ಧ್ರುವ ಸರ್ಜಾ ಮತ್ತು ನನ್ನ ನಡುವಿನ ಸಂಬಂಧ ನಮ್ಮ ಪರ್ಸನಲ್ – ಮೇಘನಾರಾಜ್ ಹೇಳಿಕೆಯ ಅರ್ಥ ಏನು?

ಧ್ರುವ ಸರ್ಜಾ ಮತ್ತು ನನ್ನ ನಡುವಿನ ಸಂಬಂಧ ನಮ್ಮ ಪರ್ಸನಲ್ – ಮೇಘನಾರಾಜ್ ಹೇಳಿಕೆಯ ಅರ್ಥ ಏನು?

ನ್ಯೂಸ್ ಆ್ಯರೋ : ಕನ್ನಡ ಚಿತ್ರರಂಗದ ಕಲಾ ಕುಟುಂಬಗಳಲ್ಲಿ ಸರ್ಜಾ ಫ್ಯಾಮಿಲಿ ಕೂಡ ಒಂದು. ಅಂದಿನ ಶಕ್ತಿ ಪ್ರಸಾದ್ ಅವರಿಂದ ಹಿಡಿದು ಇಂದಿನ ಧ್ರುವ ಸರ್ಜಾ ತನಕ ಈ ಕುಟುಂಬದಲ್ಲಿ ಎಲ್ಲರೂ ಸಿನಿಮಾ ನಟರು. ವರ್ಷಗಳ ಹಿಂದೆ ಚಿರಂಜೀವಿ ಸರ್ಜಾ ಮರಣದ ನಂತರ ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಧ್ರುವ ಸರ್ಜಾ ಹಾಗೂ ಚಿರಂಜೀವಿ ಪತ್ನಿ ಮೇಘನಾರಾಜ್ ಸಂಬಂಧದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಇದೀಗ ಈ ಎಲ್ಲಾ ವಿಚಾರಗಳಿಗೂ‌ ಮೇಘನಾರಾಜ್ ಸ್ಪಷ್ಟನೆ ನೀಡಿದ್ದು. ಆ ಬಗೆಗಿನ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

ಧ್ರುವ ನನ್ನ ಸಂಬಂಧ ಯಾರಿಗೂ ಅರ್ಥವಾಗಲ್ಲ!

ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ ವೊಂದಕ್ಕೆ ಸಂದರ್ಶನ ನೀಡಿದ ಮೇಘನಾರಾಜ್, ‘ಧ್ರುವ ಮತ್ತು ನನ್ನ ನಡುವಿನ ಸಂಬಂಧ ಯಾರಿಗೂ ಅರ್ಥವಾಗಲ್ಲ. ಚಿರು, ಧ್ರುವ ಮತ್ತು ನನಗೆ ಮಾತ್ರ ಅದು ಗೊತ್ತು. ಧ್ರುವ ಅದನ್ನು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ ಅದರ ಅವಶ್ಯಕತೆಯೂ ಇಲ್ಲ. ತತ್ಸಮ-ತತ್ಭವ ಸಿನಿಮಾದ ಟೀಸರ್ ನೋಡಿ ಧ್ರುವ ಎಕ್ಸೈಟ್ ಆಗಿದ್ದಾನೆ. ಸಿನಿಮಾದ ಬಗ್ಗೆ ನಾವು ಸಾಕಷ್ಟು ವಿಚಾರ ಚರ್ಚೆ ಮಾಡಿದ್ದೇನೆ. ಧ್ರುವಾಗೆ ಈ ಟೀಸರ್ ನಲ್ಲಿ ಏನು ಇಷ್ಟವಾಗಿಲ್ಲ ಎಂಬುದನ್ನು ಅರ್ಥವಾಗಿದೆ.

ನಮ್ಮಿಬ್ಬರ ಬಾಂಡಿಂಗ್ ಬಗ್ಗೆ ಯಾರಿಗೂ ಅರ್ಥ ಮಾಡಿಸುವ ಅವಶ್ಯಕತೆ ಇಲ್ಲ. ನಾವು ಪಬ್ಲಿಕ್ ಫಿಗರ್ ಗಳು ಅಂದ ಮೇಲೆ ಜನರಿಗೆ ನಮ್ಮ ಬಗ್ಗೆ ಕುತೂಹಲ ಇರುವುದರಲ್ಲಿ ತಪ್ಪಿಲ್ಲ. ಆದರೆ ನಮ್ಮ ಪರ್ಸನಲ್‌ ವಿಚಾರಗಳನ್ನು ಟಾರ್ಗೆಟ್ ಮಾಡಿ ಅವುಗಳನ್ನು‌ ಕೆದಕುವುದು ತಪ್ಪು. ಯಾವುದು ಪಬ್ಲಿಕ್ ಆಗಿರಬೇಕು, ಯಾವುದು ಪರ್ಸನಲ್ ಆಗಿರಬೇಕು ಎಂಬುದು ನನಗೆ ಗೊತ್ತಿದೆ’ ಎಂದು ಅವರು ಹೇಳಿದ್ದಾರೆ.

ಸಮಾಜದ ಬಗ್ಗೆ ಯೋಚಿಸುತ್ತ ಬೆಳೆದವಳಲ್ಲ!

ಇನ್ನೂ ತಮ್ಮ ಫ್ಯಾಮಿಲಿ ಬಗ್ಗೆ ಮಾತನಾಡಿದ ಮೇಘನಾ, ‘ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ನಾನು ಅತ್ತೆ ಮಾವನ ಮನೆಗೆ ಹೋಗಿ ಬರುತ್ತೇನೆ. ಬೇಕೆಂದಾಗ ಕರೆ ಮಾಡಿ ಮಾತನಾಡುತ್ತೇನೆ. ಸಮಾಜ ಏನೆಂದುಕೊಳ್ಳುತ್ತದೆ ಎಂದು ನಾನು ಯೋಚಿಸುವುದಿಲ್ಲ. ಅಂತಹ ಸಮಾಜದಲ್ಲಿ ನಾನು ಬೆಳೆದವಳೂ ಅಲ್ಲ. ನನಗೆ ಎಲ್ಲಿ ನೆಮ್ಮದಿ ಇದೆಯೋ ಅಲ್ಲಿಗೆ ಹೋಗುತ್ತೆನೆ. ನನಗೂ ಒಂದು ಫ್ರೆಂಡ್ಸ್ ಗ್ಯಾಂಗ್ ಇದೆ, ಅವರೊಂದಿಗೂ ಇರುತ್ತೇನೆ. ನನ್ನ ಹಾಗೂ ಮಗನ‌ ಬಗ್ಗೆ ಯಾರೂ ಯೋಚಿಸಬೇಕಿಲ್ಲ. ಅವರ ಬಗ್ಗೆಯೂ ನಾನು ಯೋಚಿಸುವುದಿಲ್ಲ’ ಎಂದಿದ್ದಾರೆ ಮೇಘನಾರಾಜ್.

ಸರ್ಜಾ-ರಾಜ್‌ ಕುಟುಂಬದಲ್ಲಿ ಮನಸ್ತಾಪ!

ಸರ್ಜಾ ಹಾಗೂ ರಾಜ್ ಕುಟುಂಬದಲ್ಲಿ ಮನಸ್ತಾಪ ಇದೆಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ಮೇಘನಾ, ‘ಇದರ ಬಗ್ಗೆ ನಾನು ಮಾತನಾಡುವುದಿಲ್ಲ. ಇದರ ಬಗ್ಗೆ ಕ್ಲಾರಿಪೈ ಮಾಡುವ ಅವಶ್ಯಕತೆ ಇಲ್ಲ. ನಮ್ಮಲ್ಲಿಂದ ಅಲ್ಲಿಗೆ, ಅಲ್ಲಿಂದ ನಮ್ಮಲ್ಲಿಗೆ ಕೆಲವು ವಿಚಾರಗಳನ್ನು ಹೇಳಿಕೊಟ್ಟು ಮಜಾ ತೆಗೆದುಕೊಳ್ಳಲು ಬಹಳಷ್ಟು ಜನ ಇದ್ದಾರೆ. ಆದರೆ ಪಾಪ ಅವರಿಗೇನೂ ಸಿಗುತ್ತಿಲ್ಲ. ನನ್ನ ಧ್ರುವ ಸಂಬಂಧದ ಬಗ್ಗೆ ಯಾರಿಗೂ ಏನನ್ನೂ ಅರ್ಥ ಮಾಡಿಸುವ ಅವಶ್ಯಕತೆ ಇಲ್ಲ. ಇದು ನಮ್ಮ ಪರ್ಸನಲ್ ಮತ್ತು ಫ್ಯಾಮಿಲಿ ವಿಚಾರ’ ಎಂದು ಮೇಘನಾರಾಜ್ ಅನುಮಾನಗಳಿಗೆ, ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *