ರಜಾ ಮೂಡ್‌ನಲ್ಲಿ ಅಮೆರಿಕ ಸುತ್ತುತ್ತಿರುವ ಮಹೇಂದ್ರ ಸಿಂಗ್ ಧೋನಿ – ಡೊನಾಲ್ಡ್‌ ಟ್ರಂಪ್ ಜತೆ ಗಾಲ್ಫ್‌ ಆಡಿದ ಕ್ಯಾಪ್ಟನ್ ಕೂಲ್‌

ರಜಾ ಮೂಡ್‌ನಲ್ಲಿ ಅಮೆರಿಕ ಸುತ್ತುತ್ತಿರುವ ಮಹೇಂದ್ರ ಸಿಂಗ್ ಧೋನಿ – ಡೊನಾಲ್ಡ್‌ ಟ್ರಂಪ್ ಜತೆ ಗಾಲ್ಫ್‌ ಆಡಿದ ಕ್ಯಾಪ್ಟನ್ ಕೂಲ್‌

ನ್ಯೂಸ್‌ ಆ್ಯರೋ : ಅಮೆರಿಕಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ( Donald Trump) ಜತೆ ಗಾಲ್ಫ್‌ ಆಟವನ್ನು ಆಡಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಧೋನಿ ಅವರು ತಮ್ಮ ರಜೆಯನ್ನು ಅಮೆರಿಕದಲ್ಲಿ ಆನಂದಿಸುತ್ತಿದ್ದಾರೆ. ಸದ್ಯ ಯುಎಸ್ ಪ್ರವಾಸದಲ್ಲಿರುವ ಕೂಲ್ ಕ್ಯಾಪ್ಟನ್ ಅವರು ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆ ಗಾಲ್ಫ್ ಆಟವನ್ನು ಆಡುತ್ತಿರುವ ಫೋಟೋ ಹಾಗೂ ವಿಡಿಯೋ ವೈರಲ್ ಆಗುತ್ತಿದೆ. ಧೋನಿ ಹಾಗೂ ಟ್ರಂಪ್ ಗಾಲ್ಫ್ ಆಡುತ್ತಿರುವ ಮಧ್ಯೆ ಫೋಟೋಕ್ಕೆ ಪೋಸ್ ನೀಡಿದ್ದು, ಎಲ್ಲೆಡೆ ಹರಿದಾಡುತ್ತಿದೆ. ವೈರಲ್ ಫೋಟೋದಲ್ಲಿ ಧೋನಿ ಮತ್ತು ಟ್ರಂಪ್ ಪಕ್ಕದಲ್ಲಿ ನಿಂತಿದ್ದಾರೆ.

ವರದಿಗಳ ಪ್ರಕಾರ, ಧೋನಿ ಅವರು ಯುಎಸ್ ಪ್ರವಾಸದಲ್ಲಿ ಇದ್ದಾರೆ ಎಂಬುದನ್ನು ಅರಿತು ಸ್ವತಃ ಟ್ರಂಪ್ ಅವರೇ ಧೋನಿಯನ್ನು ಗಾಲ್ಫ್ ಆಟಕ್ಕೆ ಆಹ್ವಾನಿಸಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದು, ‘ಥಲಾ ಫೀವರ್ ಅಮೇರಿಕಾದಲ್ಲೂ ಇದೆ’ ಎಂದಿದ್ದಾರೆ.

ಈಚೆಗೆ ಟೆನಿಸ್ ಆಟವನ್ನು ವೀಕ್ಷಿಸಿದ ಧೋನಿ ವಿಡಿಯೋ ವೈರಲ್

ಸೆಪ್ಟೆಂಬರ್ 6 ರಂದು, ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯದ ವೇಳೆ ಕಾರ್ಲೋಸ್ ಅಲ್ಕರಾಜ್ ಮತ್ತು ಅಲೆಕ್ಸಾಂಡರ್ ಜ್ವೆರೆವ್ ನಡುವಿನ ಟೆನಿಸ್ ಆಟವನ್ನು ವೀಕ್ಷಿಸಲು ಧೋನಿ ಆರ್ಥರ್ ಆ್ಯಶ್ ಸ್ಟೇಡಿಯಂನಲ್ಲಿ ಹಾಜರಿದ್ದರು. ಇದರ ವಿಡಿಯೋ ಕೂಡ ಎರಡು ದಿನಗಳ ಹಿಂದೆ ವೈರಲ್ ಆಗಿತ್ತು.

2021ರಲ್ಲಿ ಅಧಿಕಾರ ಕಳೆದುಕೊಂಡ ಟ್ರಂಪ್

ಅಮೆರಿಕ ಮಾಜಿ ಅಧ್ಯಕ್ಷ ಡ್ರೊನಾಲ್ಡ್ ಟ್ರಂಪ್ ವಿರುದ್ಧ ಈಗಾಗಲೇ ಕ್ರಿಮಿನಲ್ ಆರೋಪಗಳಿದ್ದು, ಯುನೈಟೆಡ್ ಸ್ಟೇಟ್​ನ ಇತಿಹಾಸದಲ್ಲಿ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಮೊದಲ ಅಧ್ಯಕ್ಷ ಇವರಾಗಿದ್ದಾರೆ. ಟ್ರಂಪ್ ಜನವರಿ 2021 ರಲ್ಲಿ ಅಮೆರಿಕಾ ಅಧ್ಯಕ್ಷನ ಪಟ್ಟವನ್ನು ಕಳೆದುಕೊಂಡರು. 2024 ರಲ್ಲಿ ಮತ್ತೊಮ್ಮೆ ಅಧ್ಯಕ್ಷರಾಗುವ ಬಯಕೆ ಹೊಂದಿದ್ದಾರೆ. ಆದರೆ ಇದಕ್ಕೂ ಮುನ್ನ ಟ್ರಂಪ್ ಎಲ್ಲಾ ಕ್ರಿಮಿನಲ್ ಆರೋಪಗಳಿಂದ ಮುಕ್ತರಾಗಬೇಕಾಗುತ್ತದೆ.

ಅಮೆರಿಕ ಪ್ರವಾಸದಲ್ಲಿರುವ ಎಂಎಸ್‌ ಧೋನಿ ಅವರು ಶೀಘ್ರದಲ್ಲೇ ಭಾರತಕ್ಕೆ ವಾಪಾಸ್ಸಾಗಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ 2024ನೇ ಆವೃತ್ತಿಗಾಗಿ ತಯಾರಿ ಆರಂಭಿಸಲಿದ್ದಾರೆ. 2023 ರಲ್ಲಿ ಐದನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ನಂತರ, ಧೋನಿ ಅವರು ಲೀಗ್‌ನಿಂದ ಇನ್ನೂ ನಿವೃತ್ತಿಯಾಗಿಲ್ಲ ಎಂದು ಹೇಳಿದ್ದರು. ಹೀಗಾಗಿ ಎಂಎಸ್​ಡಿ ಅವರು ಐಪಿಎಲ್ 2024ರಲ್ಲಿ ಮತ್ತೆ ಆಡಲಿದ್ದಾರೆ ಎನ್ನಲಾಗಿದೆ.

Related post

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು…

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ…
ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!! – ಕೋಟ್ಯಾಂತರ ರೂಪಾಯಿ ಒಡೆಯ ಈ ತಾತ ಮಾಡೋದೇನು?

ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!!…

ನ್ಯೂಸ್ ಆ್ಯರೋ : ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ.…
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ ಮೇಲೆ ಕಾಳಜಿ ಇರುವವರು ಈ ವರದಿ ಓದಿ..

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ…

ನ್ಯೂಸ್ ಆ್ಯರೋ : ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು…

Leave a Reply

Your email address will not be published. Required fields are marked *