ಕ್ಯಾನ್ಸರ್ ನಿಂದ ಬಳಲಿದ್ದ ಪೋಲಿಸ್ ಶ್ವಾನದ ಚಿಕಿತ್ಸೆ ಸಕ್ಸಸ್ – ಸಾವನ್ನೇ ಗೆದ್ದು ಕರ್ತವ್ಯಕ್ಕೆ ಮರಳಿದ ಪೊಲೀಸ್ ಇಲಾಖೆಯ ಶ್ವಾನ..

ಕ್ಯಾನ್ಸರ್ ನಿಂದ ಬಳಲಿದ್ದ ಪೋಲಿಸ್ ಶ್ವಾನದ ಚಿಕಿತ್ಸೆ ಸಕ್ಸಸ್ – ಸಾವನ್ನೇ ಗೆದ್ದು ಕರ್ತವ್ಯಕ್ಕೆ ಮರಳಿದ ಪೊಲೀಸ್ ಇಲಾಖೆಯ ಶ್ವಾನ..

ನ್ಯೂಸ್ ಆ್ಯರೋ‌ : ಅಪರಾಧಿಗಳು, ಬಾಂಬ್, ಡ್ರಗ್ಸ್, ರಾಸಾಯನಿಕಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ಅತೀ ಹೆಚ್ಚು ನೆರವಾಗುವುದು ಶ್ವಾನಗಳು. ವಾಸನೆ ಮೂಲಕ ಗುರುತಿಸುವ ವಿಶೇಷ ಸಾಮರ್ಥ್ಯವಿರುವ ಅವುಗಳಿಗೆ ತರಬೇತಿ ನೀಡಲಾಗುತ್ತದೆ. ಅದರಂತೆ ವಿಶೇಷ ತರಬೇತಿ ಪಡೆದಿದ್ದ ಲ್ಯಾಬ್ರಾಡಾರ್ ನಾಯಿಯೊಂದು ಕ್ಯಾನ್ಸರ್ ರೋಗದಿಂದ ಮುಕ್ತವಾಗಿ ಪಂಜಾಬ್ ಪೊಲೀಸ್ ಪಡೆಗೆ ಮರಳಿ ಸೇರಿದೆ.

ಪಂಜಾಬ್ ಪೊಲೀಸ್ ಶ್ವಾನ ಪಡೆಯಲ್ಲಿನ ಸಿಮ್ಮಿ ಎಂಬ ಹೆಸರಿನ ನಾಯಿ ಕ್ಯಾನ್ಸರ್ ಗೆ ತುತ್ತಾಗಿತ್ತು. ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸಿದ್ದರಿಂದ ಗುಣಮುಖವಾಗಿ ಇತ್ತೀಚೆಗೆ ಕರ್ತವ್ಯಕ್ಕೆ ಮರಳಿದೆ ಎಂದು ವರದಿ ತಿಳಿಸಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡ ಫರೀದ್ ಕೋಟ್ ನ ಅಧಿಕಾರಿ ಹರ್ಜಿತ್ ಸಿಂಗ್, ಸಿಮ್ಮಿ ದೀರ್ಘ ಕಾಲದ ಕ್ಯಾನ್ಸರ್ ಗೆ ಒಳಗಾಗಿತ್ತು. ಈಗ ಅದರ ಆರೋಗ್ಯ ಸ್ಥಿರವಾಗಿದೆ. ಸಿಮ್ಮಿ ವಿಧ್ವಂಸಕ ನಿಗ್ರಹ ತಪಾಸಣೆಗೆ ನೆರವಾಗುತ್ತದೆ. ಈ ಹಿಂದೆ ವಿದೇಶಿಯರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲು ನೆರವು ನೀಡಿತ್ತು ಎಂದು ಹೇಳಿದ್ದಾರೆ.

ಸೇನೆಯ ಶ್ವಾನಗಳಿಗೆ ಕ್ಯಾಮರಾ ಅಳವಡಿಸಲಾಗುತ್ತದೆ. ಇದರಿಂದ ಉಗ್ರರ ಚಟುವಟಿಕೆಗಳನ್ನು ವೀಕ್ಷಿಸುವ ಜೊತೆಗೆ ಶ್ವಾನಕ್ಕೆ ಸೂಚನೆ ನೀಡಲು ಸಾಧ್ಯವಾಗುತ್ತದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *