
ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಸೃಷ್ಟಿಸಿದ ಗದರ್ 2 & ಜೈಲರ್ – ಎರಡು ಚಿತ್ರಗಳು ಗಳಿಸಿದ್ದೆಷ್ಟು ಕೋಟಿ ರೂಪಾಯಿ ಗೊತ್ತಾ?
- ಮನರಂಜನೆ
- August 25, 2023
- No Comment
- 65
ನ್ಯೂಸ್ ಆ್ಯರೋ : ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ಬಹುದಿನಗಳ ಕನಸೊಂದು ನನಸಾಗಿದೆ. ಹಲವು ಸಮಯದಿಂದ ಒಂದು ಸಕ್ಸಸ್ ಬೇಕೆಂದು ಸನ್ನಿ ಡಿಯೋಲ್ ಕನಸು ಕಟ್ಟಿಕೊಂಡಿದ್ದರು. ಇದೀಗ ಅದು ‘ಗದರ್ 2’ ರೂಪದಲ್ಲಿ ನನಸಾಗಿದೆ. ತಮ್ಮ 66ನೇ ವಯಸ್ಸಿನಲ್ಲಿ ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಸುನಾಮಿ ಎಬ್ಬಿಸಿದ್ದಾರೆ. ‘ಗದರ್ 2’ ಬಾಕ್ಸ್ ಆಫೀಸ್ ಕಲೆಕ್ಷನ್ ನೋಡಿ ಇಡೀ ಬಾಲಿವುಡ್ ಬಾಯಿ ಮೇಲೆ ಬೆರಳಿಟ್ಟುಕೊಂಡಿದೆ.
ಸುಮಾರು 70-80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ‘ಗದರ್ 2’ ಸಿನಿಮಾದ ಒಟ್ಟು ಕಲೆಕ್ಷನ್ ಸದ್ಯ 410 ಕೋಟಿ ರೂ ದಾಟಿದ್ದು, ಭಾರತದಲ್ಲಿ ಬಿಡುಗಡೆಯಾದ ಎರಡೇ ದಿನಗಳಿಗೆ 83.18 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
ಅಲ್ಲದೇ ಮೊದಲ ದಿನ ಅತೀ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಪೈಕಿ ‘ಗದರ್ 2’ ಸಿನಿಮಾಗೆ ಎರಡನೇ ಸ್ಥಾನ ಸಿಕ್ಕಿದ್ದು, ಒಟ್ಟಾರೆಯಾಗಿ ಸನ್ನಿ ಡಿಯೋಲ್ ಸಿನಿಮಾದ ಕಲೆಕ್ಷನ್ ಎಲ್ಲರನ್ನು ದಂಗುಬಡಿಸಿದೆ. ಅಷ್ಟೇನೂ ನಿರೀಕ್ಷೆ ಹುಟ್ಟಿಸಿರದ ‘ಗದರ್ 2’ಗೆ ಈ ಪ್ರಮಾಣದ ಕಲೆಕ್ಷನ್ ಆಗಿದ್ದರ ಬಗ್ಗೆ ಎಲ್ಲರಲ್ಲೂ ಆಶ್ಚರ್ಯ ಇದೆ. ಅಂದಹಾಗೆ, 2001ರಲ್ಲಿ ‘ಗದರ್’ ಸಿನಿಮಾವನ್ನು ನಿರ್ದೇಶಿಸಿದ್ದ ಅನಿಲ್ ಶರ್ಮಾ ಅವರೇ ಈಗ ‘ಗದರ್ 2’ ಸಿನಿಮಾಗೆ ಆಕ್ಷನ್-ಕಟ್ ಹೇಳಿದ್ದಾರೆ. ಅವರಿಗೂ ಕೂಡ ಬಹಳ ದಿನಗಳ ನಂತರ ಒಂದು ಬಿಗ್ ಸಕ್ಸಸ್ ಸಿಕ್ಕಿದೆ.
ಜೈಲರ್
ಇತ್ತ ನಟ ರಜನಿಕಾಂತ್ ಅವರ ಅಭಿನಯದ ‘ಜೈಲರ್’ ಸಿನಿಮಾ ಕೂಡ ಬಾಕ್ಗಸ್ ಆಫೀಸ್ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಆಗಸ್ಟ್ 10ರಂದು ಬಿಡುಗಡೆ ಆದ ಈ ಸಿನಿಮಾ ವಿಶ್ವಾದ್ಯಂತ ಈ ಚಿತ್ರಕ್ಕೆ 550 ಕೋಟಿ ರೂ ಕಮಾಯಿ ಮಾಡಿದೆ. ಭಾರತದಲ್ಲಿ 300 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದ್ದು, ಬೇರೆ ಸಿನಿಮಾಗಳ ಪೈಪೋಟಿ ನಡುವೆಯೂ ‘ಜೈಲರ್’ ಸಿನಿಮಾ ಅಬ್ಬರಿಸಿದೆ.
ತಮಿಳನ ಖ್ಯಾತ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ‘ಜೈಲರ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದು, ‘ಜೈಲರ್’ ಸಿನಿಮಾ ಮೂಲಕ ನೆಲ್ಸನ್ ಭರ್ಜರಿ ಹಿಟ್ ನೀಡಿದ್ದಾರೆ. ಇದರಿಂದ ಅವರಿಗೆ ಇದ್ದ ಬೇಡಿಕೆ ಹೆಚ್ಚಾಗಿದ್ದು, ಅವರ ಮುಂಬರುವ ಸಿನಿಮಾಗಳ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ.
ಅಲ್ಲದೇ ‘ಜೈಲರ್’ ಗೆದ್ದ ಬಳಿಕ ರಜನಿಕಾಂತ್ ಅವರ ಡಿಮ್ಯಾಂಡ್ ಕೂಡ ಡಬಲ್ ಆಗಿದ್ದು, ರಮ್ಯಾ ಕೃಷ್ಣನ್, ಶಿವರಾಜ್ ಕುಮಾರ್, ಮೋಹನ್ಲಾಲ್, ಜಾಕಿ ಶ್ರಾಫ್ ಮುಂತಾದ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.