ಭಾರತದ ಅಳಿಯ, ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಗೆ ಮೆತ್ತಿಕೊಂಡ ಪೆನ್ ಇಂಕ್ ವಿವಾದ – ಏನಿದು ಹೊಸ ವಿವಾದ? ವಿವಾದಕ್ಕೆ ಕಾರಣವೇನು?

ಭಾರತದ ಅಳಿಯ, ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಗೆ ಮೆತ್ತಿಕೊಂಡ ಪೆನ್ ಇಂಕ್ ವಿವಾದ – ಏನಿದು ಹೊಸ ವಿವಾದ? ವಿವಾದಕ್ಕೆ ಕಾರಣವೇನು?

ನ್ಯೂಸ್ ಆ್ಯರೋ‌ : ಇನ್ಫೋಸಿಸ್ ನ ನಾರಾಯಣ ಮೂರ್ತಿ – ಸುಧಾ ಮೂರ್ತಿ ದಂಪತಿ ಅಳಿಯ ರಿಷಿ ಸುನಕ್ (RIshi Sunak) ಇಂಗ್ಲೆಂಡ್ ನ (England) ಪ್ರಧಾನ ಮಂತ್ರಿಯಾಗಿ ಹೊಸದೊಂದು ಇತಿಹಾಸ ಸೃಷ್ಟಿಸಿದ್ದಾರೆ. ಅವರು ಪ್ರಧಾನಿ ಪಟ್ಟ ಏರಿದ ಮೇಲೆ ಒಂದಲ್ಲ ಒಂದು ವಿವಾದ ಅವರನ್ನು ಸುತ್ತಿಕೊಳ್ಳುತ್ತಿದೆ. ಬಳಸುವ ಖಾಸಗಿ ವಿಮಾನ, ದುಂದುವೆಚ್ಚಗಳಿಂದ ಸುದ್ದಿಯಾಗಿದ್ದ ರಿಷಿ ಸುನಕ್ ಈ ಬಾರಿ ತಾವು ಬಳಸುವ ಪೆನ್ (Pen) ಕಾರಣದಿಂದ ಚರ್ಚೆಗೆ ಗ್ರಾಸವಾಗಿದ್ದಾರೆ.

ಏನಿದು ಹೊಸ ವಿವಾದ?

ರಿಷಿ ಸುನಕ್ ಅಧಿಕೃತ ಪತ್ರಗಳು, ದಾಖಲೆಗಳ ಮೇಲೆ ಸಹಿ ಮಾಡಲು ವೈಲಟ್ ವಿ ಪೆನ್ ಬಳಸುತ್ತಿದ್ದಾರೆ. ಇದರಲ್ಲಿ ಅಳಿಸಬಹುದಾದ ಇಂಕ್ ಬಳಸಲಾಗುತ್ತದೆ. ಈ ಪೆನ್ನಿನಿಂದ ಬರೆದ ಟಿಪ್ಪಣಿಗಳನ್ನು ಸುಲಭವಾಗಿ ಅಳಿಸಬಹುದು (Erasable Pen) ಎನ್ನುವ ಕಾರಣಕ್ಕೆ ವಿವಾದ ಎಬ್ಬಿದೆ.

ವರದಿಯೊಂದರ ಪ್ರಕಾರ ರಿಷಿ ಸುನಕ್ ಬಳಸುವ ಪೆನ್ ಚಿಲ್ಲರೆ ಮಾರುಕಟ್ಟೆಯಿಂದ ಖರೀದಿಸಲಾಗಿದೆ. ಪ್ರಧಾನಿಯ ಅಧಿಕೃತ ಸಹಿ ಮತ್ತು ಟಿಪ್ಪಣಿ ಮಹತ್ವದ್ದಾಗಿದ್ದು, ಅಳಿಸಬಹುದಾದ ಪೆನ್ ಬಳಸುವುದು ಆತಂಕಕ್ಕೆ ಕಾರಣವಾಗಿದೆ.

ಪ್ರಧಾನಿ ಕಾರ್ಯಾಲಯದ ಸ್ಪಷ್ಟನೆ ಏನು?

ಈ ವಿವಾದದ ಕುರಿತು ಸ್ಪಷ್ಟನೆ ನೀಡಿದ ರಿಷಿ ಸುನಕ್ ಅವರ ಮಾಧ್ಯಮ ಕಾರ್ಯದರ್ಶಿ, ಇದು ನಾಗರಿಕ ಸೇವೆಯಿಂದ ಒದಗಿಸಲಾಗಿರುವ ಪೆನ್. ಪ್ರಧಾನಿ ಅಳಿಸಲಾಗುವ ಇಂಕ್ ಒಳಗೊಂಡ ಪೆನ್ ಬಳಸುತ್ತಿಲ್ಲ ಎಂದು ಹೇಳಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *