ಎಲ್ಲಾ ನದಿಗಳಿಗಿಂತ ವಿರುದ್ಧ ದಿಕ್ಕಿನಲ್ಲಿ ಹರಿಯುತ್ತದೆ ನರ್ಮದಾ ನದಿ – ಪುರಾಣದ ಪ್ರಕಾರ ಇರುವ ಆ ಕಾರಣ ಏನು ಗೊತ್ತಾ?

ಎಲ್ಲಾ ನದಿಗಳಿಗಿಂತ ವಿರುದ್ಧ ದಿಕ್ಕಿನಲ್ಲಿ ಹರಿಯುತ್ತದೆ ನರ್ಮದಾ ನದಿ – ಪುರಾಣದ ಪ್ರಕಾರ ಇರುವ ಆ ಕಾರಣ ಏನು ಗೊತ್ತಾ?

ನ್ಯೂಸ್ ಆ್ಯರೋ‌ : ನದಿಗಳು ಜನರ ಜೀವನಾಡಿ. ಇದೇ ಕಾರಣಕ್ಕೆ ಪುರಾಣಗಳಲ್ಲಿ ನದಿಗಳಿಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಅಲ್ಲದೆ ನದಿಗಳ ಮಹತ್ವ ಅರಿತ ಹಿರಿಯರು ದಡದಲ್ಲಿಯೇ ನಗರಗಳನ್ನು ನಿರ್ಮಿಸಿದ್ದಾರೆ.

ಒಂದೊಂದು ನದಿಯೂ ಪವಿತ್ರ

ಸರಸ್ವತಿ, ಗಂಗಾ, ಕಾವೇರಿ ಹೀಗೆ ಪ್ರತಿಯೊಂದು ನದಿಯನ್ನೂ ಭಾರತದ ಸಂಸ್ಕೃತಿಯಲ್ಲಿ ಪೂಜಿಸಲಾಗುತ್ತದೆ. ನದಿಗಳಿಂದ ಪಾಪ ಕಳೆದು ಹೋಗುತ್ತದೆ ಎನ್ನುವ ನಂಬಿಕೆಯೂ ಭಾರತೀಯರಲ್ಲಿ ಮನೆ ಮಾಡಿದೆ. ಇನ್ನೊಂದು ವಿಶೇಷ ಎಂದರೆ ದೇಶದಲ್ಲಿ ಹೆಚ್ಚಿನ ನದಿಗಳು ಪಶ್ವಿಮದಿಂದ ಪೂರ್ವಕ್ಕೆ ಹರಿದು ಸಮುದ್ರ ಸೇರುತ್ತದೆ. ಕೆಲವೇ ಕೆಲವು ನದಿಗಳು ಮಾತ್ರ ಪೂರ್ವದಿಂದ ಪಶ್ಚಿಮಕ್ಕೆ ಹರಿದು ಕಡಲ ಒಡಲನ್ನು ಅಪ್ಪುತ್ತವೆ. ಈ ಪೈಕಿ ನರ್ಮದಾವೂ ಒಂದು.

ದೇಶದ 5ನೇ ಅತಿ ದೊಡ್ಡ ನದಿ
ಮಧ್ಯಪ್ರದೇಶ ಮತ್ತು ಗುಜರಾತ್‍ನ ಜೀವನ ರೇಖೆ ಎಂದೇ ನರ್ಮದಾ ನದಿಯನ್ನು ಕರೆಯಲಾಗುತ್ತದೆ. ಈ ಎರಡು ರಾಜ್ಯಗಳ ಮೇಲೆ ಇದು ಅತಿ ಹೆಚ್ಚು ಪ್ರಭಾವ ಬೀರುವುದರಿಂದ ಹೀಗೆ ಕರೆಯಲಾಗುತ್ತದೆ. ಈ ಎರಡು ರಾಜ್ಯವಲ್ಲದೆ ಮಹಾರಾಷ್ಟ್ರದಲ್ಲೂ ಹರಿಯುವ ನರ್ಮದಾ ದೇಶದ 5ನೇ ಅತಿ ದೊಡ್ಡ ನದಿ.

ವಿರುದ್ಧ ಚಲನೆ ಏಕೆ?

ಮೊದಲೇ ಹೇಳಿದಂತೆ ನರ್ಮದಾ ಇತರ ನದಿಗಳಂತೆ ಚಲಿಸದೆ ಪೂರ್ವದಿಂದ ಪಶ್ಚಿಮಕ್ಕೆ ಹರಿಯಲು ಕಾರಣವಿದೆ. ರಿಫ್ಟ್ ವ್ಯಾಲಿಯ ಕಾರಣದಿಂದ ಈ ಅಚ್ಚರಿಯ ವಿದ್ಯಮಾನ ಜರಗುತ್ತದೆ. ಇದರ ಸ್ಲಫ್ ವಿರುದ್ದ ದಿಕ್ಕಿನಲ್ಲಿ ಇರುವ ಕಾರಣ ಇದೂ ಅದೇ ದಿಶೆಯ ಮೂಲಕ ಸಾಗುತ್ತದೆ.

ಪುರಾಣದ ಉಲ್ಲೇಖ
ನರ್ಮದಾ ನದಿ ವಿರುದ್ದ ದಿಕ್ಕಿನಲ್ಲಿ ಹರಿಯಲು ಪೌರಾಣಿಕ ಹಿನ್ನಲೆಯೂ ಇದೆ. ನರ್ಮದೆ ಸೋನಭದ್ರನನ್ನು ಪ್ರೀತಿಸುತ್ತಿದ್ದಳು. ಆದರೆ ಆತ ಇಷ್ಟ ಪಟ್ಟಿದ್ದು ನರ್ಮದಾ ಗೆಳತಿ ಜುಹಿಳಾಳನ್ನು. ಭಗ್ನಪ್ರೇಮಿಯಾದ ನರ್ಮದೆ ಬೇಸರವಾಗಿ ತಿರುಗಿ ವಾಪಸ್ಸು ಹೋಗುತ್ತಾಳೆ. ಇಂದಿಗೂ ಒಂದು ಕಡೆ ಸೋನಭದ್ರಾ ನದಿಯಿಂದ ನರ್ಮದಾ ಬೇರೆಯಾಗಿ ಹರಿಯುವುದನ್ನು ಕಾಣಬಹುದು ಎಂದು ಹಿರಿಯರು ಹೇಳುತ್ತಾರೆ.

ನರ್ಮದೆ ಶಿವನ ಪುತ್ರಿ ಎಂದೂ ಕರೆಯಲಾಗುತ್ತದೆ. ಈ ನದಿಯ ದರ್ಶನ ಮಾತ್ರದಿಂದಲೇ ಅನೇಕ ಪಾಪಕರ್ಮಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *