ಲಂಡನ್ ನಲ್ಲಿ ಟಿಪ್ಪು ಸುಲ್ತಾನ್ ಚಿನ್ನದ ಖಡ್ಗ ಹರಾಜು – ಉದ್ಯಮಿ ವಿಜಯ್ ಮಲ್ಯ 1.5 ಕೋಟಿಗೆ ಖರೀದಿಸಿದ್ದ ಈ ಖಡ್ಗ ಹೇಗಿದೆ ಗೊತ್ತಾ?

ಲಂಡನ್ ನಲ್ಲಿ ಟಿಪ್ಪು ಸುಲ್ತಾನ್ ಚಿನ್ನದ ಖಡ್ಗ ಹರಾಜು – ಉದ್ಯಮಿ ವಿಜಯ್ ಮಲ್ಯ 1.5 ಕೋಟಿಗೆ ಖರೀದಿಸಿದ್ದ ಈ ಖಡ್ಗ ಹೇಗಿದೆ ಗೊತ್ತಾ?

ನ್ಯೂಸ್ ಆ್ಯರೋ‌ : ಮೇ 23ರಂದು ಲಂಡನ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೈಸೂರಿನ ದೊರೆಯಾಗಿದ್ದ ಟಿಪ್ಪು ಸುಲ್ತಾನ್ ಗೆ ಸೇರಿದ ಅಮೂಲ್ಯವಾದ ಚಿನ್ನಾಭರಣದ ಖಡ್ಗ ಹರಾಜಿಗೆ ಬರಲಿದೆ. ಅದನ್ನು ಟಿಪ್ಪು ಸುಲ್ತಾನ್ ತನ್ನ ಶಯ್ಯ ಕೋಣೆಗಳಲ್ಲಿ ಇಡುತ್ತಿದ್ದ ಎಂದು ಇತಿಹಾಸ ಹೇಳುತ್ತದೆ.

ಇತಿಹಾಸದ ಬಗ್ಗೆ ಅಪಾರ ಉತ್ಸಾಹ ಹೊಂದಿರುವ ಶ್ರೀಮಂತ ವ್ಯಕ್ತಿಯೊಬ್ಬರ ಮನೆಯಲ್ಲಿ ಈ ಖಡ್ಗವನ್ನು ಪ್ರದರ್ಶನಕ್ಕಿಡುವ ಸಾಧ್ಯತೆಯಿದೆ. ಲಂಡನ್‌ನಲ್ಲಿ ಟಿಪ್ಪು ಸುಲ್ತಾನ್‌ನ ಚಿನ್ನದ ಕತ್ತಿಯೂ ಹರಾಜಿಗೆ ಬರಲಿದ್ದು, ಸದ್ಯಕ್ಕೆ ಅದನ್ನು ಗಾಜಿನ ಪೆಟ್ಟಿಗೆಯಲ್ಲಿ ಅವರ ಮನೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಉಕ್ಕಿನ ಖಡ್ಗದ ಮೇಲಿನ ಚಿನ್ನದ ಹಿಡಿಕೆಯನ್ನು ರಾಜಸ್ಥಾನದ ಬುಡಕಟ್ಟು ಜನಾಂಗದ ರಾಜರ ಕಲೆಯ ಆಧಾರದಿಂದ ಕೆತ್ತನೆ ಮಾಡಲಾಗಿದೆ. ಕೋಫ್ಟಗರಿ ಅಲಂಕಾರಿಕ ಕುಸುರಿ ಕೆಲಸವೆಂದು ಇದನ್ನು ಗುರುತಿಸಲಾಗಿದೆ. 1782ರಲ್ಲಿ ತನ್ನ ತಂದೆಯ ಮರಣದ ನಂತರ ಅಧಿಕಾರಕ್ಕೆ ಏರಿದ ಟಿಪ್ಪುವಿನ ವಶದಲ್ಲಿ ಈ ಖಡ್ಗವಿತ್ತು ಎನ್ನುತ್ತದೆ ಚರಿತ್ರೆ.

ಖಡ್ಗದಲ್ಲಿ ಕತ್ತಿಯ ಹಿಡಿತದ ತುದಿಯಿಂದ ಮೊನಚಿನವರೆಗೂ ತುಳುತ್, ಬುಬ್ರಿ ಮೋಟಿಫ್‌ಗಳನ್ನು ಕೆತ್ತಲಾಗಿದೆ. ಇದು ಸುಮಾರು 100 ಸೆಂ.ಮೀ. ಉದ್ದವಿದೆ. ಟಿಪ್ಪು ಸುಲ್ತಾನ್ ಕೊನೆಯದಾಗಿ ಬಳಸಿದ ಈ ಖಡ್ಗವನ್ನು ಈ ಹಿಂದೆ ಹರಾಜು ಮಾಡಲಾಗಿತ್ತು. ಮದ್ಯದ ದೊರೆ ವಿಜಯ ಮಲ್ಯ 2004 ರಲ್ಲಿ ಅದನ್ನು ಖಾಸಗಿ ಹರಾಜಿನಲ್ಲಿ 1.5 ಕೋಟಿ ರೂ.ಗೆ ಖರೀದಿಸಿದ್ದರು.

ಆದರೆ ಅಷ್ಟು ಬೆಲೆಬಾಳುವ ಖಡ್ಗ ಈಗ ಎಲ್ಲಿದೆ ಎಂಬುದು ತಿಳಿದುಬಂದಿಲ್ಲ. 2018ರಲ್ಲಿ ಲಂಡನ್ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಮಲ್ಯ ಅವರ ವಕೀಲರು ತಮ್ಮ ಕಕ್ಷಿದಾರರ ಪರವಾಗಿ ವಾದ ಮಂಡಿಸುತ್ತಾ ಮಲ್ಯ ಐತಿಹಾಸಿಕ ಖಡ್ಗವನ್ನು ಮಾರಾಟ ಮಾಡಿಬಿಟ್ಟರು ಎಂದು ತಿಳಿಸಿದ್ದರು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *