
ವೈರಲ್ ನಟಿ ಮಹಾಲಕ್ಷ್ಮಿ ಪತಿ ರವೀಂದರ್ ಚಂದ್ರಶೇಖರನ್ ಬಂಧನ – ಏನು ಆರೋಪ? ವಂಚನೆ ಎಷ್ಟು ಕೋಟಿ ಗೊತ್ತಾ?
- ಮನರಂಜನೆ
- September 8, 2023
- No Comment
- 1359
ನ್ಯೂಸ್ ಆ್ಯರೋ : ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಬೆನ್ನಲ್ಲೇ ಕಾಲಿವುಡ್ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರನ್ನು ಬಂಧಿಸಲಾಗಿದೆ.
ಕಿರುತೆರೆ ನಟಿ ಮಹಾಲಕ್ಷ್ಮಿ ಶಂಕರ್ (Mahalakshmi Shankar) ಅವರನ್ನು ವಿವಾಹವಾದ ಬಳಿಕ ಹೆಚ್ಚು ಸುದ್ದಿಯಲ್ಲಿದ್ದ ರವೀಂದರ್ ಅವರನ್ನು ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿದೆ.
ಲಿಬ್ರಾ ಪ್ರೊಡಕ್ಷನ್ ಹೆಸರಿನ ನಿರ್ಮಾಣ ಸಂಸ್ಥೆಯನ್ನು ನಡೆಸುತ್ತಿರುವ ರವೀಂದರ್ ಚಂದ್ರಶೇಖರನ್, ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆ ಆರಂಭಿಸುವುದಾಗಿ ಷೇರುದಾರರನ್ನಾಗಿ ಸೇರಿಸಿಕೊಳ್ಳುವುದಾಗಿ ಕೆಲವರಿಂದ ಹಣ ಪಡೆದಿದ್ದರು. ಒಟ್ಟು 16 ಕೋಟಿ ರೂಪಾಯಿ ಪಡೆದು ವಂಚಿಸಿದ್ದಾರೆ ಎಂದು ಚೆನ್ನೈನ ಬಾಲಾಜಿ ಎಂಬವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
2021ರಲ್ಲಿ ಈ ವಂಚನೆ ಪ್ರಕರಣ ನಡೆದಿದ್ದು, ದೂರು ಕೂಡ ದಾಖಲಾಗಿತ್ತು. ಈಗ ರವೀಂದರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ರವೀಂದರ್ ಅವರು ಇಬ್ಬರಿಗೆ 8 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರವೀಂದರ್ ವಿರುದ್ದ ಮತ್ತೊಂದು ದೂರು ದಾಖಲಾಗಿದ್ದು, ವಿಜಯ್ ಎಂಬುವರಿಂದ 15 ಲಕ್ಷ ರೂಪಾಯಿ ಪಡೆದಿದ್ದರು. ಈ ಹಣವನ್ನು ಸಿನೆಮಾವೊಂದಕ್ಕೆ ಹೂಡಿಕೆ ಮಾಡಿದ್ದು, ಬಂದ ಲಾಭದಲ್ಲಿ ಪಾಲು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಚಿತ್ರ ಬಿಡುಗಡೆಯಾಗಿ ತಿಂಗಳು ಕಳೆದರೂ ರವೀಂದರ್ ಹಣ ಮರಳಿ ನೀಡಿದ್ದ ಎಂದು ವಿಜಯ್ ಪೊಲೀಸರಿಗೆ ದೂರು ಕೊಟ್ಟಿದ್ದರು.