ಕುಮಟಾದಲ್ಲಿ ಮತ್ತೆ ‘ಬಿಳಿ ಹೆಬ್ಬಾವು’ ಪ್ರತ್ಯಕ್ಷ! – ಸ್ನೇಕ್ ಪವನ್ ನಾಯ್ಕರಿಂದ ರಕ್ಷಣೆ, ಮೈಸೂರು ಮೃಗಾಲಯಕ್ಕೆ ಶಿಫ್ಟ್

ಕುಮಟಾದಲ್ಲಿ ಮತ್ತೆ ‘ಬಿಳಿ ಹೆಬ್ಬಾವು’ ಪ್ರತ್ಯಕ್ಷ! – ಸ್ನೇಕ್ ಪವನ್ ನಾಯ್ಕರಿಂದ ರಕ್ಷಣೆ, ಮೈಸೂರು ಮೃಗಾಲಯಕ್ಕೆ ಶಿಫ್ಟ್

ನ್ಯೂಸ್ ಆ್ಯರೋ : ಕುಮಟಾದ ಗಾಂಧಿ ನಗರದ ದೇವಿ ನಾರಾಯಣ ಮುಕ್ರಿ ಎಂಬವರ ಮನೆಯಂಗಳದಲ್ಲಿ ಬೃಹತ್ ಗಾತ್ರದ ಬಿಳಿ ಹೆಬ್ಬಾವೊಂದು ಪತ್ತೆಯಾಗಿ ಮನೆಮಂದಿಗೆ ಗಾಬರಿ ಮೂಡಿಸಿದ ಘಟನೆ ನಡೆದಿದೆ.

ಮಾಹಿತಿ ತಿಳಿದು ಉರಗ ರಕ್ಷಕ ಪವನ್ ನಾಯ್ಕ ಅವರು ಕೂಡಲೇ ಸ್ಥಳಕ್ಕಾಗಮಿಸಿ ಈ ಬಿಳಿ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಹಾವನ್ನು ಅರಣ್ಯ ಇಲಾಖೆಯ ವಶಕ್ಕೆ ಒಪ್ಪಿಸಿದರು. ಹೆಬ್ಬಾವಿನ ಮೈಮೇಲೆ ಸಣ್ಣ-ಪುಟ್ಟ ಗಾಯಗಳಿದ್ದ ಕಾರಣ ಅದನ್ನು ಇದೀಗ ಮೈಸೂರು ಮೃಗಾಲಯಕ್ಕೆ ರವಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮುಕ್ರಿ ಅವರ ಮನೆಯಂಗಳದಲ್ಲಿ ಈ ಹೆಬ್ಬಾವು ಕಾಣಿಸಿಕೊಂಡ ಸಂದರ್ಭದಲ್ಲಿ, ಪಕ್ಕದ ಮನೆಯವರಾದ ಆರ್.ಟಿ.ಓ. ಆಫಿಸ್ ಹೋಮ್ ಗಾರ್ಡ್ ಗಣೇಶ್ ಮುಕ್ರಿಯವರು ತಕ್ಷಣ ಉರಗ ರಕ್ಷಕ ಪವನ್ ನಾಯ್ಕ ಅವರಿಗೆ ಕರೆ ಮಾಡಿದ್ದಾರೆ.

ಕೂಡಲೇ ಪವನ್ ನಾಯ್ಕ ಅವರು ರಾತ್ರಿ 12 ಘಂಟೆಗೆ ಇಲ್ಲಿಗೆ ಬಂದು ಈ ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ. ಇದು ಇತ್ತೀಚೆಗೆ ಈ ಭಾಗದಲ್ಲಿ ಪತ್ತೆಯಾದ ಎರಡನೇ ಬಿಳಿ ಬಣ್ಣದ ಹೆಬ್ಬಾವಾಗಿದೆ.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲೇ ಕುಮಟಾದ ಮಿರ್ಜಾನ್ನ ರಾಮನಗರ ನಿವಾಸಿ ಸುಬ್ರಹ್ಮಣ್ಯ ನಾಯ್ಕ ಎಂಬುವವರ ಮನೆಯಲ್ಲಿ 5 ಅಡಿ ಉದ್ದ ಅಪರೂಪದ ಬಿಳಿ ಹೆಬ್ಬಾವು ಕಾಣಿಸಿದ್ದು ಅದನ್ನೂ ಸಹ ರಾತ್ರಿ ವೇಳೆಯಲ್ಲೇ ಪವನ್ ನಾಯ್ಕರು ರಕ್ಷಣೆ ಮಾಡಿದ್ದರು. ಬಿಳಿ ಹೆಬ್ಬಾವು ಕಂಡುಬಂದ ಸುದ್ದಿ ಆ ಸಂದರ್ಭದಲ್ಲಿ ರಾಷ್ಟ್ರ ಮಟ್ಟದಲ್ಲಿ ವೈರಲ್ ಸುದ್ದಿಯಾಗಿತ್ತು.

ಇದೀಗ ಸಿಕ್ಕಿರುವ ಬಿಳಿ ಹೆಬ್ಬಾವು ಸುಮಾರು 15 ಅಡಿ ಉದ್ದವಿದ್ದು ಇದು ಈ ಭಾಗದ ಜನರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಸುದ್ದಿ ತಿಳಿದು ರಾತ್ರಿ ಸಮಯದಲ್ಲೂ ನೂರಾರು ಸ್ಥಳೀಯರು ಹೆಬ್ಬಾವಿನ ವೀಕ್ಷಣೆಗೆಂದು ಬಂದಿದ್ದರು.

ಇಂತಹ ಬಿಳಿ ಬಣ್ಣದ ಹೆಬ್ಬಾವು ಕರ್ನಾಟಕದಲ್ಲೇ ನಾಲ್ಕನೇ ಬಾರಿ ರಕ್ಷಣೆಯಾಗಿದ್ದು, 2 ಬಾರಿ ಬೆಳ್ತಂಗಡಿಯಲ್ಲಿ ಹಾಗೂ 2 ಭಾರಿ ಕುಮಟಾದಲ್ಲಿ ಸಿಕ್ಕಿರುವುದು ವಿಶೇಷವಾಗಿರುತ್ತದೆ. ಮಾತ್ರವಲ್ಲದೇ, ಭಾರತದಲ್ಲೇ ಅತೀ ದೊಡ್ಡ ಬಿಳಿ ಹೆಬ್ಬಾವಿನ ರಕ್ಷಣೆಯ ಕೀರ್ತಿಯೂ ಪವನ್ ನಾಯ್ಕ ಅವರಿಗೆ ಸಂದಂತಾಗಿದೆ.

ಮೆಲಿನಿನ್ ಕೊರತೆಯಿಂದ ಬಿಳಿ ಬಣ್ಣ ಪಡೆಯುವ ಹೆಬ್ಬಾವು..!

‘ಸಾಮಾನ್ಯ ಹೆಬ್ಬಾವಿಗೆ ಹಾಗೂ ಬಿಳಿ ಹೆಬ್ಬಾವಿಗೆ ವ್ಯತ್ಯಾಸ ಇರುವುದಿಲ್ಲ. ಆದರೆ, ದೇಹದಲ್ಲಿ ಮೆಲಿನಿನ್ ಕೊರತೆಯಿಂದ ಹೆಬ್ಬಾವು ಜೈವಿಕವಾಗಿ ಬಿಳಿ ಬಣ್ಣ ಪಡೆಯುತ್ತದೆ. ಇದು ದೇಶದಲ್ಲೇ ಅತಿ ದೊಡ್ಡ ಬಿಳಿ ಹೆಬ್ಬಾವು ಆಗಿರುವ ಸಾಧ್ಯತೆ ಇದೆ. ಹೆಬ್ಬಾವಿನ ಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಿ ಮೈಸೂರು ಪ್ರಾಣಿ ಸಂಗ್ರಹಾಲಯಕ್ಕೆ ಕಳುಹಿಸಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ ತಿಳಿಸಿದ್ದಾರೆ.

ಡಿ.ಎಫ್.ಓ. ರವಿಶಂಕರ್, ಎ.ಸಿ.ಎಫ್.ಒ ಜಿ ಲೋಹಿತ್, ಆರ್.ಎಪ್.ಓ. ಎಸ್ ಟಿ ಪಟಗಾರ್, ಡಿ.ಆರ್.ಎಫ್.ಓ. ಹೂವಣ್ಣ ಗೌಡ ಮೊದಲಾದವರು ಬಿಳಿ ಹೆಬ್ಬಾವು ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ಸ್ಥಳದಲ್ಲಿದ್ದರು.

ಈ ಅಪರೂಪದ ಬಿಳಿ ಹೆಬ್ಬಾವಿನ ಫೊಟೋಗಳನ್ನು ಈ ಭಾಗದ ಖ್ಯಾತ ಛಾಯಾಗ್ರಾಹಕರಾದ ಗೋಪಿ ಜೊಲಿ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

Related post

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ಮೇಷಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ನೀವು ನಿಮ್ಮನ್ನು…
ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್…!!

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ…

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ…
ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದವನ ಕಥೆ ಮುಂದೇನಾಯ್ತು ಗೊತ್ತಾ?

ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ…

ನ್ಯೂಸ್‌ ಆ್ಯರೋ : ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ…

Leave a Reply

Your email address will not be published. Required fields are marked *