ಮತ್ತೊಂದು ಬಾಲಿವುಡ್ ಹಾಡಿನ ರೀಲ್ ಮಾಡಿದ ಕಿಲಿ ಪೌಲ್-ನೀಮಾ – ಸಿಯಾ ರಾಮ್ ಸಿಂಗರ್ ಸಚೇತ್ ಟಂಡನ್ ರಿಯಾಕ್ಷನ್ ಹೇಗಿತ್ತು?

ಮತ್ತೊಂದು ಬಾಲಿವುಡ್ ಹಾಡಿನ ರೀಲ್ ಮಾಡಿದ ಕಿಲಿ ಪೌಲ್-ನೀಮಾ – ಸಿಯಾ ರಾಮ್ ಸಿಂಗರ್ ಸಚೇತ್ ಟಂಡನ್ ರಿಯಾಕ್ಷನ್ ಹೇಗಿತ್ತು?

ನ್ಯೂಸ್ ಆ್ಯರೋ‌ : ‘ರಾಮಾಯಣ’ ಮಹಾ ಕಾವ್ಯ ಆಧರಿಸಿದ ‘ಆದಿಪುರುಷ್’ ಚಿತ್ರ ಜೂ. 16ರಂದು ತೆರೆಗೆ ಬರಲಿದೆ. ಚಿತ್ರದ ಟ್ರೇಲರ್, ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಮೋಡಿ ಮಾಡಿವೆ. ಈ ಮಧ್ಯೆ ತಾಂಜಾನಿಯಾದ ಜನಪ್ರಿಯ ಯು ಟ್ಯೂಬರ್ ಕಿಲಿ ಪೌಲ್ ಮತ್ತು ಸಹೋದರಿ ನೀಮಾ ಈ ಚಿತ್ರದ ‘ಸಿಯಾ ರಾಮ್’ ಹಾಡಿಗೆ ಲಿಪ್ ಸಿಂಕ್ ಮಾಡಿದ್ದು ವೈರಲ್ ಆಗಿದೆ.

ಈ ಅಣ್ಣ-ತಂಗಿ ಈ ಹಿಂದೆಯೂ ಅನೇಕ ಬಾಲಿವುಡ್ ಹಾಡಿಗೆ ರೀಲ್ ಮಾಡಿ ಭಾರತೀಯರ ಗಮನ ಸೆಳೆದಿದ್ದರು. ಇದೀಗ ಈ ಇನ್ಟಾಗ್ರಾಮ್ ರೀಲ್ ಭಾರತೀಯರ ಮೆಚ್ಚುಗೆ ಗಳಿಸಿದೆ. ‘ಜೈ ಶ್ರೀರಾಮ್, ಜೈ ಹಿಂದ್. ಕಮೆಂಟ್ ಮೂಲಕ ಭೇಟಿಯಾಗೋಣ’ ಎಂದು ಕಿಲಿ ಪೌಲ್ ಕ್ಯಾಪ್ಶನ್ ಕೊಟ್ಟಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಹಂಚಿಕೊಳ್ಳಲಾದ ಈ ವೀಡಿಯೋ ಈಗಾಗಲೇ ಲಕ್ಷಾಂತರ ಮಂದಿಯನ್ನು ತಲುಪಿದೆ. ಸಾವಿರಾರು ಮಂದಿ ಲೈಕ್ ಬಟನ್ ಒತ್ತಿದ್ದಾರೆ. ಚಿತ್ರದ ಮೂಲ ಹಾಡನ್ನು ಸಚೇತ್-ಪರಂಪರ ಹಾಡಿದ್ದು ಈ ಪೈಕಿ ಸಚೇತ್ ಟಂಡನ್ ರೀಲ್ ಗೆ ಪ್ರತಿಕ್ರಿಯಿಸಿ ‘ವಾವ್’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ನೆಟ್ಟಿಗರು ಏನಂತಾರೆ?

ನೆಟ್ಟಿಗರು ಅಣ್ಣ-ತಂಗಿಯ ಈ ರೀಲ್ ಗೆ ಮೆಚ್ಚುಗೆಯ ಪ್ರವಾಹವನ್ನೇ ಹರಿಸಿದ್ದಾರೆ. ‘ಎಲ್ಲಾ ಸನಾತನಿಗಳ ಹೃದಯ ಕದ್ದು ಬಿಟ್ಟಿದ್ದೀರಿ’ ಎಂದು ಒಬ್ಬರು ಹೇಳಿದರೆ, ಅನೇಕರು ‘ಜೈ ಶ್ರೀರಾಮ್’ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಕಿಲಿ ಪೌಲ್, ನೀಮಾ ಭಾರತೀಯ ಉಡುಗೆ ತೊಟ್ಟು ಜೋಷ್ ಹಿಂದಿ ಚಿತ್ರದ ಹಾಡಿನ ವೀಡಿಯೋ ಮಾಡಿದ್ದರು. ಐಶ್ವರ್ಯ ರೈ ಬಚ್ಚನ್ ಮತ್ತು ಚಂದ್ರಚೂರ್ ಸಿಂಗ್ ಅಭಿನಯಿಸಿದ್ದ ‘ಹೇ ಮೇರಾ ದಿಲ್’ ಹಾಡಿಗೆ ಆಭಿನಯಿಸಿದ್ದ ಅಣ್ಣ-ತಂಗಿಯ ವೀಡಿಯೋ ಲಕ್ಷಗಟ್ಟಲೆ ವ್ಯೂವ್ಸ್ ಪಡೆದುಕೊಂಡಿತ್ತು.

ಓಂ ರಾವುತ್ ನಿರ್ದೇಶನದ ‘ಆದಿಪುರುಷ್’ ಚಿತ್ರ ಹಿಂದಿ ಜೊತೆಗೆ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ತೆರೆ ಕಾಣಲಿದೆ. ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೂನ್, ಲಕ್ಷ್ಮಣನಾಗಿ ಸನ್ನಿ ಸಿಂಗ್ ಮತ್ತು ರಾವಣನಾಗಿ ಸೈಫ್ ಆಲಿಖಾನ್ ನಟಿಸಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *