ಪವನ್ ಕಲ್ಯಾಣ್ ದಾಂಪತ್ಯದಲ್ಲಿ ಮತ್ತೆ ಬಿರುಕು.‌.!! – 3ನೇ ಪತ್ನಿಯಿಂದಲೂ ದೂರವಾದರಾ ಟಾಲಿವುಡ್ ಸ್ಟಾರ್?

ಪವನ್ ಕಲ್ಯಾಣ್ ದಾಂಪತ್ಯದಲ್ಲಿ ಮತ್ತೆ ಬಿರುಕು.‌.!! – 3ನೇ ಪತ್ನಿಯಿಂದಲೂ ದೂರವಾದರಾ ಟಾಲಿವುಡ್ ಸ್ಟಾರ್?

ನ್ಯೂಸ್ ಆ್ಯರೋ‌ : ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ. ಇತ್ತೀಚೆಗೆ ಅವರು ಇನ್ಸ್ಟಾಗ್ರಾಮ್ ನಲ್ಲಿ ಖಾತೆ ತೆರೆದ ಕೂಡಲೇ ಲಕ್ಷಾಂತರ ಮಂದಿ ಫಾಲೋ ಮಾಡಿದ್ದು ಇದಕ್ಕೆ ಉದಾಹರಣೆ. ಇದೀಗ ಪವನ್ ಕಲ್ಯಾಣ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅವರ ಮೂರನೇ ಮದುವೆಯೂ ಮುರಿದು ಬಿತ್ತು ಎನ್ನುವ ಗಾಸಿಪ್ ಹರಡಿದೆ.

ಕಾರಣವೇನು?

ಪವನ್ ತಮ್ಮ ಮೂರನೇ ಪತ್ನಿ ಅನ್ನಾ ಲೇಜ್ನೇವಾ ಅವರಿಂದಲೂ ದೂರವಾಗಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಹಿಂದೆಲ್ಲ ಪತಿ ಮತ್ತು ಪತ್ನಿ ಸಮಾರಂಭಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ನಡೆದ ಸಂಬಂಧಿಯೋರ್ವರ ಮದುವೆ ಮತ್ತು ರಾಮ್ ಚರಣ್-ಉಪಾಸನಾ ದಂಪತಿಯ ಮಗುವಿನ ನಾಮಕರಣ ಸಮಾರಂಭಕ್ಕೆ ಪವನ್ ಒಬ್ಬರೇ ಆಗಮಿಸಿದ್ದರು. ಮಾತ್ರವಲ್ಲ ಪವನ್ ಅವರ ರಾಜಕೀಯ ಪ್ರಚಾರ ಕಾರ್ಯಕ್ರಮಕ್ಕೂ ಅನ್ನಾ ಆಗಮಿಸುತ್ತಿಲ್ಲ. ಇದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಸದ್ಯ ಅನ್ನಾ ಸಿಂಗಾಪೂರ್, ದುಬೈ ಅಥವಾ ರಷ್ಯಾದಲ್ಲಿ ಮಕ್ಕಳೊಂದಿಗೆ ನೆಲೆಸಿದ್ದಾರೆ ಎನ್ನಲಾಗಿದೆ. ಆದರೆ ಈ ಸುದ್ದಿಯನ್ನು ಪವನ್ ಆಪ್ತ ನಿರ್ಮಾಪಕ ಬಂಡ್ಲಾ ಗಣೇಶ್ ನಿರಾಕರಿಸಿದ್ದು, ಇದು ನಿಜವಲ್ಲ ಎಂದಿದ್ದಾರೆ. ಆದರೆ ಇದುವರೆಗೆ ಪವನ್ ಈ ಬಗ್ಗೆ ಮಾತನಾಡದಿರುವುದು ಗುಸುಗುಸು ಹೆಚ್ಚಲು ಕಾರಣವಾಗುತ್ತಿದೆ.

ಪವನ್ ಮೊದಲು ವಿವಾಹವಾಗಿದ್ದು ನಂದಿನಿ ಜೊತೆ. ಕೆಲವು ವರ್ಷಗಳ ಬಳಿಕ ಡಿವೋರ್ಸ್ ನೀಡಿ ನಟಿ ರೇಣು ದೇಸಾಯಿ ಜೊತೆ ಹಸೆಮಣೆಗೇರಿದರು. ಕೆಲವು ವರ್ಷ ಒಟ್ಟಿಗಿದ್ದ ದಂಪತಿಗೆ ಎರಡು ಮಕ್ಕಳು ಹುಟ್ಟಿದವು. ಬಳಿಕ ಇಬ್ಬರು ದೂರವಾದರು. ನಂತರ ರಷ್ಯಾ ಮೂಲದ ಅನ್ನಾ ಲೇಜ್ನೇವಾ ಅವರನ್ನು ವರಿಸಿದರು. ಅವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *