ಒಂದು ಸೂಪರ್ ಕಾರಿನ ಕಥೆ! – ಅಂಬಾನಿಗೂ ದಕ್ಕದ ಸೂಪರ್ ಕಾರ್ ಅಭಿಷೇಕ್ ಗೆ ಸಿಕ್ಕಿದ್ದೇಗೆ?

ಒಂದು ಸೂಪರ್ ಕಾರಿನ ಕಥೆ! – ಅಂಬಾನಿಗೂ ದಕ್ಕದ ಸೂಪರ್ ಕಾರ್ ಅಭಿಷೇಕ್ ಗೆ ಸಿಕ್ಕಿದ್ದೇಗೆ?

ನ್ಯೂಸ್ ಆ್ಯರೋ : ವಾಹನಗಳ ಖರೀದಿ ಕೆಲವರಿಗೆ ಅವಶ್ಯಕತೆಯಾಗಿದ್ರೆ ಇನ್ನೂ ಕೆಲವರಿಗೆ ಅದೊಂದು ಫ್ಯಾಷನ್. ಜಗತ್ತಿನ ಶ್ರೀಮಂತ ವ್ಯಕ್ತಿ ಅಂಬಾನಿಗೂ ಸಿಗದ ಆ ಒಂದು ಐಶಾರಾಮಿ ಸೂಪರ್ ಕಾರನ್ನು ಈ ಒಬ್ಬ ವ್ಯಕ್ತಿ ಇದೀಗ ಖರೀದಿಸಿ ಭಾರೀ ಸುದ್ದಿಯಾಗಿದ್ದಾನೆ. ಅಷ್ಟಕ್ಕೂ ಈ ಐಶಾರಾಮಿ‌ ಕಾರು ಯಾವುದು? ಅದನ್ನ ಖರೀದಿಸಿದವರು ಯಾರು? ಆ ಕಾರಿನಲ್ಲಿರುವ ವಿಶೇಷತೆಗಳೇನು ಎಂಬುದನ್ನೆಲ್ಲ ಈ ವರದಿಯಲ್ಲಿ ನೋಡೋಣ.

ಸೂಪರ್ ಕಾರ್ ಖರೀದಿಸಿದ ಅಭಿಷೇಕ್ ಅಗರ್ವಾಲ್!

ಹೌದು, ಭಾರತದ ಫ್ಯಾಷನ್ ಮತ್ತು ಜೀವನಶೈಲಿ ಉದ್ಯಮದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಪರ್ಪಲ್ ಸ್ಟೈಲ್ ಲ್ಯಾಬ್ಸ್ ಸಿಇಒ ಅಭಿಷೇಕ್ ಅಗರ್ವಾಲ್ (Abhishek Agarwal) ಸೂಪರ್ ಕಾರೊಂದನ್ನ ಖರೀದಿಸಿ ಸುದ್ದಿಯಲ್ಲಿದ್ದಾರೆ. ಅವರು ಸೂಪರ್ ಕಾರುಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿರುವ ಮೆಕ್ಲಾರೆನ್ ಅರ್ಟುರಾ (McLaren’s Artura) ಸೂಪರ್ ಕಾರಿನೊಂದಿಗೆ ತೆಗೆಸಿಕೊಂಡಿದ್ದಾರೆ. ಪ್ರಸಿದ್ಧ ಫೋಟೋಗ್ರಫರ್ ವೈರಲ್ ಭಯಾನಿ ಅವರು ಈ ಫೋಟೋಗಳನ್ನು ತೆಗೆದಿದ್ದು, ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಕ್ಕತ್ ವೈರಲ್ ಆಗಿವೆ.

ಇದ್ಯಾಕೆ ಸೂಪರ್ ಕಾರ್!

ಮೆಕ್ಲಾರೆನ್ ಅರ್ಟುರಾ ಕಾರನ್ನು‌ ಸೂಪರ್ ಕಾರ್ ಎನ್ನಲು ಕಾರಣವೇನು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಇದೊಂದು‌ ಹೈ-ಪರ್ಫಾರ್ಮೆನ್ಸ್ ಹೈಬ್ರಿಡ್ ಸೂಪರ್‌ಕಾರ್ ಆಗಿದ್ದು, ಪವರ್, ದಕ್ಷತೆ ಮತ್ತು ಆಕರ್ಷಣೀಯ ಲುಕ್‌ನೊಂದಿಗೆ ಎಂಥವರನ್ನು ತನ್ನತ್ತ ಸೆಳೆಯುತ್ತದೆ. ಇದರ ಟ್ವಿನ್ ಟರ್ಬೋಚಾರ್ಜ್ಡ್ V6 ಎಂಜಿನ್ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಬರುತ್ತದೆ. ಅಸಾಧಾರಣ ಚಾಲನಾ ಅನುಭವ ಮತ್ತು ಅತ್ಯುತ್ತಮ ಪರ್ಫಾಮೆನ್ಸ್ ನೀಡುತ್ತದೆ.

ಮೆಕ್ಲಾರೆನ್ ಅರ್ಟುರಾ ಎಷ್ಟು‌ ಮೈಲೇಜ್ ನೀಡುತ್ತದೆ?

ಹೈಬ್ರಿಡ್ ಕಾರಾಗಿರುವುದರಿಂದ ಮೆಕ್ಲಾರೆನ್ ಅರ್ಟುರಾ ಅತ್ಯುತ್ತಮ ಮೈಲೇಜ್ ನೀಡುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಈ ಸೂಪರ್ ಕಾರು ಲೀ.ಗೆ 20 ರಿಂದ 22 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಇದು ಕೇವಲ 3 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುವಷ್ಟು ಸಶಕ್ತವಾಗಿದೆ ಎಂದು ಕಂಪೆನಿ‌ ಮೂಲಗಳು‌ ತಿಳಿಸಿವೆ‌.

ಜೊತೆಗೆ ಇ-ಮೋಡ್, ಕಂಫರ್ಟ್ ಮೋಡ್, ಸ್ಪೋರ್ಟ್ ಮೋಡ್ ಮತ್ತು ಟ್ರ್ಯಾಕ್ ಮೋಡ್ ಎಂಬ ಒಟ್ಟು 4 ಡ್ರೈವಿಂಗ್ ಮೋಡ್‌ಗಳು‌ ಲಭ್ಯವಿದೆ. ಹೊಸ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ಮಾರ್ಟ್‌ಫೋನ್ ಮಿರರಿಂಗ್‌ ಗಳನ್ನು‌ ಕೂಡ ಇದರಲ್ಲಿ ಅಳವಡಿಸಲಾಗಿದೆ. ಇನ್ನು ಕಾರಿನ ಬೆಲೆ 5.09 ಕೋಟಿ ರೂ. ನಿಂದ ಆರಂಭವಾಗಲಿದೆ. ಈ ಕಾರಿನ ತೂಕ ಕೇವಲ 1,489 ಕೆ.ಜಿ‌. ಹಾಗಾಗಿಯೇ ಈ ಕಾರು ಕೂಡ 3 ಕೇವಲ ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪುವ ಸಾಮರ್ಥ್ಯ ಹೊಂದಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *