
ನನ್ನ ಪತಿ ಆದಿಲ್ ಖಾನ್ ಸಲಿಂಗ ಕಾಮಿ – ಪತಿಯ ವಿರುದ್ಧ ಗಂಭೀರ ಆರೋಪ ಹೊರಿಸಿದ ರಾಖಿ ಸಾವಂತ್
- ಮನರಂಜನೆ
- August 24, 2023
- No Comment
- 79
ನ್ಯೂಸ್ ಆ್ಯರೋ : ಹಿಂದೆಲ್ಲಾ ಸಿನಿಮಾಗಳಿಂದ ಸುದ್ದಿಯಾಗುತ್ತಿದ್ದ ನಟಿ ರಾಖಿ ಸಾವಂತ್ ಇದೀಗ ವಿವಾದಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಅವರ ವೈಯಕ್ತಿಕ ಜೀವನ ಚರ್ಚೆಗೆ ಕಾರಣವಾಗುತ್ತಿದೆ. ಮೈಸೂರು ಮೂಲದ ಆದಿಲ್ ಖಾನ್ ದುರಾನಿಯನ್ನು ರಾಖಿ ಮದುವೆಯಾಗಿದ್ದರು. ಬಹಳ ದಿನಗಳ ಬಳಿಕ ಈ ವಿಚಾರ ಹೊರಬಿತ್ತು. ಬಳಿಕ ಇಬ್ಬರ ನಡುವೆ ವೈಮನಸ್ಸು ಮೂಡಿತು. ಈ ಮಧ್ಯೆ ಆದಿಲ್ ಖಾನ್ ಜೈಲಿಗೂ ಹೋಗಬೇಕಾಯಿತು. ಇದೀಗ ಅವರು ಜೈಲಿನಿಂದ ಹೊರ ಬಂದಿದ್ದು, ರಾಖಿ ಮತ್ತೆ ಆರೋಪಗಳನ್ನು ಹೊರಿಸುತ್ತಿದ್ದಾರೆ. ಆದಿಲ್ ಖಾನ್ ಗಂಡಸರ ಜೊತೆಗೂ ಲೈಂಗಿಕ ಕ್ರಿಯೆ ನಡೆಸುತ್ತಿದ್ದರು ಎಂದು ರಾಖಿ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಖಿ ಹೇಳಿದ್ದೇನು?
ಆದಿಲ್ ಖಾನ್ ಜೈಲಿನಿಂದ ಹೊರ ಬರುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿದ ರಾಖಿ ಮಾತನಾಡಿ, ಆತನ ಬಂಧನಕ್ಕೆ ನಾನು ಕಾರಣಳಲ್ಲ. ಆತನ ಇರಾನಿಯನ್ ಗರ್ಲ್ ಫ್ರೆಂಡ್ ಅತ್ಯಾಚಾರದ ಕೇಸ್ ಹಾಕಿದ್ದಳು. ನನಗೆ ಹೊಡೆದ, ಹಿಂಸೆ ನೀಡಿದ ಕಾರಣಕ್ಕೆ ಆತ ಜೈಲಿನಲ್ಲಿದ್ದುದು 22 ದಿನ ಮಾತ್ರ. ಮನೆಯಲ್ಲಿ ಆತ ಬೇರೆ ಹುಡುಗಿಯರು ಮತ್ತು ಗಂಡಸರ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದನ್ನು ನೋಡಿದ್ದೇನೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ.
ಆತನ ಜೊತೆ ಇರಾನಿಯನ್ ಪ್ರೇಯಸಿ 5 ವರ್ಷ ಇದ್ದಳು. ನನ್ನ ಜೊತೆ ಮದುವೆಯಾಗಿರುವ ವಿಚಾರ ಆಕೆಯಿಂದ ಮುಚ್ಚಿಟ್ಟಿದ್ದ. ನನಗೂ ಸುಳ್ಳು ಹೇಳಿದ್ದಲ್ಲದೇ ಆತ ಆಕೆ ಸ್ನೇಹಿತೆ ಎಂದು ಪರಿಚಯ ಮಾಡಿದ್ದ. ಬಿಗ್ ಬಾಸ್ ಗೆ ಹೋಗಿ ನನ್ನನ್ನು ಭೇಟಿಯಾಗಿ ಜನಪ್ರಿಯತೆ ಪಡೆಯುವ ಹೊಂಚು ಹಾಕಿದ್ದ ಎಂದು ಆದಿಲ್ ಖಾನ್ ವಿರುದ್ಧ ರಾಖಿ ಸಾವಂತ್ ಆರೋಪಗಳ ಪಟ್ಟಿ ಹೊರಿಸಿದ್ದಾರೆ.
ಒಟ್ಟಿನಲ್ಲಿ ಒಂದು ಕಾಲದಲ್ಲಿ ಐಟಂ ಡ್ಯಾನ್ಸ್ ನಿಂದ ಜನಪ್ರಿಯತೆ ಪಡೆದಿದ್ದ ನಟಿಯ ಸಾಂಸಾರಿಕ ಜೀವನ ಈಗ ಬೀದಿಗೆ ಬಿದ್ದಿದೆ. ಇತ್ತ ಆದಿಲ್ ಖಾನ್ ಕೂಡ ಸುದ್ದಿಗೋಷ್ಠಿ ಕರೆದು ಈ ಎಲ್ಲಾ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ಸಜ್ಜಾಗಿದ್ದಾರೆ.