ಶಾಲಾ ಮಕ್ಕಳಿಗೆ ಗುಡ್‌ನ್ಯೂಸ್ ಕೊಟ್ಟ ಸರ್ಕಾರ; ಜ.11ರಿಂದ 16ರವರೆಗೆ ರಾಜ್ಯದ ಎಲ್ಲಾ ಶಾಲೆಗಳಿಗೂ ರಜೆ
ನ್ಯೂಸ್ ಆ್ಯರೋ: ಉತ್ತರ ಭಾರತದಲ್ಲಿ ಮಹಾಕುಂಭಮೇಳದ ಸಂಭ್ರಮ ಇದ್ರೆ ದಕ್ಷಿಣ ಭಾರತದಲ್ಲಿ ಮಕರ ಸಂಕ್ರಾಂತಿಯ ಸಡಗರ ಜೋರಾಗುತ್ತಿದೆ. ತಮಿಳುನಾಡಿನಲ್ಲಿ ಪೊಂಗಲ್ ಹಬ್ಬವನ್ನ ಹಾಗೂ ತೆಲಂಗಾಣದಲ್ಲಿ ಮಕರ ಸಂಕ್ರಾಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ನಾಳೆ ಕರ್ನಾಟಕ, ತಮಿಳುನಾಡು, ತೆಲಂಗಾಣದಲ್ಲಿ ಮಕರ ಸಂಕ್ರಾಂತಿಯ ಸಡಗರ ಮೇಳೈಸಲಿದೆ.
ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ತೆಲಂಗಾಣ ಶಿಕ್ಷಣ ಇಲಾಖೆ 6 ದಿನಗಳ ಕಾಲ ಶಾಲಾ ರಜೆ ಘೋಷಣೆ ಮಾಡಿದೆ. ಜನವರಿ 11ರಿಂದ 16ರವರೆಗೆ ರಾಜ್ಯದ ಎಲ್ಲಾ ಶಾಲೆಗಳು, ಪದವಿ ಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಜನವರಿ 17ಕ್ಕೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳನ್ನು ಪುನರಾರಂಭ ಮಾಡುವಂತೆ ಆದೇಶಿಸಲಾಗಿದೆ.
ಮಕರ ಸಂಕ್ರಾಂತಿ ಹಬ್ಬವನ್ನು ತೆಲಂಗಾಣದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಶಾಲಾ ಮಕ್ಕಳು ಸಂಕ್ರಾಂತಿ ಹಬ್ಬಕ್ಕೆ ಮನೆಯವರ ಜೊತೆ ಇರಲಿ. ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಿ ಎಂದು ಆಶಿಸಲಾಗಿದೆ.
ತಮಿಳುನಾಡು ಸರ್ಕಾರ ಕೂಡ ಪೊಂಗಲ್ ಹಬ್ಬದ ಹಿನ್ನೆಲೆಯಲ್ಲಿ 5 ದಿನಗಳ ಶಾಲಾ ರಜೆ ಘೋಷಣೆ ಮಾಡಿದೆ. ಜನವರಿ 14ರಿಂದ 17ರವರೆಗೆ ಶಾಲಾ ಮಕ್ಕಳು ಪೊಂಗಲ್ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ತಮಿಳುನಾಡು ರಾಜ್ಯಾದ್ಯಂತ ಪೊಂಗಲ್ ಹಬ್ಬವನ್ನು ಬಹಳ ಸಂಪ್ರದಾಯಬದ್ಧವಾಗಿ ಆಚರಣೆ ಮಾಡಲಾಗುತ್ತದೆ.
ಕರ್ನಾಟಕ ಸೇರಿದಂತೆ ಉಳಿದ ರಾಜ್ಯಗಳು ಮಕರ ಸಂಕ್ರಾಂತಿ ಹಬ್ಬದಂದು ಮಾತ್ರ ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ.
Leave a Comment