
ಇದಪ್ಪಾ.. ರೋಲ್ಸ್ ರಾಯ್ ಕಾರಿನ ಪವರ್ – ಟ್ಯಾಂಕರ್ ಗೆ ಗುದ್ದಿದ್ರೂ ಕಾರ್ ನಲ್ಲಿ ಇದ್ದವರು ಸೇಫ್..! ಟ್ಯಾಂಕರ್ ನಲ್ಲಿದ್ದ ಇಬ್ಬರ ಸಾವು..!!
- ಆಟೋ ನ್ಯೂಸ್
- August 25, 2023
- No Comment
- 125
ನ್ಯೂಸ್ ಆ್ಯರೋ : ದಿಲ್ಲಿ – ಮುಂಬಯಿ – ಬರೋಡಾ ಎಕ್ಸ್ ಪ್ರೆಸ್ ವೇಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಇಂಧನ ಟ್ಯಾಂಕರ್ ಮತ್ತು ರೋಲ್ಸ್ ರಾಯ್ ಕಾರು ನಡುವೆ ಸಂಭವಿಸಿದ ಢಿಕ್ಕಿಯಲ್ಲಿ ಟ್ಯಾಂಕರ್ ನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮೂವರು ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಏನಿದು ಘಟನೆ?
ಹರ್ಯಾಣದ ನುಹ್ ಬಳಿ ಈ ಅಪಘಾತ ಸಂಭವಿಸಿದೆ. ಟ್ಯಾಂಕರ್ ರಾಂಗ್ ಸೈಡ್ ನಿಂದ ವೇಗವಾಗಿ ಬರುತ್ತಿತ್ತು. ರೋಲ್ಸ್ ರಾಯ್ಸ್ ಕಾರು ಕೂಡ ವೇಗದಲ್ಲಿತ್ತು. ಅನಿರೀಕ್ಷಿತವಾಗಿ ಟ್ಯಾಂಕರ್ ಎದುರಾಗಿದ್ದರಿಂದ ಕಾರು ಚಾಲಕನಿಗೆ ಗೊಂದಲ ಮೂಡಿ ಡಿಕ್ಕಿ ಹೊಡೆಯಿತು.
ಡಿಕ್ಕಿಯಾದ ಬೆನ್ನಲ್ಲೇ ಕಾರಿಗೆ ಬೆಂಕಿ ಹತ್ತಿಕೊಂಡಿತ್ತು. ತಕ್ಷಣ ಕಾರಿನಲ್ಲಿದ್ದವರ ರಕ್ಷಣೆಗೆ ಆಗಮಿಸಿದ ಹಲವರು ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದರು. ಇತ್ತ ಟ್ಯಾಂಕರ್ ನಲ್ಲಿದ್ದ ಡ್ರೈವರ್ ರಾಂಪ್ರೀತ್ ಮತ್ತು ಸಹಾಯಕ ಕುಲ್ದೀಪ್ ಸ್ಥಳದಲ್ಲೇ ಮೃತಪಟ್ಟರು.
ಐಷರಾಮಿ ಕಾರು ರೋಲ್ಸ್ ರಾಯ್ ಅತ್ಯಂತ ಸುರಕ್ಷಿತ ಫೀಚರ್ಸ್ ಹೊಂದಿದೆ. ಇದರಲ್ಲಿ 7 ಏರ್ ಬ್ಯಾಗ್ ಇದೆ. 5 ಸ್ಟಾರ್ ಕ್ರ್ಯಾಶ್ ರೇಟಿಂಗ್ ಹೊಂದಿದೆ. ಹೀಗಾಗಿ ಇದು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸಾಮಾನ್ಯವಾಗಿ ಟ್ಯಾಂಕರ್ ಡಿಕ್ಕಿಯಾದರೆ ಇತರ ಕಾರುಗಳು ಪುಡಿ ಪುಡಿಯಾಗುವ ಸಾಧ್ಯತೆ ಇರುತ್ತದೆ. ಆದರೆ ರೋಲ್ಸ್ ರಾಯ್ ಕಾರಿಗೆ ಅಷ್ಟು ಬೇಗ ಏನೂ ಸಂಭವಿಸುವುದಿಲ್ಲ.