ಹೃದಯಾಘಾತಕ್ಕೆ ಕಾರಣವಾಗಬಲ್ಲ ಅಂಶಗಳು ಯಾವುವು ಗೊತ್ತಾ? – ಅಪಾಯದಿಂದ ಪಾರಾಗೋದು ಹೇಗೆ?

ಹೃದಯಾಘಾತಕ್ಕೆ ಕಾರಣವಾಗಬಲ್ಲ ಅಂಶಗಳು ಯಾವುವು ಗೊತ್ತಾ? – ಅಪಾಯದಿಂದ ಪಾರಾಗೋದು ಹೇಗೆ?

ನ್ಯೂಸ್ ಆ್ಯರೋ‌ : ಬದಲಾದ ಜೀವನ ಶೈಲಿ, ಕಲುಷಿತ ಆಹಾರ ಸೇವನೆಯಿಂದ ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಮಾಣ ಹೆಚ್ಚುತ್ತಿದೆ. ಕೆಲವೊಮ್ಮೆ ಅಸಮರ್ಪಕ ರಕ್ತದ ಹರಿವಿನಿಂದ ಹೃದಯದ ಸ್ನಾಯು ಹದಗೆಡಲು ಪ್ರಾರಂಭಿಸುತ್ತದೆ. ಕೂಡಲೇ ರಕ್ತದ ಹರಿವನ್ನು ಪುನಃಸ್ಥಾಪಿಸದಿದ್ದರೆ ಸಾವು ಸಂಭವಿಸಬಹುದಾಗಿದೆ. ಇದನ್ನು ಸಾಮಾನ್ಯವಾಗಿ ಹೃದಯಾಘಾತ ಎನ್ನಲಾಗುತ್ತದೆ. ಹೃದಯಾಘಾತಕ್ಕೆ ಕಾರಣವಾಗುವ ಕೆಲವು ಅಂಶಗಳನ್ನು ನಿಮಗೆ ತಿಳಿಸುತ್ತೇವೆ. ಈ ಲಕ್ಷಣ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಕೊಲೆಸ್ಟ್ರಾಲ್

ಆಹಾರದಲ್ಲಿನ ವ್ಯತ್ಯಾಸ, ಅನಾರೋಗ್ಯಕ ಆಹಾರ ಪದ್ಧತಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು. ನಾರಿನಾಂಶಯುಕ್ತ ಆಹಾರ, ಪೌಷ್ಟಿಕಾಂಶಯುಕ್ತ, ಕಡಿಮೆ ಕೊಬ್ಬನಾಂಶ ಹೊಂದಿದ ಆಹಾರ ಸೇವನೆ, ನಿಯಮಿತ ವ್ಯಾಯಾಮದ ಮೂಲಕ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು. ಅಗತ್ಯಬಿದ್ದರೆ ಈ ಬಗ್ಗೆ ತಜ್ಞ ವೈದ್ಯರ ಸಲಹೆ ಪಡೆಯಿರಿ.

ಮಧುಮೇಹ

ಮಧುಮೇಹ (ಡಯಾಬಿಟಿಸ್) ನಿಯಂತ್ರಣದಲ್ಲಿರದಿದ್ದರೆ ಹೃದಯಕ್ಕೆ ಬಾಧಿಸಲಿದೆ. 65 ದಾಟಿದ ಮಧುಮೇಹಿಗಳಿಗೆ ಹೃದ್ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಶೇ. 68ಕ್ಕಿಂತ ಹೆಚ್ಚು ಎಂದು ತಜ್ಞರು ಎಚ್ಚರಿಸುತ್ತಾರೆ. ಜೀವನ ರೀತಿಯಲ್ಲಿ ಬದಲಾವಣೆ ತಂದುಕೊಳ್ಳುವ ಮೂಲಕ ಮಧುಮೇಹ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.

ಅತಿಯಾದ ರಕ್ತದೊತ್ತಡ

ಹೃದಯಾಘಾತಕ್ಕೆ ಅತಿಯಾದ ರಕ್ತದೊತ್ತಡವೂ ಪ್ರಮುಖ ಕಾರಣ. ರಕ್ತದೊತ್ತಡ ಹೆಚ್ಚಿದಷ್ಟು ಹೃದಯ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಉಂಟಾಗುವ ಹೃದಯದ ಸ್ನಾಯು ಬಿಗಿತದಿಂದ ಹೃದಯಾಘಾತ ಸಂಭವಿಸಬಹುದು. ಹೀಗಾಗಿ ರಕ್ತದೊತ್ತಡ ನಿಯಂತ್ರಿಸಲು ಕ್ರಮ ಕೈಗೊಳ್ಳಿ. ಸೂಕ್ತ ವ್ಯಾಯಾಮ ಮಾಡಿ. ಕಡಿಮೆ ಉಪ್ಪು ಮತ್ತು ಕಡಿಮೆ ಕೊಬ್ಬಿನ ಆಹಾರ ಸೇವಿಸಿ. ಮದ್ಯದ ಸೇವನೆ ತ್ಯಜಿಸಿ.

ಸ್ಥೂಲಕಾಯತೆ

ಸ್ಥೂಲಕಾಯತೆಯಿಂದ ಕೊಲೆಸ್ಟ್ರಾಲ್, ರಕ್ತದ ಒತ್ತಡ ಹೆಚ್ಚಾಗಿ ಹೃದಯಾಘಾತ ಸಂಭವಿಸುವ ಸಾಧ್ಯತೆ ಅಧಿಕ. ಡಯಟ್, ಸೂಕ್ತ ಆಹಾರ ಸೇವನೆ, ನಿಯಮಿತ ವ್ಯಾಯಾಮದಿಂದ ತೂಕ ಕಳೆದುಕೊಂಡು ಫೀಟ್ ಆಗಬಹುದು.

ಧೂಮಪಾನ

ಪ್ರತೀ 5 ಹೃದಯಾಘಾತಗಳ ಪೈಕಿ ಒಂದರ ಕಾರಣ ಧೂಮಪಾನ ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ. ಧೂಮಪಾನ ಮಾಡುವವರಿಗೆ ಹೃದಯಾಘಾತ ಕಾಣಿಸಿಕೊಳ್ಳುವ ಸಾಧ್ಯತೆ 2ರಿಂದ 4 ಪಟ್ಟು ಅಧಿಕ. ಧೂಮಪಾನ ಮಾಡುವುದರಿಂದ ಹೃದಯಕ್ಕೆ ಬೇಕಾದಷ್ಟು ಪ್ರಮಾಣದಲ್ಲಿ ಆಮ್ಲಜನಕ ಸಿಗುವುದಿಲ್ಲ. ಅಲ್ಲದೆ ರಕ್ತದೊತ್ತಡ ಹೆಚ್ಚಿಸುತ್ತದೆ, ರಕ್ತ ನಾಳಗಳಿಗೆ ಹಾನಿ ಉಂಟಾಗುತ್ತದೆ. ಜೊತೆಗೆ ಇದು ರಕ್ತ ಹೆಪ್ಪುಗಟ್ಟುವ ಅಪಾಯವನ್ನು ಹೆಚ್ಚಿಸುತ್ತದೆ.

ವ್ಯಾಯಾಮದ ಕೊರತೆ

ಬದಲಾದ ಜೀವನ ಶೈಲಿಯೇ ಹೃದಯಾಘಾತ ಹೆಚ್ಚಲು ಮುಖ್ಯ ಕಾರಣ. ಶರೀರಕ್ಕೆ ಸೂಕ್ತ ವ್ಯಾಯಾಮ ಸಿಗದೆ ಈ ಸಮಸ್ಯೆ ಕಂಡುಬರುತ್ತದೆ. ಹೀಗಾಗಿ ದೈಹಿಕ ಚಟುವಟಿಕೆಗಳಿಗೆ ಸಮಯ ಮೀಸಲಿಡಿ.

ಸ್ಥೂಲಕಾಯತೆ ಮಧುಮೇಹ, ಕೊಲೆಸ್ಟ್ರಾಲ್, ರಕ್ತದೊತ್ತಡ, ಸ್ಥೂಲಕಾಯತೆ ಮುಂತಾದ ಸಮಸ್ಯೆಗಳನ್ನೂ ವ್ಯಾಯಾಮದಿಂದ ಪರಿಹರಿಸಬಹುದು. ವಯಸ್ಕರು ವಾರಕ್ಕೆ ಕನಿಷ್ಠ 75 ನಿಮಿಷಗಳ ಕಠಿಣ ವ್ಯಾಯಾಮ ಅಥವಾ ಸುಮಾರು 150 ನಿಮಿಷಗಳ ಮಾಧ್ಯಮಿಕ ವ್ಯಾಯಾಮಗಳ ಗುರಿ ಇಟ್ಟುಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಒತ್ತಡ

ಅತಿಯಾದ ಒತ್ತಡವೂ ಹೃದಯಾಘಾತಕ್ಕೆ ಕಾರಣವಾಗಬಲ್ಲದು. ವಿವಿಧ ಒತ್ತಡ ನಿವಾರಕಗಳ ಪೈಕಿ ನಿಮಗೆ ಯಾವುದು ಸೂಕ್ತ ಎನ್ನುವುದನ್ನು ನಿರ್ಧರಿಸಿ ಆಯ್ದುಕೊಳ್ಳಿ. ಯೋಗ, ಉಸಿರಾಟದ ವ್ಯಾಯಾಮ ಮಾಡುವುದು, ಟೈಮ್ ಟೇಬಲ್ ಅಳವಡಿಕೆ, ಸೂಕ್ತ ಸಮಯ ನಿರ್ವಹಣೆ ಮೂಲಕ ಒತ್ತಡ ನಿಯಂತ್ರಿಸಬಹುದು.

ವಯಸ್ಸು

ಹೃದಯಾಘಾತ ಯಾವ ವಯಸ್ಸಿನವರಿಗೂ ಕಾಡಬಹುದಾದರೂ ಮಧ್ಯ ವಯಸ್ಸು ದಾಟಿದವರಲ್ಲಿ ಸಾಧ್ಯತೆ ಅಧಿಕ. 45 ವರ್ಷ ದಾಟಿದ ಪುರುಷರು ಮತ್ತು 50 ವರ್ಷ ದಾಟಿದ ಮಹಿಳೆಯರು ಈ ವಿಚಾರದಲ್ಲಿ ಹೆಚ್ಚು ಮುಂಜಾಗ್ರತೆ ವಹಿಸಬೇಕು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *