ವಿಶ್ವದ ಅತೀ ಉದ್ದದ ಖ್ಯಾತಿ ಕಳೆದುಕೊಳ್ಳುತ್ತಾ ನೈಲ್ ನದಿ? – ಏನಿದು ಹೊಸ ವಿವಾದ? ಏನಿದು ಬೆಳವಣಿಗೆ?

ವಿಶ್ವದ ಅತೀ ಉದ್ದದ ಖ್ಯಾತಿ ಕಳೆದುಕೊಳ್ಳುತ್ತಾ ನೈಲ್ ನದಿ? – ಏನಿದು ಹೊಸ ವಿವಾದ? ಏನಿದು ಬೆಳವಣಿಗೆ?

ನ್ಯೂಸ್ ಆ್ಯರೋ : ವಿಶ್ವದ ಅತೀ ಉದ್ದದ ನದಿ ಯಾವುದು ಎಂದು ಶಿಕ್ಷಕರು ತರಗತಿಯಲ್ಲಿ ಪ್ರಶ್ನೆ ಕೇಳಿದರೆ ಬಹುಶ ನೈಲ್ ನದಿ ಎಂದು ಹೇಳುವುದು ಸಾಧ್ಯವಿಲ್ಲ. ಯಾಕೆಂದರೆ ಈ ನದಿ ಇನ್ನು ವಿಶ್ವದಲ್ಲಿ ಅತೀ ಉದ್ದದ ನದಿ ಎಂಬ ಖ್ಯಾತಿಯನ್ನು ಬಿಟ್ಟು ಕೊಡಬೇಕಾಗುತ್ತದೆ.

ಈಗಾಗಲೇ ಈ ಕುರಿತು ಅಧ್ಯಯನ ನಡೆಸುತ್ತಿರುವ ಸಂಶೋಧಕರ ತಂಡ ನದಿಯ ಉದ್ದ ಅಳೆಯಲು ಸಿದ್ಧತೆ ಮಾಡಿಕೊಂಡಿದೆ. ಏಪ್ರಿಲ್ 2024ರೊಳಗೆ ಈ ಕುರಿತು ಸ್ಪಷ್ಟತೆ ಸಿಗಲಿದ್ದು, ಇದಕ್ಕಾಗಿ ಸಂಶೋಧಕರ ತಂಡ 7,000 ಕಿಲೋ ಮೀಟರ್ ನದಿ ಯಾತ್ರೆಗೆ ಮುಂದಾಗಿದೆ.

ಆಫ್ರಿಕಾದ ನೈಲ್ ನದಿ ವಿಶ್ವದ ಅತೀ ಉದ್ದದ ನದಿ ಎನ್ನುವುದು ಎಲ್ಲ ದಾಖಲೆಗಳಲ್ಲೂ ಉಲ್ಲೇಖವಾಗಿದೆ. ಆದರೆ ಇನ್ನು ಮುಂದೆ ಈ ಖ್ಯಾತಿ ಅಮೆಜಾನ್ ನದಿಗೆ ಸಿಗುವ ಸಾಧ್ಯತೆ ಇದೆ.

ಈ ಕುರಿತು ಮಾತನಾಡಿರುವ ಸಂಶೋಧಕ ತಂಡದ ನಾಯಕ ಬ್ರೆಜಿಲಿಯನ್ ಯೂರಿ ಸನಾಡಾ ಅವರು ನೈಲ್ ಒಂದು ಹುಳುವಿನಂತೆ ಆದರೆ ಅಮೆಜಾನ್ ಅನಕೊಂಡ ಇದ್ದಂತೆ ಎಂದು ಹೇಳಿದ್ದಾರೆ.

ಈಗಾಗಲೇ ಅಮೆಜಾನ್ ವಿಶ್ವದ ಅತ್ಯಂತ ದೊಡ್ಡ ನದಿ ಎಂದು ಹೆಸರು ಪಡೆದಿದೆ. ಆದರೆ ಪ್ರಪಂಚದಲ್ಲೇ ಅತೀ ಉದ್ದದ ನದಿ ಎಂಬ ಖ್ಯಾತಿ ಪಡೆದಿರುವ ನೈಲ್ ಗೆ ಇದು ಪೈಪೋಟಿ ನೀಡಿದೆ. ಹೀಗಾಗಿ ಈ ಬಗ್ಗೆ ಸ್ಪಷ್ಟತೆ ಪಡೆಯಲು ತಂಡ ಸಂಶೋಧನೆಗೆ ಇಳಿದಿದೆ.

ಯಾವ ನದಿ ಅತೀ ಉದ್ದ ಎನ್ನುವ ಪ್ರಶ್ನೆ ಉದ್ಬವವಾಗಲು ಇನ್ನೊಂದು ಕಾರಣವೂ ಇದೆ. ಯಾಕೆಂದರೆ ಅಮೆಜಾನ್ ನದಿ ಇತರ ಎಲ್ಲ ನದಿಗಳಿಗಿಂತ ಕನಿಷ್ಠ ನಾಲ್ಕು ಪಟ್ಟು ಹೆಚ್ಚು ನೀರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ ಎನ್ನುತ್ತಾರೆ ತಜ್ಞರು.

ದಕ್ಷಿಣ ಪೆರುವಿನಲ್ಲಿರುವ ಅಪುರಿಮ್ಯಾಕ್ ಅಮೆಜಾನ್ ನದಿಯ ಉಗಮಸ್ಥಾನ ಎಂದು ಸಂಶೋಧಕರು ಪರಿಗಣಿಸಿದ್ದಾರೆ. ಆದರೆ ಈ ಕುರಿತು ವಿವಾದವೂ ಇದೆ. ಯಾಕೆಂದರೆ ಕೆಲವು ಸಂಶೋಧಕರು ಉತ್ತರ ಪೆರುವಿನಲ್ಲಿ ಹೆಚ್ಚು ದೂರದ ನದಿ ಮೂಲವನ್ನು ಕಂಡುಹಿಡಿದಿದ್ದಾರೆ ಎನ್ನಲಾಗಿದೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಸಂಶೋಧಕ ಜೇಮ್ಸ್ “ರಾಕಿ” ಕಾಂಟೋಸ್, ಅಮೆಜಾನ್‌ನ ಅತ್ಯಂತ ದೂರದ ಮೂಲ ಅಪುರಿಮ್ಯಾಕ್ ಎಂದು ಪರಿಗಣಿಸಲಾಗಿದೆ. ಆದರೆ ಪೆರುವಿನ ಪ್ರವಾಸದ ವೇಳೆ ನಕ್ಷೆಗಳು, ಹೈಡ್ರೋಗ್ರಾಫ್‌ಗಳಿಂದ ತಿಳಿದು ಬಂದ ಸಂಗತಿಯೆಂದರೆ ನೈಲ್ ನದಿಗಿಂತ ಅಮೆಜಾನ್ ಉದ್ದವಾಗಿದೆ ಎಂದು ತಿಳಿಸಿದ್ದಾರೆ.

ನದಿ ಉದ್ದವನ್ನು ಅಳೆಯುವ ಯಾತ್ರೆಯನ್ನು ಪೆರುವಿನ ಆಂಡಿಸ್, ಮಾಂಟಾರೊ ನದಿಯಲ್ಲಿ ಹೊಸದಾಗಿ ಗುರುತಿಸಲಾದ ನದಿ ಮೂಲದಿಂದ ಪ್ರಾರಂಭಿಸಿ ಕೊಲಂಬಿಯಾ ಮತ್ತು ಬ್ರೆಜಿಲ್ ಮೂಲಕ ಅಮೆಜಾನ್ ಅನ್ವೇಷಿಸಲಾಗುತ್ತದೆ. ಆರಂಭದಲ್ಲಿ ತೆಪ್ಪದಲ್ಲಿ ಪ್ರಯಾಣಿಸಿ ಎನೆ ನದಿಯ ಸಂಗಮವನ್ನು ತಲುಪಿದ ಬಳಿಕ ತಂಡವು ವಿಶೇಷವಾಗಿ ವಿನ್ಯಾಸಗೊಳಿಸಿದ ಮೂರು ಸೌರ ಮತ್ತು ಪೆಡಲ್-ಚಾಲಿತ ದೋಣಿಗಳಲ್ಲಿ ಪ್ರಯಾಣವನ್ನು ಮುಂದುವರಿಸಲಿದೆ. ಬ್ರೆಜಿಲಿಯನ್ ಕರಾವಳಿಯುದ್ದಕ್ಕೂ ಅಟ್ಲಾಂಟಿಕ್ ಸಾಗರಕ್ಕೆ ಅಮೆಜಾನ್ ಮಾರ್ಗವನ್ನು ಕಂಡುಹಿಡಿಯಲಿದೆ.

2025 ರ ಆರಂಭದಲ್ಲಿ ಎರಡನೇ ಬಾರಿ ನದಿ ಯಾತ್ರೆ ನಡೆಸಲಾಗುವುದು. ಇದರಲ್ಲಿ ಫ್ರೆಂಚ್ ಪರಿಶೋಧಕ ಸೆಲೀನ್ ಕೌಸ್ಟಿಯೊ ಅವರೂ ಭಾಗವಹಿಸುವ ಸಾಧ್ಯತೆ ಇದೆ. ಪ್ರಸಿದ್ಧ ಸಮುದ್ರಶಾಸ್ತ್ರಜ್ಞ ಜಾಕ್ವೆಸ್ ಕೂಸ್ಟೊ ಅವರ ಮೊಮ್ಮಗಳು. ನದಿಯ ದಡದಗುಂಟ ಕುದುರೆಯ ಮೇಲೆ ಇವರು ಪ್ರಯಾಣ ನಡೆಸಲಿದ್ದಾರೆ ಎಂದು ಕಾಂಟೋಸ್ ಹೇಳಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *