ಐಬಿಪಿಎಸ್‌ ನಿಂದ 4 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ನೇಮಕಾತಿ – ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಆಗಸ್ಟ್ 28 ಕೊನೆ ದಿನ

ಐಬಿಪಿಎಸ್‌ ನಿಂದ 4 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ನೇಮಕಾತಿ – ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಆಗಸ್ಟ್ 28 ಕೊನೆ ದಿನ

ನ್ಯೂಸ್ ‌ಆ್ಯರೋ : ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು 2024-25 ನೇ ಸಾಲಿಗೆ ರಾಷ್ಟ್ರದ ವಿವಿಧ ಬ್ಯಾಂಕ್‌ಗಳಲ್ಲಿ ಪಿಒ, ಎಂಟಿ, ಎಸ್‌ಒ ಹುದ್ದೆಗಳ ನೇಮಕಾತಿ ಸಂಬಂಧ, 4451 ಹುದ್ದೆಗಳಿಗೆ ಪರೀಕ್ಷೆ ನಡೆಸಲು ಇತ್ತೀಚೆಗೆ ಅಧಿಸೂಚನೆ ಹೊರಡಿಸಿತ್ತು. ಸದರಿ ಪರೀಕ್ಷೆ ತೆಗೆದುಕೊಳ್ಳಲು ಆನ್‌ಲೈನ್‌ ರಿಜಿಸ್ಟ್ರೇಷನ್‌ಗೆ ಆಗಸ್ಟ್‌ 28 ಕೊನೆ ದಿನವಾಗಿದೆ.

ಐಬಿಪಿಎಸ್‌ ಎಸ್ಒ, ಪಿಒ / ಮಾನೇಜ್ಮೆಂಟ್‌ ಟ್ರೈನಿ ಹುದ್ದೆಗಳಿಗೆ ಮುಂದಿನ ಸೆಪ್ಟೆಂಬರ್ ಹಾಗೂ ಅಕ್ಟೋಬರ್ 2023 ಮತ್ತು ನವೆಂಬರ್ 2023 ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಿದೆ. ಹುದ್ದೆಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಎಷ್ಟು ಹುದ್ದೆಗಳು ಖಾಲಿ ಇದೆ ?

ಒಟ್ಟು 4451 ಹುದ್ದೆಗಳು ಖಾಲಿ ಇದ್ದು, ಪ್ರೊಬೇಷನರಿ ಆಫೀಸರ್ ಹಾಗೂ ಮ್ಯಾನೇಜ್ಮೆಂಟ್‌ ಟ್ರೈನಿ ವಿಭಾಗದಲ್ಲಿ 3049 ಹಾಗೂ ಸ್ಪೆಷಲಿಸ್ಟ್‌ ಆಫೀಸರ್ ಕೇಡರ್ ವಿಭಾಗದಲ್ಲಿ 1402 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ವಯೋಮಿತಿ ಸಡಿಲಿಕೆ:

OBC (NCL) ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PWBD ಅಭ್ಯರ್ಥಿಗಳು: 10 ವರ್ಷಗಳು

ಅರ್ಜಿ ಶುಲ್ಕ:

SC/ST/PwBD ಅಭ್ಯರ್ಥಿಗಳು: ರೂ.175/-
ಎಲ್ಲಾ ಇತರ ಅಭ್ಯರ್ಥಿಗಳು: ರೂ.850/-
ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:

ಪೂರ್ವಭಾವಿ ಪರೀಕ್ಷೆ
ಮುಖ್ಯ ಪರೀಕ್ಷೆ
ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ..?

ಮೊದಲನೆಯದಾಗಿ ಐಬಿಪಿಎಸ್ ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ತೀಳಿದುಕೊಳ್ಳಿ.

ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
ಐಬಿಪಿಎಸ್ ಸ್ಪೆಷಲಿಸ್ಟ್ ಆಫೀಸರ್ ಮೇಲೆ ಕ್ಲಿಕ್ ಮಾಡಿ, PO ಆನ್‌ಲೈನ್‌ನಲ್ಲಿ ಅನ್ವಯಿಸಿ – ಕೆಳಗೆ ನೀಡಲಾಗಿದೆ ಲಿಂಕ್.

ಐಬಿಪಿಎಸ್ ಆನ್‌ಲೈನ್ ಅರ್ಜಿ

ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)

IBPS ನೇಮಕಾತಿ 2023 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ. ಹೆಚ್ಚಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಅತ್ಯಂತ ಮುಖ್ಯವಾಗಿ ಕ್ಯಾಪ್ಚರ್ ಮಾಡಿ.

ಇನ್ನು ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಆಗಸ್ಟ್ 28 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ibps.in
ಗೆ ಭೇಟಿ ನೀಡಿ.

Related post

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು…

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ…
ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!! – ಕೋಟ್ಯಾಂತರ ರೂಪಾಯಿ ಒಡೆಯ ಈ ತಾತ ಮಾಡೋದೇನು?

ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!!…

ನ್ಯೂಸ್ ಆ್ಯರೋ : ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ.…
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ ಮೇಲೆ ಕಾಳಜಿ ಇರುವವರು ಈ ವರದಿ ಓದಿ..

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ…

ನ್ಯೂಸ್ ಆ್ಯರೋ : ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು…

Leave a Reply

Your email address will not be published. Required fields are marked *