ಕೆಎಸ್‌ಆರ್‌ಟಿಸಿಯಲ್ಲಿ ಡಿಜಿಟಲ್ ಪೇಮೆಂಟ್; ಯುಪಿಐ ಮೂಲಕ ಟಿಕೆಟ್!
ನ್ಯೂಸ್ ಆ್ಯರೋ: ಕರ್ನಾಟಕದ ನರನಾಡಿಯಾಗಿ ಸಂಚಾರ ಮಾಡುವ ನಾಡಿನ ಹೆಮ್ಮೆಯ ಕರ್ನಾಟಕ ಸಾರಿಗೆ ಬಸ್ ಕೆಎಸ್‌ಆರ್‌ಟಿಸಿ ಯಲ್ಲಿ ಡಿಜಿಟಲೀಕರಣ ಮಾಡಲು ಸಾರಿಗೆ ಇಲಾಖೆ ಮುಂದಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಸಂಚರಿಸುವ ಬಿಎಂಟಿಸಿ ಯಲ್ಲಿ ಡಿಜಿಟಲೀಕರಣ ಮಾಡಿದೆ ಸಾರಿಗೆ ಇಲಾಖೆ. ಬಿಎಂಟಿಸಿ ನಂತರ ಇದೀಗ ಕೆಎಸ್‌ಆರ್‌ಟಿಸಿಯ ಸರದಿ.
ಇನ್ನುಮುಂದೆ ಕೆಎಸ್‌ಆರ್‌ಟಿಸಿ ಯಲ್ಲಿ ಡೈನಾಮಿಕ್ UPI ಪೇಮೆಂಟ್ ಸೌಲಭ್ಯ ಒದಗಿಸಲು ಸಾರಿಗೆ ಇಲಾಖೆ ಪ್ಲಾನ್ ಮಾಡಿದೆ. ಈ ಹಿಂದೆ ಕೇವಲ ಬಿಎಂಟಿಸಿ ಬಸ್ ನಲ್ಲಿ ಮಾತ್ರ ಆನ್ಲೈನ್ ಟಿಕೆಟ್ ಹಾಗೂ ಆನ್ಲೈನ್ ಪೇಮೆಂಟ್ ವ್ಯವಸ್ತೆ ಇತ್ತು.
ಇದೀಗ ಹಿಂತಹ ಪ್ರಯತ್ನವನ್ನು ಕೆಎಸ್‌ಆರ್‌ಟಿಸಿಯಲ್ಲಿ ಮಾಡಲು ಹೊರಟಿದೆ ಸಾರಿಗೆ ಇಲಾಖೆ. ಇನ್ನುಮುಂದೆ ಕೆಎಸ್‌ಆರ್‌ಟಿಸಿ ಯಲ್ಲೂ ಸಿಗಲಿದೆ ಡೈನಾಮಿಕ್ UPI ಪೇಮೆಂಟ್ ವ್ಯವಸ್ಥೆ ಹಾಗೂ ಆನ್ಲೈನ್ ಟಿಕೆಟ್. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಹಾಗೂ ಹಣ ಪಾವತಿ ಮಾಡುವ ವ್ಯವಸ್ಥೆ ಜಾರಿ ಮಾಡಲು ಸಾರಿಗೆ ಇಲಾಖೆ ಸಜ್ಜಾಗಿದೆ.
ಈಗಾಗ್ಲೇ ಹಲವು ಬಸ್ ನಲ್ಲಿ ಕ್ಯೂ ಆರ್ ಟಿಕೆಟ್ ಹಾಗೂ ಆನ್ಲೈನ್ ಪೇಮೆಂಟ್ ಜಾರಿ ಮಾಡಿದ್ದಾರೆ. ಗೂಗಲ್ ಪೇ, ಫೋನ್ ಪೇ, ಪೆಟಿಎಂ, ಭೀಮ್ ಪೇ ಮೂಲಕ ಹಣ ಪಾವತಿ ಮಾಡಬಹುದು. ಮುಂದಿನ ದಿನಗಳಲ್ಲಿ ಏಟಿಎಂ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ನಲ್ಲೂ ಪೇಮೆಂಟ್ ಗೆ ಯೋಜನೆ ಜಾರಿಯಾಗಲಿದೆ. ಈಗಾಗ್ಲೇ 8800 ಬಸ್ ಗಳಲ್ಲಿ ವ್ಯವಸ್ಥೆ ಜಾರಿ ಮಾಡಲು ತಯಾರಿ ನಡೆದಿದೆ. ಸದ್ಯದಲ್ಲೇ ಎಲ್ಲ ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಡೈನಾಮಿಕ್ ಪಾವತಿ ಜಾರಿಯಾಗೋದು ಖಚಿತ.
Leave a Comment