ಅತಿಯಾಗಿ ನೀರು ಕುಡಿದು ಮೃತಪಟ್ಟ ಮಹಿಳೆ – ಏನಿದು ವಿಚಿತ್ರ ಘಟನೆ?

ಅತಿಯಾಗಿ ನೀರು ಕುಡಿದು ಮೃತಪಟ್ಟ ಮಹಿಳೆ – ಏನಿದು ವಿಚಿತ್ರ ಘಟನೆ?

ನ್ಯೂಸ್ ಆ್ಯರೋ‌ : ಅತಿಯಾದರೆ ಅಮೃತವೂ ವಿಷ ಎನ್ನಲಾಗುತ್ತದೆ. ನೀರು ಕೂಡ ಇದಕ್ಕೆ ಹೊರತಲ್ಲ. ಅತಿಯಾಗಿ ನೀರು ಕುಡಿದು ಅಮೆರಿಕದ ಇಂಡಿಯಾನಾ ರಾಜ್ಯದ ಮೊಂಟಿಚೆಲ್ಲೋದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. 35 ವರ್ಷದ ಎರಡು ಮಕ್ಕಳ ತಾಯಿ ಆಶ್ಲೇ ಸಮ್ಮರ್ಸ್ ಮೃತ ಮಹಿಳೆ.

ಘಟನೆ ವಿವರ

ಆಶ್ಲೇ ಸಮ್ಮರ್ಸ್ ತನ್ನ ಪತಿ ಮತ್ತು ಇಬ್ಬರು ಮಕ್ಕಳ ಜೊತೆ ಪ್ರವಾಸ ಕೈಗೊಂಡಿದ್ದರು. ಪ್ರವಾಸದ ಕೊನೆಯ ದಿನದಂದು ಸಾಕಷ್ಟು ನೀರು ಕುಡಿಯಲು ಸಾದ್ಯವಾಗಲಿಲ್ಲವೆಂದುಕೊಂಡ ಆಶ್ಲೇ ಕೇವಲ 20 ನಿಮಿಷದಲ್ಲಿ 2 ಲೀಟರ್ ನೀರು ಕುಡಿದಿದ್ದರು.

ಬಳಿಕ ಅವರು ಅಸ್ವಸ್ಥರಾದರು. ತಲೆನೋವು, ಸುಸ್ತು ಕಂಡು ಬಂದಿದ್ದರಿಂದ ಕೂಡಲೇ ಮನೆಗೆ ಹಿಂದಿರುಗಿದರು. ಕಾರಿನಿಂದ ಇಳಿಯುವಾಗ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.

ಕಾರಣವೇನು?

ಒಂದು ದಿನದಲ್ಲಿ ಕುಡಿಯುವ ನೀರನ್ನು ಆಶ್ಲೇ ಕೇವಲ 20 ನಿಮಿಷಗಳಲ್ಲಿ ಕುಡಿದದ್ದು ಸಾವಿಗೆ ಕಾರಣ. ಅಲ್ಪ ಅವಧಿಯಲ್ಲಿ ಹೆಚ್ಚು ನೀರು ಕುಡಿದರೆ ಆರೋಗ್ಯ ಕೆಡುತ್ತದೆ. ಇದು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಆಶ್ಲೇ ಸಾವಿಗೆ ನೀರಿನ ವಿಷತ್ವವೇ ಕಾರಣ ಎನ್ನುವುದು ಸಾಬೀತಾಗಿದೆ. ಹೆಚ್ಚಿನ ಪ್ರಮಾಣದ ನೀರನ್ನು ಕುಡಿದಾಗ ಈ ಸ್ಥಿತಿ ಸಂಭವಿಸುತ್ತದೆ. ಇದು ಜೀವಕ್ಕೆ ಮಾರಕವಾಗುತ್ತದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *