ರಶ್ಮಿಕಾ-ವಿಜಯ್ ದೇವರಕೊಂಡ ನಡುವಿನ ಲವ್ ಬಹಿರಂಗ – ಪ್ರೀತಿ ವಿಚಾರ ಬಯಲು ಮಾಡಿದ್ದು ಯಾರು ಗೊತ್ತಾ?

ನ್ಯೂಸ್ ಆ್ಯರೋ : ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪ್ರೀತಿಯಲ್ಲಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ಬಗ್ಗೆ ಅವರು ಎಲ್ಲಿವರೆಗೂ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಈಗ ಒಂದು ಶೋ ಅವರ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸಿದೆ.

ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ವಿಚಾರ ಅವರ ಅಭಿಮಾನಿಗಳಿಗಂತೂ ಗೊತ್ತೇ ಇದೆ. ಆದರೆ ಇದು ಎಲ್ಲಿಯೂ ಅಧಿಕೃತವಾಗಿ ಬಹಿರಂಗವಾಗಿರಲಿಲ್ಲ.

ಇದೀಗ ಬಾಲಯ್ಯ ಅವರು ನಡೆಸಿಕೊಡುವ ‘ಅನ್​ಸ್ಟಾಪೆಬಲ್ ವಿತ್ ಎನ್​ಬಿಕೆ’ ಶೋ ಗೆ ಬಂದಿದ್ದ ಅನಿಮಲ್ ಚಿತ್ರ ತಂಡ ರಶ್ಮಿಕಾ ಅವರ ಪ್ರೀತಿಯಲ್ಲಿ ಬಿದ್ದಿರುವ ವಿಷಯವನ್ನು ಬಹಿರಂಗ ಪಡಿಸಿದೆ.

ರಶ್ಮಿಕಾ ಮಂದಣ್ಣ, ರಣಬೀರ್ ಕಪೂರ್ ಹಾಗೂ ಸಿನಿಮಾ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಶೋ ಗೆ ಬಂದಿದ್ದು, ಈ ವೇಳೆ ರಶ್ಮಿಕಾ ಪ್ರೀತಿಯಲ್ಲಿ ಇರುವ ವಿಚಾರ ಹೊರಬಿದ್ದಿದೆ.

ಶೋ ನಲ್ಲಿ ವಿಜಯ್ಗೆ ಕರೆ ಮಾಡುವಂತೆ ರಶ್ಮಿಕಾ ಅವರಿಗೆ ಹೇಳಲಾಗಿದ್ದು, ಕರೆ ಮಾಡಿ ಲೌಡ್ ಸ್ಪೀಕರ್ ಇರಿಸಲಾಗಿದೆ. ರಶ್ಮಿಕಾ ಕರೆ ಸ್ವೀಕರಿಸಿದ ವಿಜಯ್ ಹಲೋ ಎಂದಿದ್ದಾರೆ. ಬಳಿಕ ಪ್ರೀತಿಯಿಂದ ಮಾತು ಆರಂಭಿಸಿದ್ದಾರೆ.

ಫೋನ್ ಸ್ಪೀಕರ್​ನಲ್ಲಿ ಇಟ್ಟಿರುವ ವಿಷಯವನ್ನು ರಶ್ಮಿಕಾ ವಿಜಯ್ ಗೆ ಹೇಳಿದ್ದರು. ಇವರ ಮಾತಿನ ಮಧ್ಯೆ ರಶ್ಮಿಕಾ ‘ಐ ಲವ್ ಬಾಲ ಸರ್’ ಎಂದಿದ್ದಾರೆ ಇದಕ್ಕೆ ವಿಜಯ್ ‘ಐ ಲವ್ ಸಂದೀಪ್ ರೆಡ್ಡಿ ವಂಗ’ ಎಂದಿದ್ದಾರೆ. ಅವರ ಮಾತಿನಲ್ಲಿ ಹಾಸ್ಯವಿತ್ತು.

ವಿಜಯ್ ದೇವರಕೊಂಡ ಮನೆಯಲ್ಲಿ ನಡೆದ ಅರ್ಜುನ್ ರೆಡ್ಡಿ ಸಕ್ಸಸ್ ಪಾರ್ಟಿಯಲ್ಲಿ ರಶ್ಮಿಕಾ ಅವರನ್ನು ಸಂದೀಪ್ ಮೊದಲ ಭಾರಿ ಭೇಟಿ ಮಾಡಿದ್ದರು ಎನ್ನುವುದನ್ನು ಸಂದೀಪ್ ರೆಡ್ಡಿ ವಂಗ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ ಈ ರೀತಿಯ ಮಾಹಿತಿಯನ್ನು ಅವರು ಯಾಕೆ ಲೀಕ್ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿ ನಕ್ಕಿದ್ದಾರೆ.