ಗೆಳತಿಯ ನೋಡಲು ಬಂದ ನಕ್ಸಲ್ ಅಂದರ್; ಸಿಸಿಬಿ ಕಾರ್ಯಾಚರಣೆ
ನ್ಯೂಸ್ ಆ್ಯರೋ : ಗೆಳತಿಯನ್ನು ಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ದ ಹರಿಯಾಣದ ನಕ್ಸಲ್ನನ್ನು ಸಿಸಿಬಿ ತಂಡವು ಬಂಧಿಸಿದೆ. ಬಂಧಿತ ನಕ್ಸಲ್ ಹರಿಯಾಣ ಮೂಲದ ಅನಿರುದ್ದ್ ರಾಜನ್ ಎಂದು ಗುರುತಿಸಲಾಗಿದೆ.
ಅನಿರುದ್ದ್ ನಿಷೇಧಿತ ಸಿಪಿಐ ನಕ್ಸಲ್ ಸಂಘಟನೆಯಲಿದ್ದು, ತನ್ನ ಖಾತೆಯಲ್ಲಿ ನಿಷೇಧಿತ ಬರಹಗಳನ್ನು ಬರೆದು ಪೋಸ್ಟ್ ಮಾಡುತ್ತಿದ್ದನು. ಈತನಿಗಾಗಿ ಪೊಲೀಸ್ ಮತ್ತು ನಕ್ಸಲ್ ನಿಗ್ರಹ ತಂಡ ಹಲವು ದಿನಗಳಿಂದ ಬಲೆಯನ್ನು ಬೀಸುತ್ತಿದ್ದರು. ಆದರೆ ಈತ ಯಾರಿಗೂ ಪತ್ತೆಯಾಗಿರಲಿಲ್ಲ.
ಅನಿರುದ್ದ್ ತನ್ನ ಗೆಳತಿಯನ್ನು ನೋಡಲು ಕಳೆದ ಕೆಲವು ದಿನದ ಹಿಂದೆ ಬೆಂಗಳೂರಿಗೆ ಆಗಮಿಸಿದ್ದನು. ಈತ ಗುರುವಾರ ಬೆಳಗ್ಗೆ 8 ಗಂಟೆಗೆ ಚೆನ್ನೈಗೆ ತೆರಳಲು ಕೆಎಸ್‌ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದನು. ಈ ವೇಳೆ ಅನಿರುದ್ದ್ ನನ್ನು ಸಿಸಿಬಿಯ ಎಟಿಸಿ ತಂಡ ಬಂಧಿಸಿದೆ.
ಈ ಪ್ರಕರಣದ ತನಿಖೆ ವೇಳೆ, ಅನಿರುದ್ದ್ ರಾಜನ್ ಹಣ ಸಂಗ್ರಹ ಮಾಡಿ ಗುಪ್ತ ಸಭೆಗಳನ್ನು ನಡೆಸಿರುವುದು ಪತ್ತೆಯಾಗಿದೆ. ಇದರ ಜೊತೆಗೆ ನಕ್ಸಲ್ ಅನಿರುದ್ದ್ ವಿಕಾಸ್ ಘಾಡ್ಗೆ ಎಂಬ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಕೊಂಡಿದ್ದನು.
ಆರೋಪಿಯಿಂದ 2 ಬ್ಯಾಗ್, ಪೆನ್ ಡ್ರೈವ್ ಗಳನ್ನು ಹಾಗೂ ಟ್ಯಾಬ್ ಅನ್ನು ಪೊಲೀಸರು ವಶ ಪಡೆದಿದ್ದಾರೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment