
ಈ ಮೀನು ತಿನ್ನೋದು ಬಲು ಡೇಂಜರ್ – ನಾಲ್ಕು ಅಂಗಾಂಗಗಳೇ ಢಮಾರ್, ಕೋಮಾಕ್ಕೆ ಜಾರಿದ ಮಹಿಳೆ…!!
- ಅಂತಾರಾಷ್ಟ್ರೀಯ ಸುದ್ದಿ
- September 18, 2023
- No Comment
- 142
ನ್ಯೂಸ್ ಆ್ಯರೋ : ಬಹುತೇಕ ಮಾಂಸಾಹಾರಿಗಳಿಗೆ ಮೀನು ಅಚ್ಚುಮೆಚ್ಚು. ಆದರೆ ಮೀನಿನ ಸೇವನೆ ವೇಳೆ ಎಚ್ಚರಿಕೆ ವಹಿಸದೇ ಇದ್ದರೆ ಆರೋಗ್ಯಕ್ಕೇ ಕುತ್ತು ತರಬಹುದು.
ಅಮೆರಿಕದಲ್ಲಿರುವ ಕ್ಯಾಲಿಫೋರ್ನಿಯಾದ ಮಹಿಳೆಯೊಬ್ಬರು ಮೀನು ತಿಂದು ಕಳೆದ ಒಂದು ತಿಂಗಳಿಂದ ಕೋಮಾದಲ್ಲಿದ್ದು, ಈಗ ಸರ್ಜರಿ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.
40 ವರ್ಷದ ಲಾರಾ ಬರಜಾಸ್ ಎಂಬಾಕೆ ಮೀನು ತಿಂದು ಕೋಮಾಗೆ ಹೋಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾರಾ ಅವರಿಗೆ ಶಸ್ತ್ರಚಿಕಿತ್ಸೆ ನಡೆಸುವುದು ಅನಿವಾರ್ಯವಾಗಿತ್ತು.
ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ ಬಳಿಯ ಸ್ಥಳೀಯ ಮಾರ್ಕೆಟ್ಯಲ್ಲಿ ಲಾರಾ ಟಿಲಾಪಿಯಾ (tilapia fish) ಎನ್ನುವ ಮೀನುಗಳನ್ನು ಖರೀದಿ ಮಾಡಿ ಮನೆಗೆ ತಂದು ಬಳಿಕ ತಮಗಿಷ್ಟವಾದ ರೀತಿಯಲ್ಲಿ ಅಡುಗೆ ಮಾಡಿ ತಿಂದಿದ್ದಾರೆ. ಬಳಿಕ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಕೆಯ ಬೆರಳು, ಕಾಲು ಮತ್ತು ಕೆಳ ತುಟಿ ಕಪ್ಪು ಬಣ್ಣಕ್ಕೆ ತಿರುಗಿದ್ದು, ಕಿಡ್ನಿಯನ್ನೂ ಕಳೆದುಕೊಂಡಿದ್ದಾರೆ. ಮೀನು ತಿಂದಿದ್ದೇ ಇವರ ಜೀವಕ್ಕೆ ಮುಳುವಾಯಿತು ಎಂದು ಆಕೆಯ ಸ್ನೇಹಿತೆ ಮೆಸ್ಸಿಯಾನ್ ತಿಳಿಸಿದ್ದಾರೆ.
ಮೀನು ತಿಂದು ಲಾರಾ ಅವರ ಕಿಡ್ನಿ ಸೇರಿದಂತೆ ದೇಹದ ನಾಲ್ಕು ಪ್ರಮುಖ ಅಂಗಗಳನ್ನು ಕಳೆದುಕೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅಡುಗೆ ಮಾಡುವಾಗ ಲಾರ ಅವರು ಮೀನನ್ನು ಕಡಿಮೆ ಬೇಯಿಸಿದ್ದರು. ಇದರಿಂದ ಬ್ಯಾಕ್ಟೀರಿಯಾ ಸೋಂಕಿಗೆ ತುತ್ತಾಗಿ ಕೋಮಾಕ್ಕೆ ಹೋಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.