Prakash Raj : ಎಲ್ಲೆ ಮೀರಿದ ನಟ ಭಯಂಕರನ ಅಧಿಕ ಪ್ರಸಂಗ – ಚಂದ್ರಯಾನ 3 ಅನ್ನು ಅಣಕಿಸುವ ಪೋಸ್ಟ್ ಗೆ ನೆಟ್ಟಿಗರು ಗರಂ: ಟ್ವೀಟ್ ನಲ್ಲಿ ಅಂಥದ್ದೇನಿದೆ?

Prakash Raj : ಎಲ್ಲೆ ಮೀರಿದ ನಟ ಭಯಂಕರನ ಅಧಿಕ ಪ್ರಸಂಗ – ಚಂದ್ರಯಾನ 3 ಅನ್ನು ಅಣಕಿಸುವ ಪೋಸ್ಟ್ ಗೆ ನೆಟ್ಟಿಗರು ಗರಂ: ಟ್ವೀಟ್ ನಲ್ಲಿ ಅಂಥದ್ದೇನಿದೆ?

ನ್ಯೂಸ್ ಆ್ಯರೋ‌ : ಕೋಟ್ಯಾಂತರ ಭಾರತೀಯರ ನಿರೀಕ್ಷೆಯ ಚಂದ್ರಯಾನ 3 ನೌಕೆ ಇನ್ನೆರಡು ದಿನಗಳಲ್ಲಿ ಚಂದ್ರನ‌ ಮೇಲ್ಮೈ ಸ್ಪರ್ಷಿಸಲಿದೆ. ಇಡೀ ಜಗತ್ತೇ ಕಾಯುತ್ತಿರುವ ಈ ಕ್ಷಣದ ನಡುವೆ ನಟ ಪ್ರಕಾಶ್ ರಾಜ್ ಮಾಡಿರುವ ಟ್ವಿಟರ್ ಪೋಸ್ಟ್ ಎಲ್ಲರಿಗೂ ಆಕ್ರೋಶ ಉಂಟುಮಾಡಿದೆ.

ಆಗಸ್ಟ್ 23ರಂದು ಚಂದ್ರಯಾನ-3 ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಲಿದೆ ಎಂದು ಇಸ್ರೋ ಇಂದು ಮಾಹಿತಿ ನೀಡಿದೆ. ಆದರೆ ಕಳೆದ ರಾತ್ರಿ ನಟ ಪ್ರಕಾಶ್ ರಾಜ್ ಹಂಚಿಕೊಂಡಿರುವ ಫೋಟೋವೊಂದು ಹಲವರನ್ನು ಬೇಸರಗೊಳ್ಳುವಂತೆ ಮಾಡಿದ್ದು, ವ್ಯಾಪಕ ಟೀಕೆ ಕೂಡ ವ್ಯಕ್ತವಾಗಿದೆ.

ಚಹಾ ಮಾಡುವ ವ್ಯಕ್ತಿಯೊಬ್ಬನ ವಿರೂಪಗೊಳಿಸಿದ ಚಿತ್ರ ಹಂಚಿಕೊಂಡಿರುವ ಪ್ರಕಾಶ್ ರಾಜ್, ವಿಕ್ರಮ್ ಲ್ಯಾಂಡರ್​ ಮೂಲಕ ಚಂದ್ರನಿಂದ ಬರುತ್ತಿರುವ ಮೊದಲ ಚಿತ್ರ ಎಂಬ ಕ್ಯಾಪ್ಷನ್ ಹಾಕಿದ್ದಾರೆ. ಇದು ಇಸ್ರೋಗೆ ಮಾಡಿದ ಅವಮಾನ, ದೇಶಕ್ಕೆ ಮಾಡಿದ ಅಪಮಾನ ಎಂದು ಹಲವರು ಪ್ರಕಾಶ್ ರಾಜ್ ವಿರುದ್ಧ ಕಿಡಿಕಾರಿದ್ದಾರೆ.

ಸದ್ಯ ಭಾರತದ ನೌಕೆಯು ಚಂದ್ರನ ಅಂತಿಮ ಕಕ್ಷೆಯನ್ನು ತಲುಪಿದ್ದು, ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಬೇಕಿದೆ. ಇದಕ್ಕೆ ಇದೀಗ ಇಸ್ರೋ ಮುಹೂರ್ತ ನಿಗದಿಪಡಿಸಿದ್ದು, ಆಗಸ್ಟ್ 23 ಬುಧವಾರ ಸಂಜೆ 6:04 ಕ್ಕೆ ನೌಕೆ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ. 

ಅಂತಿಮ ಚಂದ್ರನ ಚಲನೆಯನ್ನು ಪೂರ್ಣಗೊಳಿಸಿದ ಚಂದ್ರಯಾನ-3, ಚಂದ್ರನ ಮೇಲ್ಮೈ ಸ್ಪರ್ಶ ಮುಂದಿನ ನಿಲ್ದಾಣ ಪ್ರಸ್ತುತ ವಿಕ್ರಮ್ ಲ್ಯಾಂಡರ್ ಚಂದ್ರನಿಗೆ ಅತ್ಯಂತ ಸಮೀಪವಿರುವ ಬಿಂದು 25 ಕಿಮೀ ಮತ್ತು ಚಂದ್ರನಿಂದ 134 ಕಿಮೀ ದೂರದ ಕಕ್ಷೆಯನ್ನು ತಲುಪಿದೆ. ಈ ಕಕ್ಷೆಯಿಂದಲೇ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ಪ್ರಯತ್ನಿಸುತ್ತದೆ ಎಂದು ಇಸ್ರೊ ಹೇಳಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *