ತನ್ನ ಕೆಲಸ ಮುಗಿಸಿ ನಿದ್ರಾಸ್ಥಿತಿಗೆ ತಲುಪಿದ ಪ್ರಗ್ಯಾನ್ ರೋವರ್ – ಇನ್ನು ಸೆ.22ರವರೆಗೂ ಇಸ್ರೋ ಕಾಯಬೇಕು, ಯಾಕೆ?

ತನ್ನ ಕೆಲಸ ಮುಗಿಸಿ ನಿದ್ರಾಸ್ಥಿತಿಗೆ ತಲುಪಿದ ಪ್ರಗ್ಯಾನ್ ರೋವರ್ – ಇನ್ನು ಸೆ.22ರವರೆಗೂ ಇಸ್ರೋ ಕಾಯಬೇಕು, ಯಾಕೆ?

ನ್ಯೂಸ್ ಆ್ಯರೋ‌ : ಬಾಹ್ಯಾಕಾಶದಲ್ಲಿ ಭಾರತ ಮಹತ್ವದ ಮೈಲಿಗಲ್ಲು ನೆಟ್ಟಿದ್ದು, ಇಸ್ರೋ ಉಡಾವಣೆ ಮಾಡಿದ ಚಂದ್ರಯಾನ-3 ಯಶಸ್ವಿಯಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಪ್ರಗ್ಯಾನ್ ರೋವರ್ ಓಡಾಟ ನಡೆಸಿ ಮಹತ್ವದ ಸುದ್ದಿಗಳನ್ನು ಭೂಮಿಗೆ ಕಳುಹಿಸಿದೆ. ರೋವರ್ ತನ್ನ ಕಾರ್ಯಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅದನ್ನು ಸುರಕ್ಷಿತವಾಗಿ ನಿಲುಗಡೆ ಮಾಡಲಾಗಿದೆ ಎಂದು ಇಸ್ರೋ ಹೇಳಿದೆ.

ಸ್ಲೀಪ್ ಮೋಡ್

ರೋವರ್ ಮತ್ತು ಎ.ಪಿ.ಎಕ್ಸ್.ಎಸ್. ಮತ್ತು ಎಲ್.ಐ.ಬಿ.ಎಸ್. ಪೇಲೋಡ್ ಗಳು ಕೂಡ ಟರ್ನ್ ಆಫ್ ಆಗಿದ್ದು, ಅಲ್ಲಿನ ಡೇಟಾ ಲ್ಯಾಂಟರ್ ಮೂಲಕ ಭೂಮಿಗೆ ರವಾನೆ ಆಗಲಿದೆ ಎಂದು ಇಸ್ರೋ ತಿಳಿಸಿದೆ.

ಸದ್ಯ ಬ್ಯಾಟರಿ ಫುಲ್ ಚಾರ್ಜ್ ಆಗಿದ್ದು, ಸೆ. 22ರಂದು ಆಗಲಿರುವ ಸೂರ್ಯೋದಯದ ಬೆಳಕನ್ನು ಗ್ರಹಿಸುವ ನಿಟ್ಟಿನಲ್ಲಿ ಸೋಲಾರ್ ಪ್ಯಾನಲ್ ಅಣಿಗೊಳಿಸಲಾಗಿದೆ. ಈ ಸಂಬಂಧ ರಿಸೀವರ್ ಕೂಡ ಆನ್ ಆಗಿದೆ. ಆ ಬಳಿಕ ರೋವರ್ ನ ಇನ್ನೊಂದು ಸೆಟ್ ಅಸೈನ್ ಮೆಂಟ್ ಜಾಗೃತಗೊಳ್ಳುವ ಭರವಸೆ ಇದೆ. ಒಂದು ವೇಳೆ ಸಾಧ್ಯವಾಗದಿದ್ದರೆ ಚಂದ್ರನಲ್ಲಿನ ಭಾರತದ ರಾಯಭಾರಿಯಾಗಿ ಅದು ಅಲ್ಲೇ ಇರಲಿದೆ ಎಂದು ಇಸ್ರೋ ಹೇಳಿದೆ.

ಚಂದ್ರನ ಅಂಗಳದಲ್ಲಿ ರೋವರ್ ಹಲವು ಖನಿಜಗಳನ್ನು ಪತ್ತೆ ಮಾಡಿತ್ತು. ಮುಖ್ಯವಾಗಿ ಸಲ್ಫರ್(ಗಂಧಕ), ಆಕ್ಸಿಜನ್ ಸೇರಿ ಹಲವು ಖನಿಜಗಳ ಇರುವಿಕೆಯನ್ನು ದೃಢಪಡಿಸಿತ್ತು. ಇದುವರೆಗೆ ಸೌರಶಕ್ತಿಯಿಂದ ಪ್ರಗ್ಯಾನ್ ರೋವರ್ ಚಲಿಸುತ್ತಿದ್ದು, ಚಂದ್ರನಲ್ಲಿ ಕತ್ತಲಾದ ಬಳಿಕ ಉಷ್ಣಾಂಶ -270 ವರೆಗೂ ಇಳಿಯುವ ಸಾಧ್ಯತೆ ಇರುವುದರಿಂದ ಪ್ರಗ್ಯಾನ್ ರೋವರ್ ಮತ್ತೆ ತನ್ನ ಕಾರ್ಯ ನಿರ್ವಹಿಸಲಿದೆಯಾ ಕಾದು ನೋಡಬೇಕಿದೆ.

Related post

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು…

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ…
ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!! – ಕೋಟ್ಯಾಂತರ ರೂಪಾಯಿ ಒಡೆಯ ಈ ತಾತ ಮಾಡೋದೇನು?

ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!!…

ನ್ಯೂಸ್ ಆ್ಯರೋ : ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ.…
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ ಮೇಲೆ ಕಾಳಜಿ ಇರುವವರು ಈ ವರದಿ ಓದಿ..

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ…

ನ್ಯೂಸ್ ಆ್ಯರೋ : ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು…

Leave a Reply

Your email address will not be published. Required fields are marked *