ಆದಿತ್ಯ ಎಲ್-1: ಮೊದಲ ಕಕ್ಷೆ ಪೂರ್ಣಗೊಳಿಸಿದ PSLV-C57 – ಸೂರ್ಯನತ್ತ ದಿಟ್ಟ ಹೆಜ್ಜೆ ಇಟ್ಟ ಇಸ್ರೋ

ಆದಿತ್ಯ ಎಲ್-1: ಮೊದಲ ಕಕ್ಷೆ ಪೂರ್ಣಗೊಳಿಸಿದ PSLV-C57 – ಸೂರ್ಯನತ್ತ ದಿಟ್ಟ ಹೆಜ್ಜೆ ಇಟ್ಟ ಇಸ್ರೋ

ನ್ಯೂಸ್ ಆ್ಯರೋ‌ : ಇಸ್ರೋ ಚಂದ್ರಯಾನ-3 ಯಶಸ್ವಿಯಾಗಿ ಮುಗಿಸಿದೆ. ಇದರ ಬೆನ್ನಲ್ಲೇ ಸೂರ್ಯನ ಅಧ್ಯಯನಕ್ಕೆ ಮುಂದಾಗಿದೆ. ಅದರ ಭಾಗವಾಗಿ ಇಂದು (ಆಗಸ್ಟ್ 3) ಬಾಹ್ಯಾಕಾಶ ನೌಕೆ ಆದಿತ್ಯ ಎಲ್-1 ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ತನ್ನ ಸೌರ ಅನ್ವೇಷಣೆಯತ್ತ ಮತ್ತೊಂದು ಹೆಜ್ಜೆ ಮುಂದಿರಿಸಿದೆ. ಪಿ.ಎಸ್.ಎಲ್.ವಿ. -ಸಿ57 ಉಡಾವಣಾ ವಾಹನದ ಮೂಲಕ ಆದಿತ್ಯ ಎಲ್-1 ಅನ್ನು ಉಡಾವಣೆ ಮಾಡಲಾಗಿದೆ.

ಉದ್ದೇಶಿತ ಕಕ್ಷೆಗೆ ಸೇರ್ಪಡೆ

ಸೆಪ್ಟೆಂಬರ್ 5ರಂದು ಮತ್ತೊಂದು ಹೆಜ್ಜೆ ಇಡಲಿದೆ. ವಾಹನವು ಈಗಾಗಲೇ ಉಪಗ್ರಹವನ್ನು ನಿಖರವಾಗಿ ಉದ್ದೇಶಿತ ಕಕ್ಷೆಗೆ ಸೇರಿಸಿದೆ. ಅಲ್ಲಿಂದ ಗಮ್ಯ ಸ್ಥಾನವಾದ ಸೂರ್ಯ-ಭೂಮಿಯ ಎಲ್-1 ಪಾಯಿಂಟ್ ಕಡೆಗೆ ಪ್ರಯಾಣ ಮುಂದುವರಿಸಲಿದೆ.

ಆದಿತ್ಯ ಎಲ್-1 ನೌಕೆಯು ಅಂಡಾಕಾರದ ಕ್ಷೆಯಲ್ಲಿ ಸೂರ್ಯನತ್ತ ಸಾಗುತ್ತದೆ. ಅಂತಿಮವಾಗಿ ಅದನ್ನು ಸೂರ್ಯ-ಭೂ ಮಂಡಲದ ಲಗ್ರಾಂಜ್ ಬಿಂದು 1 ಸುತ್ತಲಿನ ಕಕ್ಷೆಗೆ ಸೇರಿಸಲಾಗುತ್ತದೆ. ಈ ಬಿಂದು ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ. ದೂರದಲ್ಲಿದೆ.

ಉದ್ದೇಶವೇನು?

ಕೊರೊನಾ‌ (ಸೂರ್ಯನ ವಾತಾವರಣದ ಅತ್ಯಂತ ಹೊರಗಿನ ಭಾಗ) ಬಿಸಿಯಾಗುವ ಪ್ರಕ್ರಿಯೆ, ಸೌರ ಮಾರುತದ ಅಧ್ಯಯನ, ಭೂಮಿಯ ಸಮೀಪದ ಹವಾಮಾನವನ್ನು ಅರ್ಥ ಮಾಡಿಕೊಳ್ಳುವುದು ಆದಿತ್ಯ ಎಲ್-1 ಯೋಜನೆಯ ಮುಖ್ಯ ಉದ್ದೇಶ.

Related post

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ಮೇಷಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ನೀವು ನಿಮ್ಮನ್ನು…
ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್…!!

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ…

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ…
ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದವನ ಕಥೆ ಮುಂದೇನಾಯ್ತು ಗೊತ್ತಾ?

ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ…

ನ್ಯೂಸ್‌ ಆ್ಯರೋ : ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ…

Leave a Reply

Your email address will not be published. Required fields are marked *