ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ದಾಪುಗಾಲು – ಜಪಾನ್’ಗೆ ಸಾಲುಸಾಲು ಸೋಲು!

ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ದಾಪುಗಾಲು – ಜಪಾನ್’ಗೆ ಸಾಲುಸಾಲು ಸೋಲು!

ನ್ಯೂಸ್ ಆ್ಯರೋ‌ : ಐತಿಹಾಸಿಕ ಕ್ಷಣಕ್ಕೆ ನಿನ್ನೆ (ಜು. 14) ಭಾರತ ಸಾಕ್ಷಿಯಾಗಿತ್ತು. ಇಸ್ರೋ ಸಂಸ್ಥೆಯ ಹೆಮ್ಮೆಯ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಯಾಗುವ ಮೂಲಕ ಬಾಹ್ಯಾಕಾಶದಲ್ಲಿ ಭಾರತ ಕೀರ್ತಿ ಪತಾಕೆ ಹಾರಾಡಿತು. ಅಮೆರಿಕ, ರಷ್ಯಾ, ಚೀನಾ ಬಳಿಕ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆ ಇಳಿಸಲಿರುವ 4ನೇ ದೇಶ ಭಾರತ. ಇದೇ ವೇಳೆ ಬಲಿಷ್ಠ ದೇಶ ಜಪಾನ್ ನಡೆಸಿದ ರಾಕೆಟ್ ಪರೀಕ್ಷೆ ವಿಫಲವಾಗಿದೆ.

ಮತ್ತೆ ಮುಗ್ಗರಿಸಿದ ಜಪಾನ್

ಜಪಾನ್ ನ ಬಾಹ್ಯಾಕಾಶ ಸಂಸ್ಥೆಯ ರಾಕೆಟ್ ಎಂಜಿನ್ ಪರೀಕ್ಷೆಯ ಸಂದರ್ಭದಲ್ಲಿ ಸ್ಫೋಟಗೊಂಡಿದೆ. ಇದರಿಂದ ಯಾವುದೇ ಹಾನಿಯಾಗಿಲ್ಲ. ಆದರೆ ಕಳೆದ ಮಾರ್ಚ್ ಮತ್ತು ಜೂನ್ ನಲ್ಲಿ ಇದೇ ರೀತಿಯ ಪ್ರಯತ್ನದಲ್ಲಿ ವಿಫಲವಾಗಿದ್ದ ಜಪಾನ್ ಮತ್ತೊಮ್ಮೆ ಸೋಲಿನ ರುಚಿ ಕಂಡಿದೆ.

ಈ ಹಿಂದೆ ಜಪಾನ್ ಅಮೆರಿಕದ ಜೊತೆ ಕೈಜೋಡಿಸಿ ಹಲವು ಬಾಹ್ಯಾಕಾಶ ಯೋಜನೆಗಳಿಗೆ ಕೈ ಹಾಕಿತ್ತು. ಆದರೆ ಇದೀಗ ಹಲವು ಯೋಜನೆಗಳು ಕೈಕೊಡುತ್ತಿರುವುದು ಆ ದೇಶಕ್ಕೆ ತಲೆನೋವಾಗಿ ಪರಿಣಮಿಸಿದೆ. ಶುಕ್ರವಾರ ಉತ್ತರ ಜಪಾನ್‍ನ ಏರೋಸ್ಪೇಸ್ ಎಕ್ಸ್ ಪ್ಲೋರೇಷನ್ ಏಜೆನ್ಸಿ ಟೆಸ್ಟಿಂಗ್ ಕೇಂದ್ರದಲ್ಲಿ ಎಪ್ಸಿಲಾನ್ ಎಸ್. ಎಂಜಿನ್ ಸ್ಫೋಟಗೊಳ್ಳುವುದರೊಂದಿಗೆ ಜಪಾನ್ ಕನಸು ನುಚ್ಚು ನೂರಾಗಿತ್ತು.

ಚಂದ್ರದ ದಕ್ಷಿಣ ಧ್ರುವದ ಅಧ್ಯಯನ
ಅತ್ಯಂತ ಕಠಿಣ ವಾತಾವರಣದಿಂದ ಕೂಡಿದ ಚಂದ್ರನ ದಕ್ಷಿಣ ಧ್ರುವದ ಅಧ್ಯಯನವೇ ಚಂದ್ರಯಾನ-3ರ ಮೂಲ ಉದ್ದೇಶ. ಚಂದ್ರನ ಮೇಲೆ ನೀರಿನ ಸೆಲೆ ಸೇರಿ ವಿವಿಧ ಪ್ರಶ್ನೆಗಳಿಗೆ ಇಸ್ರೋ ವಿಜ್ಞಾನಿಗಳು ಉತ್ತರ ಹುಡುಕಲಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *