ತಮ್ಮ ಅಸಿಸ್ಟೆಂಟ್ ಮದುವೆಯಲ್ಲಿ ಮಿಂಚಿದ ನ್ಯಾಷನಲ್ ಕ್ರಷ್ – ರಶ್ಮಿಕಾ ಮಂದಣ್ಣ ಧರಿಸಿದ ಸಾರಿಯ ಬೆಲೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ..!

ತಮ್ಮ ಅಸಿಸ್ಟೆಂಟ್ ಮದುವೆಯಲ್ಲಿ ಮಿಂಚಿದ ನ್ಯಾಷನಲ್ ಕ್ರಷ್ – ರಶ್ಮಿಕಾ ಮಂದಣ್ಣ ಧರಿಸಿದ ಸಾರಿಯ ಬೆಲೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ..!

ನ್ಯೂಸ್ ಆ್ಯರೋ : ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾ‌ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದ ಕೊಡಗಿನ‌ ಬೆಡಗಿ ರಶ್ಮಿಕಾ ಮಂದಣ್ಣ ಇದೀಗ ಸೌತ್ ಇಂಡಿಯಾದ ಸ್ಟಾರ್ ನಟಿ. ‘ಪುಷ್ಪಾ’ ಸಿನಿಮಾ ಮೂಲಕ ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ರಶ್ಮಿಕಾ ಸಾಲು ಸಾಲು ಪರಭಾಷಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ರಶ್ಮಿಕಾ ತಮ್ಮ ಅಸಿಸ್ಟೆಂಟ್ ಒಬ್ಬರ ಮದುವೆಯಲ್ಲಿ ಕಾಣಿಸಿಕೊಂಡಿದ್ದು, ಅವರ ಧರಿಸಿದ್ದ ಸಾರಿಯ ಬಗ್ಗೆ ಸಕ್ಕತ್ ಚರ್ಚೆಯಾಗುತ್ತಿದೆ. ಈ ಸಾರಿಯ ಬೆಲೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ!

ಸಾರಿಯ ಬೆಲೆ ಎಷ್ಟು ಗೊತ್ತಾ?

ತಮ್ಮ ಸಹಾಯಕರಾಗಿರುವ ಸಾಯಿ ಅವರು ಮದುವೆಗೆ ನಟಿ ರಶ್ಮಿಕಾ ಮಂದಣ್ಣ ಆಗಮಿಸಿ ವಧು ವರರನ್ನು ಆಶೀರ್ವದಿಸಿದ್ದರು. ತಮ್ಮ ಬ್ಯಸಿ ಶೆಡ್ಯೂಲ್ ನಲ್ಲೂ ತಮ್ಮ ಅಸಿಸ್ಟೆಂಟ್ ವಿವಾಹಕ್ಕೆ ಆಗಮಿಸಿದ್ದ ರಶ್ಮಿಕಾ, ಬಂಗಾರದ ಬಣ್ಣದ ಸಿಂಪಲ್ ಸಾರಿಯಲ್ಲಿ ಮಿರಮಿರ ಮಿಂಚಿದ್ದರು. ಆದರೆ ಇದೀಗ ಈ ಸಾರಿಯ ಬಗ್ಗೆ ಬಾರೀ ಚರ್ಚೆಯಾಗುತ್ತಿದೆ. ರಶ್ಮಿಕಾ ಧರಿಸಿದ್ದ ಸಾರಿಯ ಬೆಲೆ ಬರೋಬ್ಬರಿ 35 ಸಾವಿರ ಎನ್ನಲಾಗುತ್ತಿದೆ. ಸಾರಿಯ ಬೆಲೆ ಕೇಳಿ ಅಭಿಮಾನಿಗಳು ದಂಗಾಗಿದ್ದಾರೆ.

ಮದುವೆ ಮಂಟಪದಲ್ಲಿ ನಾಚಿ ನೀರಾದ ರಶ್ಮಿಕಾ!

ರಶ್ಮಿಕಾ ಧರಿಸಿದ್ದ ಸಾರಿಯ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿರುವ ನಡುವೆ ಮದುವೆ ಮನೆಯ ವಿಡಿಯೋ ಒಂದು ಸಕ್ಕತ್ ವೈರಲ್ ಆಗುತ್ತಿದೆ. ತಮ್ಮ ಅಸಿಸ್ಟೆಂಟ್ ಮದುವೆಯಲ್ಲಿ ಭಾಗವಹಿಸಿದ ರಶ್ಮಿಕಾ ಮಂದಣ್ಣ ಅವರ ಆಶೀರ್ವಾದ ಪಡೆಯಲು ವಧು-ವರರು ಮುಂದಾದಾಗ ಆಶ್ಚರ್ಯಕ್ಕೀಡಾದ ರಶ್ಮಿಕಾ ನಾಚಿಕೆಯಿಂದ ಮೊದಲು ವಿಚಲಿತರಾದರು. ಬಳಿಕ ಅವರಿಬ್ಬರನ್ನು ಆಶೀರ್ವದಿಸಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸ್ಟಾರ್ ನಟರಿಗೆ ರಶ್ಮಿಕಾ ನಾಯಕಿ!

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಾರೀ ಬೇಡಿಕೆ ಸೃಷ್ಟಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಸದ್ಯ, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ರಣ್‌ಬೀರ್ ಹಾಗೂ ರಶ್ಮಿಕಾ ನಟನೆಯ ‘ಅನಿಮಲ್’ ಹಿಂದಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದರೊಂದಿಗೆ ಪುಷ್ಪಾ-2 ಚಿತ್ರೀಕರಣ ನಡೆಯುತ್ತಿದೆ. ಹಾಗೆಯೇ ವಿಕ್ರಮ್,ಧನುಷ್, ಟೈಗರ್ ಶ್ರಾಪ್ ಅವರ ಮುಂದಿನ ಸಿನಿಮಾಗಳಿಗೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Related post

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ಮೇಷಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ನೀವು ನಿಮ್ಮನ್ನು…
ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್…!!

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ…

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ…
ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದವನ ಕಥೆ ಮುಂದೇನಾಯ್ತು ಗೊತ್ತಾ?

ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ…

ನ್ಯೂಸ್‌ ಆ್ಯರೋ : ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ…

Leave a Reply

Your email address will not be published. Required fields are marked *