ಚಂದ್ರಯಾನ 3ರ ಕೌಂಟ್ ಡೌನ್ ಧ್ವನಿ, ವಿಜ್ಞಾನಿ ವಲರ್ಮತಿ ನಿಧನ – ಇಸ್ರೋ ವಿಜ್ಞಾನಿಗಳಿಂದ ತೀವ್ರ ಸಂತಾಪ

ಚಂದ್ರಯಾನ 3ರ ಕೌಂಟ್ ಡೌನ್ ಧ್ವನಿ, ವಿಜ್ಞಾನಿ ವಲರ್ಮತಿ ನಿಧನ – ಇಸ್ರೋ ವಿಜ್ಞಾನಿಗಳಿಂದ ತೀವ್ರ ಸಂತಾಪ

ನ್ಯೂಸ್ ಆ್ಯರೋ : ಚಂದ್ರಯಾನ 3 ವೇಳೆ ರಾಕೆಟ್ ಉಡಾವಣೆಯ ಕ್ಷಣಗಣನೆ ಸಂದರ್ಭದಲ್ಲಿ ಧ್ವನಿ ನೀಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ವಲರ್ಮತಿ ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಅವರಿಗೆ ಐವತ್ತು ವರ್ಷ ವಯಸ್ಸಾಗಿತ್ತು.

ಇಸ್ರೋದಲ್ಲಿ, ರಾಕೆಟ್ ಉಡಾವಣೆ ಸಮಯದಲ್ಲಿ ಕೌಂಟ್‌ಡೌನ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಕೌಂಟ್ ಡೌನ್ ಕರ್ತವ್ಯವನ್ನು ತಮ್ಮ ಗಂಭೀರ ಧ್ವನಿಯಿಂದ ನಿರ್ವಹಿಸಿದ್ದ ವಲರ್ಮತಿ ಅವರು ಶನಿವಾರ ರಾತ್ರಿ ಚೆನ್ನೈನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದ ಬಗ್ಗೆ ಮಾಹಿತಿ ಲಭಿಸಿದೆ.

ವಲರ್ಮತಿ ಅವರು ಚಂದ್ರಯಾನ-3 ಸೇರಿದಂತೆ ಇಸ್ರೋ ಕೈಗೊಂಡ ಅನೇಕ ಪ್ರಯೋಗಗಳ ಉಸ್ತುವಾರಿ ವಹಿಸಿದ್ದರು. ಆದರೆ ಜುಲೈ 14 ರಂದು ಅತ್ಯಂತ ಯಶಸ್ವಿಯಾದ ಚಂದ್ರಯಾನ-3 ಉಡಾವಣೆಯು ಅವರ ಕೊನೆಯ ಧ್ವನಿಯಾಗಿದ್ದು, ಪ್ರಪಂಚದಾದ್ಯಂತ ಈ ಧ್ವನಿ ವೀಕ್ಷಕರು ಕೇಳುವಂತಾಗಿತ್ತು.

ತಮಿಳುನಾಡಿನ ಅರಿಯಲೂರಿನಲ್ಲಿ 1959 ರಲ್ಲಿ ಜನಿಸಿದ ವಲರ್ಮತಿ ಅವರು 1984 ರಿಂದ ಇಸ್ರೋ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದರು. ಇಸ್ರೋದ ಮಾಜಿ ನಿರ್ದೇಶಕ ಡಾ.ಪಿ.ವಿ.ವೆಂಕಟಕೃಷ್ಣನ್ ಅವರು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ ಮತ್ತು ಚಂದ್ರಯಾನ – 3 ಅವರ ಅಂತಿಮ ಕೌಂಟ್‌ಡೌನ್‌ ಘೋಷಣೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

“ಶ್ರೀಹರಿಕೋಟಾದಿಂದ ಇಸ್ರೋದ ಭವಿಷ್ಯದ ಮಿಷನ್‌ಗಳ ಕ್ಷಣಗಣನೆಗೆ ವಲರಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ 3 ಅವರ ಅಂತಿಮ ಕ್ಷಣಗಣನೆ ಘೋಷಣೆಯಾಗಿತ್ತು. ಅನಿರೀಕ್ಷಿತ ನಿಧನ. ತುಂಬಾ ದುಃಖವಾಗುತ್ತಿದೆ. ಪ್ರಣಾಮ್ಸ್!” ಎಂದು ಡಾ. ವೆಂಕಟಕೃಷ್ಣನ್ X ನಲ್ಲಿ ಬರೆದಿದ್ದಾರೆ.

ಕಳೆದ ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಅನ್ನು ಉಡಾವಣೆ ಮಾಡಲಾಯಿತು. ಆಗಸ್ಟ್ 23 ರಂದು, ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಒಳಗೊಂಡಿರುವ ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯನ್ನು ಸ್ಪರ್ಶಿಸಿತು. ಈ ಮೂಲಕ ಈ ಸಾಧನೆಯನ್ನು ಸಾಧಿಸಿದ ನಾಲ್ಕನೇ ದೇಶವಾಗಿ ಗುರುತಿಸಿಕೊಂಡಿದೆ.

Related post

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು…

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ…
ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!! – ಕೋಟ್ಯಾಂತರ ರೂಪಾಯಿ ಒಡೆಯ ಈ ತಾತ ಮಾಡೋದೇನು?

ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!!…

ನ್ಯೂಸ್ ಆ್ಯರೋ : ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ.…
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ ಮೇಲೆ ಕಾಳಜಿ ಇರುವವರು ಈ ವರದಿ ಓದಿ..

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ…

ನ್ಯೂಸ್ ಆ್ಯರೋ : ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು…

Leave a Reply

Your email address will not be published. Required fields are marked *