
ಇದು ನಿಜ ಜೀವನದ ‘ಶ್ರೀರಸ್ತು ಶುಭಮಸ್ತು’ – ತಾಯಿಗೆ 2ನೇ ಮದುವೆ ಮಾಡಿಸಿದ ನಟ ಯಾರು ಗೊತ್ತೆ?
- ಮನರಂಜನೆ
- August 25, 2023
- No Comment
- 80
ನ್ಯೂಸ್ ಆ್ಯರೋ : ಮಧ್ಯ ವಯಸ್ಕ ಮಹಿಳೆ ಮತ್ತು ಮಧ್ಯ ವಯಸ್ಕ ವ್ಯಕ್ತಿ 2ನೇ ಮದುವೆಯಾಗುವ ಕಥೆ ಹೊಂದಿರುವ ಝೀ ಕನ್ನಡ ವಾಹಿನಿಯ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಸಾಕಷ್ಟು ಗಮನ ಸೆಳೆಯುತ್ತಿದೆ. ಇತ್ತ ನಟನೊಬ್ಬ ನಿಜ ಜೀವನದಲ್ಲಿ ತಮ್ಮ ತಾಯಿಗೆ 2ನೇ ಮದುವೆ ಮಾಡಿಸುವ ಮೂಲಕ ಮಾದರಿಯಾಗಿದ್ದಾರೆ.
ಯಾರು ಈ ನಟ?
ಮರಾಠಿ ಚಿತ್ರ ನಟ ಸಿದ್ದಾರ್ಥ್ ಚಂದೇಕರ್ ಇತ್ತೀಚೆಗೆ ತಮ್ಮ ತಾಯಿಗೆ 2ನೇ ಮದುವೆ ಮಾಡಿಸಿ ಸುದ್ದಿಯಾಗಿದ್ದಾರೆ. ನಟಿಯಾಗಿಯೂ ಗುರುತಿಸಿಕೊಂಡಿರುವ ಸೀಮಾ ಚಂದೇಕರ್ ಅವರ ವಿವಾಹವನ್ನು ನಿತಿನ್ ಜೊತೆ ಸಿದ್ದಾರ್ಥ್ ನೆರವೇರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಇದೀಗ ವೈರಲ್ ಆಗಿದೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾಯಿ ಸೀಮಾ ಚಂದೇಕರ್ 2ನೇ ಮದುವೆ ಫೋಟೋ ಹಂಚಿಕೊಂಡ ಸಿದ್ದಾರ್ಥ್, ಅಮ್ಮ ಹ್ಯಾಪಿ ಸೆಕೆಂಡ್ ಇನ್ನಿಂಗ್ಸ್. ನಿಮ್ಮ ಮಕ್ಕಳ ಜೊತೆ ಜೀವನ ಇನ್ನು ಬಾಕಿಯಿದೆ. ಇವತ್ತಿನವರೆಗೆ ನಮಗಾಗಿ ಬಹಳ ತ್ಯಾಗ ಮಾಡಿದ್ದೀರ. ಈಗ ನಿಮ್ಮ ಕುರಿತು, ನಿಮ್ಮ ಹೊಸ ಸಂಗಾತಿಯ ಬಗ್ಗೆ ಆಲೋಚಿಸಬೇಕಾದ ಸಮಯ ಬಂದಿದೆ. ಈ ವಿಷಯದಲ್ಲಿ ನಿಮ್ಮ ಮಕ್ಕಳು ಯಾವಾಗಲೂ ನಿಮ್ಮ ಜೊತೆಗೆ ಇರುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಸಿದ್ದಾರ್ಥ್ ಪತ್ನಿ ಮಿತಾಲಿ ಮಾಯೇಕರ್ ಕೂಡ ತಮ್ಮ ಅತ್ತೆಗೆ ಶುಭಾಶಯ ಹೇಳಿ ಮತ್ತಷ್ಟು ಫೋಟೋ ಶೇರ್ ಮಾಡಿದ್ದಾರೆ. ಹ್ಯಾಪಿ ಮ್ಯಾರೀಡ್ ಲೈಫ್ ಅತ್ತೆ. ನಮ್ಮ ಅತ್ತೆಯ ಮದುವೆ. ಇಂತಹ ಕುಟುಂಬದ ಭಾಗವಾಗಿರುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಜೆಂಡಾ, ಕ್ಲಾಸ್ ಮೇಟ್ಸ್, ಬಾಲ ಗಂಧರ್ವ ಮುಂತಾದ ಮರಾಠಿ ಚಿತ್ರಗಳಲ್ಲಿ ನಟಿಸಿರುವ ಸಿದ್ದಾರ್ಥ್ ಬಾಲಿವುಡ್ ಗೂ ಕಾಲಿಟ್ಟಿದ್ದಾರೆ. ಇತ್ತೀಚೆಗೆ ನಾಗೇಶ್ ಕುಕುನೂನ್ ನಿರ್ದೇಶನದ ಸಿಟಿ ಆಫ್ ಡ್ರೀಮ್ಸ್ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಂಟಿದ್ದಾರೆ.