ಚಂದ್ರಯಾನ 3 ನೌಕೆಯನ್ನು ಕಂಟ್ರೋಲ್ ಮಾಡುತ್ತೆ ಬೆಂಗಳೂರಿನ ಬ್ಯಾಲಾಳು ಕೇಂದ್ರ – ಹಲವರಿಗೆ ಗೊತ್ತಿಲ್ಲದ ಆಸಕ್ತಿಕರ ಸುದ್ದಿ ಇಲ್ಲಿದೆ..

ಚಂದ್ರಯಾನ 3 ನೌಕೆಯನ್ನು ಕಂಟ್ರೋಲ್ ಮಾಡುತ್ತೆ ಬೆಂಗಳೂರಿನ ಬ್ಯಾಲಾಳು ಕೇಂದ್ರ – ಹಲವರಿಗೆ ಗೊತ್ತಿಲ್ಲದ ಆಸಕ್ತಿಕರ ಸುದ್ದಿ ಇಲ್ಲಿದೆ..

ನ್ಯೂಸ್ ಆ್ಯರೋ‌ : ಚಂದ್ರನ ಅಂಗಳದಲ್ಲಿ ಇಳಿಯುವ ಉದ್ದೇಶದೊಂದಿಗೆ ನಭಕ್ಕೆ ಜುಲೈ 14ರಂದು ನೆಗೆದಿದ್ದ ಚಂದ್ರಯಾನ-3 ಯಶಸ್ವಿಯಾಗಿ ತನ್ನ ಯಾತ್ರೆ ಮುಂದುವರಿಸಿದೆ. ಆಗಸ್ಟ್ 23ರಂದು ನೌಕೆ ಸುರಕ್ಷಿತವಾಗಿ ಚಂದ್ರನ ಅಂಗಳದಲ್ಲಿ ಇಳಿಯಲಿದೆ.

ಗ್ರೌಂಡ್ ಫೆಸಿಲಿಟೀಸ್

ಗಗನಕ್ಕೆ ಚಿಮ್ಮಿದ ರಾಕೆಟ್ ಜೊತೆಗೆ ಚಂದ್ರಯಾನ-3 ಯಶಸ್ಸಿಗೆ ಅದರ ಭೂ ಸೌಲಭ್ಯಗಳು (ಗ್ರೌಂಡ್ ಫೆಸಿಲಿಟೀಸ್) ಕೂಡ ಕಾರಣ. ಅಂದರೆ ಭೂಮಿಯ ಸುತ್ತಲಿನ ಮತ್ತು ಚಂದ್ರನ ಸುತ್ತಲಿನ ಕಕ್ಷೆಯಿಂದ ಇಲ್ಲವೆ ಚಂದ್ರನ ಮೇಲ್ಮೈಯಿಂದ ಆ ನೌಕೆ ರೇಡಿಯೋ ತರಂಗದ ರೂಪದಲ್ಲಿ ಹೊರ ಸೂಸುವ ಪ್ರಮುಖ ವೈಜ್ಞಾನಿಕ ಮಾಹಿತಿ ಕಲೆ ಹಾಕುವುದು, ಅಗತ್ಯ ರೇಡಿಯೋ ಆಜ್ಞೆಗಳನ್ನು ನೌಕೆಗೆ ರವಾನಿಸುವುದು ಭೂ ಸೌಲಭ್ಯಗಳ ಮುಖ್ಯ ಕೆಲಸ.

ಈ ಸೌಲಭ್ಯಗಳ ಪೈಕಿ ಬೆಂಗಳೂರು ಸಮೀಪದ ಬ್ಯಾಲಾಳುವಿನಲ್ಲಿರುವ ಇಂಡಿಯನ್ ಡೀಪ್ ಸ್ಪೇಸ್ ನೆಟ್ ವರ್ಕ್ ಮತ್ತು ಚಂದ್ರಯಾನ-3 ಅಭಿಯಾನದ ಕೇಂದ್ರ ಸ್ಥಾನದಂತಿರುವ ಪೀಣ್ಯಾದಲ್ಲಿನ ಅದರ ನಿಯಂತ್ರಣ ಕೇಂದ್ರ ಮಾಕ್ಸ್-ಇವುಗಳ ಸಮರ್ಥ ಕಾರ್ಯ ನಿರ್ವಹಣೆ ಚಂದ್ರಯಾನ-3 ಯಶಸ್ಸಿಗೆ ಕಾರಣವಾಗುತ್ತದೆ.

ಬ್ಯಾಲಾಳುವಿನಲ್ಲಿರುವ ಇಂಡಿಯನ್ ಡೀಪ್ ಸ್ಪೇಸ್ ನೆಟ್ ವರ್ಕ್ ನೆಲೆಯಲ್ಲಿ 32 ಮೀಟರ್ ಮತ್ತು 18 ಮೀಟರ್ ಅಗಲವಿರುವ ಎರಡು ಬೃಹತ್ ಸಂಪರ್ಕ ಆಂಟೇನಾಗಳಿವೆ.

350 ಟನ್ ತೂಕದ 32 ಮೀಟರ್ ಅಗಲದ ಆಂಟೇನಾ ಚಂದ್ರಯಾನ-1, 2 ಮತ್ತು 3, ಮಂಗಳಯಾನ ನೌಕೆಗಳ ಯೋಜನೆಯಲ್ಲಿ ಉತ್ತಮ ಸೇವೆ ನೀಡಿದೆ. ಈ ತಾಂತ್ರಿಕ ವಿಸ್ಮಯದ ನಿರ್ಮಾಣದ ನೇತೃತ್ವವನ್ನು ಕನ್ನಡಿಗರಾದ ಎಸ್.ಕೆ. ಶಿವಕುಮಾರ್ ವಹಿಸಿದ್ದರು.

ಕಾರ್ಯ ವಿಧಾನ

ಲಕ್ಷಾಂತರ, ಕೋಟ್ಯಾಂತರ ಕಿ.ಮೀ. ದೂರದಲ್ಲಿರುವ ಅಂತರಿಕ್ಷ ನೌಕೆಗಳು ಹೊರಡಿಸುವ ಮಾಹಿತಿಯನ್ನು ಹೊತ್ತ ರೇಡಿಯೋ ತರಂಗಗಳು ಭೂಮಿಗೆ ತಲುಪುವಾಗ ಬಹಳಷ್ಟು ಕ್ಷೀಣವಾಗಿರುತ್ತವೆ. ಈ ಬೃಹತ್ ಆಂಟೇನಾ ಮಾಹಿತಿಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತದೆ. ಈ ಆಂಟೇನಾದಲ್ಲಿರುವ 7 ಕನ್ನಡಿಗಳನ್ನು ಹೊಂದಿರುವ ವಿಶೇಷ ವ್ಯವಸ್ಥೆ ನೌಕೆಯಿಂದ ಬರುವ ಕ್ಷೀಣ ರೇಡಿಯೋ ತರಂಗಗಳ ಶಕ್ತಿಯನ್ನು ವೃದ್ದಿಸುತ್ತದೆ. ಬಳಿಕ ಈ ವೈಜ್ಞಾನಿಕ ಮಾಹಿತಿಗಳನ್ನು ಬ್ಯಾಲಾಳುವಿನಲ್ಲಿರುವ ದತ್ತಾಂಶಗಳ ಕೇಂದ್ರದಲ್ಲಿ ಕ್ರಮಬದ್ದವಾಗಿ ಸಂಗ್ರಹಿಸಲಾಗುತ್ತದೆ. ನೌಕೆಯ ಸ್ಥಿತಿಯನ್ನು ಮತ್ತು ಯಾನದ ವಿವರಗಳನ್ನು ಪೀಣ್ಯಾದ ಮಾಕ್ಸ್ ಗೆ ರವಾನಿಸಲಾಗುತ್ತದೆ.

ಅದೇ ರೀತಿ ವಿಜ್ಞಾನಿಗಳು ನೌಕೆ ಮಾಡಬೇಕಾದ ಕೆಲಸಗಳನ್ನು ಈ ಆಂಟೇನಾಗೆ ರವಾನಿಸುತ್ತಾರೆ. ಅದನ್ನು ಆಂಟೇನಾ ರೇಡಿಯೋ ತರಂಗ ರೂಪದಲ್ಲಿ ಚಂದ್ರಯಾನ-3ಗೆ ತಿಳಿಸುತ್ತದೆ. ಹೀಗೆ ಆಂಟೇನಾ ಪ್ರಮುಖ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *