ಬಿಗ್ ಬಾಸ್ ನಿಮ್ಮನ್ನ ಎಕ್ಸ್‌ಪೋಸ್ ಮಾಡ್ತೀನಿ ಎಂದಿದ್ದ ಜಗದೀಶ್; ಖಡಕ್ ಉತ್ತರ ಕೊಟ್ಟ ಕಿಚ್ಚ
ನ್ಯೂಸ್ ಆ್ಯರೋ: ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಸೀಸನ್ 11ರ ಮೊದಲನೇ ವಾರವೇ ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಒಂದು ವಾರ ಕಳೆದಿರುವ ಸೀಸನ್ 11ರ ಸ್ಪರ್ಧಿಗಳಿಗೆ ಈಗ ಕಿಚ್ಚನ ಪಂಚಾಯ್ತಿ ಶುರುವಾಗಿದೆ. ಮೊದಲ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಯಾವುದು ಸರಿ- ಯಾವುದು ತಪ್ಪು ಅನ್ನೋದರ ಬಗ್ಗೆ ಬಿಸಿ, ಬಿಸಿ ಚರ್ಚೆಯಾಗಿದೆ. ಪ್ರತಿ ಸೀಸನ್‌ಗಿಂತ ಈ ಸೀಸನ್ ಡಿಫರೆಂಟ್ ಆಗಿರೋದ್ರಿಂದ ಕಿಚ್ಚ ಸುದೀಪ್ ಅವರು ಡಿಫರೆಂಟ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ಸೀಸನ್‌ನ ಮೊದಲ ವಾರದಲ್ಲಿ ಲಾಯರ್ ಜಗದೀಶ್ ಅವರ ರೋಷಾವೇಶ ಎಲ್ಲರ ಗಮನ ಸೆಳೆದಿದೆ. ನನಗೆ ಬಿಗ್ ಬಾಸ್ ಬೇಕು ಅಂತ ಇಲ್ಲಿಗೆ ಬಂದು ಬಿಗ್ ಬಾಸ್ ಅನ್ನೇ ಎಕ್ಸ್‌ಪೋಸ್ ಮಾಡ್ತೀನಿ ಅಂತ ಒಬ್ರು ನಿರ್ಧಾರ ತಗೊಂಡು ನಿಂತಿದ್ದಾರೆ. ಬಿಗ್ ಬಾಸ್ ನಾನು ನಿಮ್ಮನ್ನ ಎಕ್ಸ್‌ಪೋಸ್ ಮಾಡ್ತೀನಿ ಎಂದು ಜಗದೀಶ್ ಅವರು ಬಿಗ್ ಬಾಸ್ ಕ್ಯಾಮೆರಾ ಮುಂದೆ ಖಡಕ್ ಡೈಲಾಗ್ ಹೊಡೆದಿದ್ದಾರೆ.
ಲಾಯರ್ ಜಗದೀಶ್ ಅವರು ನಮ್ಮನ್ನ ಎದುರಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ಓಡಿಸ್ತೀರಾ ಅನ್ನೋ ಸವಾಲು ಕಿಚ್ಚ ಸುದೀಪ್ ಅವರ ಕೋಪಕ್ಕೆ ಕಾರಣವಾಗಿದೆ. ಜಗದೀಶ್ ಅವರ ಪ್ರತಿಯೊಂದು ಮಾತಿಗೂ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರಿಂದ ನೇರವಾದ ಉತ್ತರವೇ ಸಿಕ್ಕಿದೆ. ತಪ್ಪು ಯಾರು ಮಾಡಿದ್ರು? ಸರಿ ಯಾರ್ ಯಾರ್ ಮಾಡಬೇಕಿತ್ತು ಅನ್ನೋ ಪಂಚಾಯ್ತಿಯಲ್ಲಿ ಮನೆಯ 17 ಸ್ಪರ್ಧಿಗಳಿಗೂ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.
Leave a Comment