ಕೌನ್ ಬನೇಗಾ ಕರೊಡ್ ಪತಿ ಸೀಸನ್-15 ಆರಂಭ- ಈ ಬಾರಿ ಏನೆಲ್ಲಾ ವಿಶೇಷತೆ ಇದೆ ಗೊತ್ತೆ?

ಕೌನ್ ಬನೇಗಾ ಕರೊಡ್ ಪತಿ ಸೀಸನ್-15 ಆರಂಭ- ಈ ಬಾರಿ ಏನೆಲ್ಲಾ ವಿಶೇಷತೆ ಇದೆ ಗೊತ್ತೆ?

ನ್ಯೂಸ್ ಆ್ಯರೋ‌ : ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮವು ಚಿತ್ರಗಳ ಜೊತೆಗೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರಿಗೆ ಜನಪ್ರಿಯತೆ ತಂದುಕೊಟ್ಟ ರಿಯಾಲಿಟಿ ಶೋ ಇದು. ರಸಪ್ರಶ್ನೆ ಆಧಾರಿತ ಈ ಕಾರ್ಯಕ್ರಮ ವೀಕ್ಷಕರ ಸಾಮಾನ್ಯ ಜ್ಞಾನವನ್ನು ಒರೆಗೆ ಹಚ್ಚುವ ಕೆಲಸ ಮಾಡುತ್ತದೆ.

ಸೀಸನ್-15 ಆರಂಭ

ಹಿಂದಿಯಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋ ಈಗಾಗಲೇ 14 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಆಗಸ್ಟ್ 14ರಂದು 15ನೇ ಸಿಸನ್ ಆರಂಭವಾಗಿದೆ. ಸೋನಿ ಎಂಟರ್‍ಟೈನ್ಮೆಂಟ್ ವಾಹಿನಿಯಲ್ಲಿ ಇದು ಸೋಮವಾರದಿಂದ ಶುಕ್ರವಾರದ ವರೆಗೆ 9 ಗಂಟೆಗೆ ಪ್ರಸಾರವಾಗುತ್ತಿದೆ.

ಹೊಸ ಲೈಫ್ ಲೈನ್

ಸೀಸನ್ 15ರ ವಿಶೇಷತೆ ಎಂದರೆ ಸೂಪರ್ ಸಂಡೂಕ್ ಎನ್ನುವ ಹೊಸ ಅಂಶ ಸೇರಿಸಲಾಗಿದೆ. ಸ್ಪರ್ಧಿಗಳು ನಷ್ಟವನ್ನು ಮರಳಿ ಪಡೆಯುವ ಅವಕಾಶ ಇದರಲ್ಲಿದೆ. ಜೊತೆಗೆ ದೇಶ್ ಕ ಸವಾಲ್ ಹೆಸರಿನ ವೀಡಿಯೋ ಕಾಲ್ ಮತ್ತು ಡಬಲ್ ಡಿಪ್ ಎಂಬ ಹೊಸ ಲೈಫ್ ಲೈನ್ ಸೇರ್ಪಡೆ ಮಾಡಲಾಗಿದೆ.

2000ದಲ್ಲಿ ಮೊದಲ ಸೀಸನ್ ಆರಂಭವಾಗಿತ್ತು. ಕಾರಣಾಂತರಗಳಿಂದ 3ನೇ ಸೀಸನ್ ಅನ್ನು ಶಾರುಖ್ ಖಾನ್ ನಡೆಸಿಕೊಟ್ಟಿದ್ದರು. 7ನೇ ಸೀಸನ್ ನಲ್ಲಿ ಗರಿಷ್ಠ ಮೊತ್ತವನ್ನು 7 ಕೋಟಿ ರೂ. ಮತ್ತು 14ನೇ ಸೀಸನ್ ನಲ್ಲಿ 7.5 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.

ಸ್ಪರ್ಧಿಗಳೊಂದಿಗೆ ಬಿಗ್ ಬಿ ಆತ್ಮೀಯವಾಗಿ ಮಾತನಾಡುತ್ತಾ ಕಾರ್ಯಕ್ರಮ ನಡೆಸಿಕೊಡುವ ರೀತಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಅದೇ ರೀತಿ ಬಿಗ್ ಬಿ ಮನಸಿನಲ್ಲೂ ಈ ಕಾರ್ಯಕ್ರಮ ವಿಶೇಷ ಸ್ಥಾನ ಪಡೆದಿದೆ. ”ಕೆಬಿಸಿ ನನ್ನ ಜೀವನದ ಅವಿಭಾಜ್ಯ ಅಂಗ” ಎಂದು ಅವರು ಹೇಳಿಕೊಂಡಿದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *