ಗ್ರಾಹಕರಿಗೆ ಹೊಚ್ಚ ಹೊಸ 3 ತಿಂಗಳ ಪ್ಲಾನ್ ಕೊಟ್ಟ ಜಿಯೋ; ಈ ಯೋಜನೆಗಾಗಿ ಎಷ್ಟು ಹಣ ರೀಚಾರ್ಜ್ ಮಾಡಬೇಕು?
ನ್ಯೂಸ್ ಆ್ಯರೋ: ಪ್ರಸ್ತುತ ಭಾರತದ ಜಿಯೋ ಎಲ್ಲರ ಮನೆ ಮಾತಾಗಿದೆ. ಇತ್ತೀಚೆಗೆ ಎಲ್ಲ ರಿಚಾರ್ಜ್ ಬೆಲೆ ಹೆಚ್ಚು ಮಾಡಿದ ಹಿನ್ನೆಲೆಯಲ್ಲಿ ಗ್ರಾಹಕರು ಜಿಯೋ ತೊರೆದು ಬೇರೆ ನೆಟ್‌ವರ್ಕ್‌ಗೆ ಹೋಗುತ್ತಿದ್ದಾರೆ. ಇದೀಗ ಜಿಯೋ ತನ್ನ ಲಕ್ಷಾಂತರ ಬಳಕೆದಾರರಿಗೆ ಅತ್ಯಾಕರ್ಷಕ ರೀಚಾರ್ಜ್ ಯೋಜನೆ ಪರಿಚಯಿಸಿದೆ. ದೀರ್ಘವಾದ ವ್ಯಾಲಿಡಿಟಿ ಪ್ಯಾಕೇಜ್ ಹುಡುಕುತ್ತಿದ್ದರೇ ಅದಕ್ಕೆ ಈ ರೀಚಾರ್ಜ್ ಮಾಡಿಸಿಕೊಂಡರೆ ಉತ್ತಮ.
ಗ್ರಾಹಕರಿಗೆ ಉತ್ತಮ ಮೌಲ್ಯ ಹಾಗೂ ಅನುಕೂಲಕರವಾದ 90 ದಿನ ಅಂದರೆ 3 ತಿಂಗಳ ಜನಪ್ರಿಯ ಯೋಜನೆ ಪರಿಚಯಿಸಿದೆ. ಜಿಯೋ ತನ್ನ ರೀಚಾರ್ಜ್ ಬೆಲೆಗಳನ್ನು ಹೆಚ್ಚಿಗೆ ಮಾಡಿದ ಮೇಲೆ ಗ್ರಾಹಕರು ಏರ್ಟೆಲ್, ಬಿಎಸ್ಎನ್ಎಲ್ ಸೇರಿದಂತೆ ಬೇರೆ ಬೇರೆ ನೆಟ್‌ವರ್ಕ್‌ಗೆ ಜಂಪ್ ಆಗಿದ್ದರು. ಹೀಗಾಗಿ ಗ್ರಾಹಕರನ್ನು ಸೆಳೆಯುವುದಕ್ಕಾಗಿ ಜಿಯೋ ಹೊಸ ಪ್ಲಾನ್ ಅನ್ನು ಜಾರಿ ಮಾಡಿದೆ. ಕೇವಲ 899 ರೂಪಾಯಿ ಪ್ಲಾನ್ ಇದಾಗಿದೆ.
899 ರೂಪಾಯಿ ರೀಚಾರ್ಜ್ ಮಾಡಿಕೊಂಡರೇ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳನ್ನು 90 ದಿನಗಳವರೆಗೆ ಉಚಿತವಾಗಿ ಮಾಡಬಹುದು. ಒಂದು ದಿನಕ್ಕೆ 100 ಎಸ್ಎಂಎಸ್ಗಳು ಉಚಿತವಾಗಿ ಮಾಡಬಹುದು. ಇದರ ಜೊತೆಗೆ ಪ್ರತಿದಿನ 2GB ಹೈಸ್ಪೀಡ್ ಇಂಟರ್ನೆಟ್ ಬಳಕೆ ಮಾಡಬಹುದು. 90 ದಿನಕ್ಕೆ ಒಟ್ಟು 180 GB ಹೈಸ್ಪೀಡ್ ಇಂಟರ್ನೆಟ್ ಅನ್ನು ಗ್ರಾಹಕರು ಉಪಯೋಗಿಸಬಹುದು. ಅಲ್ಲದೇ ಜಿಯೋದ ಮನರಂಜನಾ ಅಪ್ಲಿಕೇಶನ್, ಸೇವೆಗಳನ್ನು ಉಚಿತ ಪ್ರವೇಶ ಪಡೆಯಬಹುದಾಗಿದೆ.
ಕೈಗೆಟುಕುವ ಬೆಲೆಯಲ್ಲಿ ತಡೆರಹಿತ ಇಂಟರ್ನೆಟ್ ಮತ್ತು ಕರೆ ಸೇವೆ ಹುಡುಕುವ ಗ್ರಾಹಕರಿಗೆ ಈ ಪ್ಲಾನ್ ವರ್ಕ್ ಆಗುತ್ತದೆ. 899 ರೂಪಾಯಿ ರೀಚಾರ್ಜ್ ಮಾಡುವ ಮೂಲಕ, ಜಿಯೋ ಬಳಕೆದಾರರು ಹೆಚ್ಚಿನ ವೇಗದ ಡೇಟಾ, ಮೂರು ತಿಂಗಳ ತಡೆರಹಿತ ಸಂಪರ್ಕ ಆನಂದಿಸಬಹುದು. ಇದು ಇಷ್ಟವಾಗಿದ್ದರೆ ಈ ಕ್ಷಣವೇ ಇದನ್ನು ಬಳಕೆ ಮಾಡಿಕೊಳ್ಳಿ.
Leave a Comment