
ಬಡ ಕಾರ್ಮಿಕನ ಜೀವ ಉಳಿಸಲು ಬಂದ ಏರ್ ಆಂಬ್ಯುಲೆನ್ಸ್ – ಯಾಕಾಗಿ ಈ ತರಾತುರಿ? ಎಲ್ಲಿ ನಡೆಯಿತು ಈ ಪವಾಡ? ವಿಡಿಯೋ ವೈರಲ್…!!
- ಅಂತಾರಾಷ್ಟ್ರೀಯ ಸುದ್ದಿ
- August 25, 2023
- No Comment
- 53
ನ್ಯೂಸ್ ಆ್ಯರೋ : ಕೆಲವೊಮ್ಮೆ ಇಂಟರ್ ನೆಟ್ ನಲ್ಲಿ ಕಾಣಸಿಗುವ ವೈರಲ್ ವೀಡಿಯೋ ಗಮನ ಸೆಳೆಯುತ್ತವೆ. ಜೊತೆಗೆ ಉತ್ತಮ ದೃಶ್ಯಗಳೂ ಸಾಕಷ್ಟು ಮೆಚ್ಚುಗೆ ಪಡೆಯುತ್ತವೆ. ಇಲ್ಲೂ ಅಂತಹ ವೀಡಿಯೋವೊಂದು ಮಾನವೀಯತೆಯ ಪಾಠ ಬೋಧಿಸಿ ವೈರಲ್ ಆಗಿದೆ.
ವೀಡಿಯೋದಲ್ಲೇನಿದೆ?
ಸಾಮಾನ್ಯ ಕಾರ್ಮಿಕರೊಬ್ಬರ ಜೀವ ಉಳಿಸಲು ಸೌದಿ ಅರೇಬಿಯಾ ಸರಕಾರ ಹೆಲಿಕಾಪ್ಟರ್ ಕಳುಹಿಸುವ ಮೂಲಕ ಗಮನ ಸೆಳೆದಿದೆ. ಜೆಡ್ಡಾ ನಗರದಲ್ಲಿ ಈ ಘಟನೆ ನಡೆದಿದೆ.
ಕಾರ್ಮಿಕರೊಬ್ಬರು ಅಸ್ವಸ್ಥರಾಗಿ ಬಿದ್ದಿದ್ದರು. ಈ ವೇಳೆ ಸಹ ಕಾರ್ಮಿಕ ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದರು. ಆದರೆ ಟ್ರಾಫಿಕ್ ಜಾಮ್ ಇದ್ದುದರಿಂದ ಸರಿಯಾದ ಸಮಯಕ್ಕೆ ತಲುಪಲು ಆಂಬ್ಯುಲೆನ್ಸ್ ಗೆ ಸಾಧ್ಯವಾಗಲಿಲ್ಲ. ಇತ್ತ ನೆಲಕ್ಕೆ ಬಿದ್ದಿದ್ದ ವ್ಯಕ್ತಿಯ ಸ್ಥಿತಿ ವಿಷಮಿಸುತ್ತಿರುವುದನ್ನು ಗಮನಿಸಿದ ಸರಕಾರ ಏರ್ ಆಂಬ್ಯುಲೆನ್ಸ್ ಕಳುಹಿಸಿ 15 ನಿಮಿಷಗಳಲ್ಲಿ ಆಸ್ಪತ್ರೆಗೆ ಸಾಗಿಸಿತು.
ಸದ್ಯ ರಸ್ತೆಯಲ್ಲಿ ಏರ್ ಆಂಬ್ಯುಲೆನ್ಸ್ ಲ್ಯಾಂಡ್ ಆಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿ ವೈರಲ್ ಆಗಿದೆ. ಅಸ್ವಸ್ಥನಾದ ವ್ಯಕ್ತಿ ಪಾಕಿಸ್ತಾನ ಮೂಲದ ಕಾರ್ಮಿಕ ಎನ್ನಲಾಗಿದೆ.