ರೈತರಿಗೆ ಗುಡ್​ನ್ಯೂಸ್: ಸರ್ಕಾರಿ ಭೂಮಿ ಸಕ್ರಮಗೊಳಿಸಲು ಮುಂದಾದ ಸರ್ಕಾರ

krishna byre gowda
Spread the love

ನ್ಯೂಸ್ ಆ್ಯರೋ: ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವ ಬಗರ್​ ಹುಕುಂ ಯೋಜನೆಯಡಿಯಲ್ಲಿ ತಿರಸೃತಗೊಂಡಿದ್ದ ಅರ್ಜಿಗಳನ್ನು ಪುನರ್​ ಪರಿಶೀಲಿಸಲಾಗುವುದು ಎಂದು ಇತ್ತೀಚೆಗೆ ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ಹೇಳಿದ್ದರು. ಅದರಂತೆಯೆ ಇದೀಗ ಸರ್ಕಾರಿ ಭೂಮಿ ಸಕ್ರಮಗೊಳಿಸುವ ಅರ್ಜಿಗಳ ಇತ್ಯರ್ಥಕ್ಕೆ ನಿರ್ಧಾರ ಮಾಡಲಾಗಿದೆ. ಆ ಮೂಲಕ ರೈತರಿಗೆ ಸರ್ಕಾರ ಗುಡ್​ನ್ಯೂಸ್​ ನೀಡಿದೆ.

ಈ ಬಗ್ಗೆ ನಗರದಲ್ಲಿ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಸರ್ಕಾರಿ ಭೂಮಿ ಸಕ್ರಮಗೊಳಿಸುವ ಅರ್ಜಿಗಳ ಇತ್ಯರ್ಥಕ್ಕೆ ನಿರ್ಧಾರ ಮಾಡಲಾಗಿದೆ. ಸಾಗುವಳಿ ಮಾಡುತ್ತಿರುವರುವ 14 ಲಕ್ಷ ರೈತರು ಅರ್ಜಿ ಹಾಕಿದ್ದಾರೆ. ಸರ್ಕಾರಿ ಭೂಮಿ ಸಕ್ರಮಗೊಳಿಸುವಂತೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಸಂಬಂಧ ತಹಶೀಲ್ದಾರ್​ಗಳ ಜೊತೆ ಸಭೆ ನಡೆಸಿದ್ದೇನೆ. ನಾಲ್ಕೈದು ತಿಂಗಳಲ್ಲಿ ಎಲ್ಲಾ ರೈತರ ಅರ್ಜಿ ಇತ್ಯರ್ಥ ಮಾಡಲು ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.

ಈ ಬಾರಿ ಬಗರ್​ ಹುಕಂ ಕಮಿಟಿಯಲ್ಲಿ ಸಕ್ರಮದ ಜೊತೆ ಸಾಗುವಳಿ ಚೀಟಿ ಮತ್ತು ಭೂಮಿ ಸರ್ವೆ ಮಾಡಿ ರೈತರ ಹೆಸರಿಗೆ ನೋಂದಣಿ ಕೂಡ ಮಾಡಿಕೊಡುತ್ತೇವೆ. ರೈತರ ಎಲ್ಲಾ ದಾಖಲೆಗಳನ್ನು ಡಿಜಿಟಲ್ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ.

ಹಿಂದೆ ಭೂಮಿ ಮಂಜೂರಾಗಿ ಪೋಡಿ ದುರಸ್ತಿ ಆಗದ 10 ಲಕ್ಷ ಪ್ರಕರಣಗಳಿವೆ. ಇವರೆಲ್ಲರ ದುರಸ್ತಿ ಪ್ರಕ್ರಿಕೆಯೆಗೆ ಚಾಲನೆ ನೀಡಿದ್ದೇವೆ ಎಂದು ಹೇಳಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!