Raveendra Mahajani ; ಫ್ಲ್ಯಾಟೊಂದರಲ್ಲಿ ಶವವಾಗಿ ಪತ್ತೆಯಾದ ಪ್ರಸಿದ್ಧ ನಟ – ಸಾವಿಗೆ ಕಾರಣ ನಿಗೂಢ

Raveendra Mahajani ; ಫ್ಲ್ಯಾಟೊಂದರಲ್ಲಿ ಶವವಾಗಿ ಪತ್ತೆಯಾದ ಪ್ರಸಿದ್ಧ ನಟ – ಸಾವಿಗೆ ಕಾರಣ ನಿಗೂಢ

ನ್ಯೂಸ್ ಆ್ಯರೋ‌ : ಮರಾಠಿ ಚಿತ್ರಗಳ ಜನಪ್ರಿಯ ನಟ, ನಿರ್ದೇಶಕ, 74ರ ಹರೆಯದ ರವೀಂದ್ರ ಮಹಾಜನಿ ಅವರ ಶವ ಶುಕ್ರವಾರ ಪುಣೆಯ ಫ್ಲ್ಯಾಟೊಂದರಲ್ಲಿ ಪತ್ತೆಯಾಗಿದೆ.

ಮೂರ ದಿನ ಹಿಂದೆಯೇ ಮೃತ?ಪುಣೆಯ ತಾಲೇಗಾಂವ್ ನ ಫ್ಲ್ಯಾಟ್ ನಲ್ಲಿ ಈ ಹಿರಿಯ ನಟನ ಶವ ಪತ್ತೆಯಾಗಿದ್ದು, ಮೂರು ದಿನಗಳ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ರವೀಂದ್ರ ಸುಮಾರು ಎಂಟು ತಿಂಗಳಿನಿಂದ ಒಂಟಿಯಾಗಿ ವಾಸಿಸುತ್ತಿದ್ದರು. ಇದರಿಂದ ಅವರು ಖಿನ್ನತೆಗೆ ಜಾರಿದ್ದರು ಎನ್ನಲಾಗಿದೆ. ಫ್ಲ್ಯಾಟ್ ನಿಂದ ವಾಸನೆ ಬರುವುದನ್ನು ಗಮನಿಸಿದ ನೆರೆಮನೆಯವರು ಪೊಲೀಸರನ್ನು ಕರೆಸಿದ ಬಳಿಕ ಪ್ರಕರಣ ಬೆಳಕಿಗೆ ಬಂತು.

ಕಾರಣ ತಿಳಿದುಬಂದಿಲ್ಲ

ರವೀಂದ್ರ ಅವರ ಸಾವಿಗೆ ಖಚಿತ ಕಾರಣ ತಿಳಿದು ಬಂದಿಲ್ಲ. ಆತ್ಮಹತ್ಯೆಯೋ ಅಥವಾ ಸಹಜ ಸಾವೋ ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಳಿಕ ತಿಳಿಯಲಿದೆ.

ರವೀಂದ್ರ 70 ಮತ್ತು 80ರ ದಶಕದಲ್ಲಿ ಮರಾಠಿ ಚಿತ್ರರಂಗದ ಜನಪ್ರಿಯ ನಟ, ನಿರ್ದೇಶಕರಾಗಿದ್ದರು. ‘ಮುಂಬೈ ಚಾ ಫೌಜ್ದರ್’, ‘ಕಲಾತ್ ನಕಲತ್’ ಅವರು ನಟಿಸಿದ ಕೆಲವು ಪ್ರಸಿದ್ದ ಮರಾಠಿ ಚಿತ್ರಗಳು. ಜೊತೆಗೆ ಹಿಂದಿ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ. 2019ರಲ್ಲಿ ತೆರೆಕಂಡ ಬಾಲಿವುಡ್ ನ ‘ಪಾಣಿಪತ್’ ಚಿತ್ರದಲ್ಲಿ ನಟಿಸಿದ್ದರು. ಇವರ ಪುತ್ರ ಗಶ್ಮೀರ್ ಮಹಾಜನಿ ಕೂಡ ಮರಾಠಿ ಚಿತ್ರರಂಗದ ಪ್ರಸಿದ್ಧ ನಟರಾಗಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *