ಮರದಿಂದಲೇ ತಯಾರಿಸಿದ್ದ ಕಾರ್ ದಾಖಲೆ ಮೊತ್ತಕ್ಕೆ ಸೇಲ್ – ಸಿಟ್ರ‌ನ್ 2ಸಿವಿ ಕಾರ್ ಗೆ ಹರಾಜು ಬೆಲೆ ಎಷ್ಟು ಕೋಟಿ ಗೊತ್ತಾ?

ಮರದಿಂದಲೇ ತಯಾರಿಸಿದ್ದ ಕಾರ್ ದಾಖಲೆ ಮೊತ್ತಕ್ಕೆ ಸೇಲ್ – ಸಿಟ್ರ‌ನ್ 2ಸಿವಿ ಕಾರ್ ಗೆ ಹರಾಜು ಬೆಲೆ ಎಷ್ಟು ಕೋಟಿ ಗೊತ್ತಾ?

ನ್ಯೂಸ್ ಆ್ಯರೋ‌ : ಫ್ರಾನ್ಸ್ ನಲ್ಲಿ ನೋಂದಣಿಯಾಗಿರುವ ಮರದ ಕಾರೊಂದು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಮರದ ಸಿಟ್ರನ್ 2ಸಿವಿ ಕಾರು ಹರಾಜಿನಲ್ಲಿ 2.10 ಲಕ್ಷ ಪೌಂಡ್ (ಸುಮಾರು 1.86 ಕೋಟಿ ರೂ.) ಗೆ ಸೇಲ್ ಆಗಿ ಅಚ್ಚರಿ ಮೂಡಿಸಿದೆ.

ಈ ಕಾರಿನ ಬಾಡಿಯು ಸಂಪೂರ್ಣವಾಗಿ ಮರದಿಂದ ಮಾಡಲ್ಪಟ್ಟಿದೆ ಎನ್ನುವುದು ವಿಶೇಷ. ಇದನ್ನು ಸಾಮಾನ್ಯ ಕಾರಿನಂತೆ ಬಳಸಬಹುದು. ಪ್ಯಾರಿಸ್ ಮೂಲದ ವಿಂಟೇಜ್ ಕಾರು ಮತ್ತು ಮ್ಯೂಸಿಯಂ ಮಾಲಕ ಸೀನ್ ಪಾಲ್ ಫಾವಂಡ್ ಈ ಬ್ಲಾಕ್-ಫಿನಿಶ್ಡ್ ಕಾರನ್ನು ಹರಾಜಿನಲ್ಲಿ ಪಡೆದುಕೊಂಡಿದ್ದಾರೆ.

ಮೈಕೆಲ್ ರೊಬಿಲಾರ್ಡ್ 2CV ಮಾದರಿಯ ಬಾಡಿ ಮತ್ತು ಇತರ ಭಾಗಗಳನ್ನು ಮರದಲ್ಲಿ ಕೆತ್ತಿದ್ದಾರೆ. ಕಾರಿನ ಬದಿಗಳಿಗೆ ವಾಲ್‌ನಟ್ ಮತ್ತು ಚಾಸಿಸ್‌ಗೆ ಪೇರಳೆ ಮತ್ತು ಸೇವಿನ ಮರಗಳನ್ನು ಬಳಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿಟ್ರನ್ 2CV ಮಾದರಿಯು ಈ ಹಿಂದೆ ಮಾರುಕಟ್ಟೆಯಲ್ಲಿ ಫೋಕ್ಸ್‌ವ್ಯಾಗನ್ ಬೀಟಲ್ ಕಾರಿಗೆ ಪೈಪೋಟಿಯನ್ನು ನೀಡುತ್ತಿತ್ತು. ಇದನ್ನು ನಿರ್ಮಿಸಿದ ರಾಬಿಲಾರ್ಡ್ ಇದೇ ರೀತಿಯ ಮತ್ತೊಂದು ಯೋಜನೆಯನ್ನು ಜಾರಿಗೊಳಿಸಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ. ದಾಖಲೆ ಮೊತ್ತಕ್ಕೆ ಮಾರಾಟವಾದ ಅಪರೂಪದ ಕಾರಿನ ಚಿತ್ರಗಳು ವೈರಲ್ ಆಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *