2019ರಲ್ಲಿ ಭಾರತ ತಂಡದ ಪರವಾಗಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದೀಗ ಅವರು ತಮ್ಮ 30ನೇ ಹರೆಯದಲ್ಲಿ ಸುದೀರ್ಘ ಕಾಲದ ಗೆಳತಿ ಸ್ವಾತಿ ಅಸ್ಥಾನ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸ್ವಾತಿ ಅಸ್ಥಾನ ಯಾರು..?

ಸ್ವಾತಿ ಅಸ್ಥಾನ ವ್ಲಾಗರ್ ಆಗಿದ್ದು ಫ್ಯಾಶನ್, ಟ್ರಾವೆಲ್ ಹಾಗೂ ಲೈಫ್‌ಸ್ಟೈಲ್ ವಿಭಾಗದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಅವರ ಸಾಮಾಜಿಕ ಜಾಲತಾಣದ ಖಾತೆಯ ಪೋಸ್ಟ್‌ಗಳನ್ನು ನೋಡಿದಾಗಲೇ ಸಾಕಷ್ಟು ವಿಭಿನ್ನ ವಿಚಾರಗಳ ಬಗ್ಗೆ ಆಸಕ್ತರಾಗಿರುವುದರ ಬಗ್ಗೆ ಗೊತ್ತಾಗುತ್ತದೆ.

https://www.instagram.com/p/Cz_-ybrP3hl/?utm_source=ig_web_button_share_sheet

ವೇಗಿ ಸೈನಿ ಅವರ ಕ್ರೀಡೆಯ ಬಗ್ಗೆ ನೋಡೋದಾದರೆ:

ಇನ್ನು ವೇಗಿ ಸೈನಿ ತೀರಾ ಇತ್ತೀಚೆಗೆ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) ನಲ್ಲಿ ಕಾಣಿಸಿಕೊಂಡಿದ್ದಾರೆ. ದೆಹಲಿ ಪರವಾಗಿ ಆಡುವ ಸೈನಿ ಸೆಮಿ-ಫೈನಲ್‌ನಲ್ಲಿ ಪಂಜಾಬ್ ವಿರುದ್ಧ ಸೋಲಿನ ರುಚಿ ಅನುಭವಿಸುವ ಮೂಲಕ ನಿರಾಸೆ ಕಂಡಿದ್ದರು. ಈ ಪಂದ್ಯದಲ್ಲಿ ಸೈನಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದರು. ಈ ಟೂರ್ನಿಯಲ್ಲಿ ಸೈನಿ ಏಳು ಪಂದ್ಯಗಳಲ್ಲಿ ಕೇವಲ ನಾಲ್ಕು ವಿಕೆಟ್‌ಗಳನ್ನು ಪಡೆಯುವಲ್ಲಿ ಮಾತ್ರವೇ ಯಶಸ್ವಿಯಾದರು.

ನವ್ ದೀಪ್ ಸೈನಿ ಇನ್ಸ್ಟ್ರಾಗ್ರಾಂನಲ್ಲಿ ಏನೆಂದು ಪೋಸ್ಟ್ ಹಾಕಿದ್ದಾರೆ..?

ನವ್‌ದೀಪ್ ಸೈನಿ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. “ನಿನ್ನ ಜೊತೆಗೆ ಪ್ರತಿ ದಿನವೂ ಪ್ರೀತಿಯ ದಿನ. ಇಂದು ನಾವು ಎಂದೆಂದಿಗೂ ಜೊತೆಯಾಗಿರಲು ನಿರ್ಧರಿಸಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ಬಯಸುತ್ತಿದ್ದೇನೆ. ನಮ್ಮ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ” ಎಂದು ನವ್‌ದೀಪ್ ಸೈನಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಹೊಸದಾಗಿ ವಿವಾಹ ಜೀವನವನ್ನು ಆರಂಭಿಸಿದ ಈ ಕ್ರಿಕೆಟ್ ಸ್ಟಾರ್ ಜೋಡಿಗೆ ಅನೇಕ ಸೆಲೆಬ್ರೆಟಿಗಳು, ಕ್ರಿಕೆಟ್ ಆಟಗಾರರು, ಸ್ನೇಹಿತರು ಶುಭಾಶಯ ಕೋರಿದ್ದಾರೆ.