
ಚಂದ್ರಯಾನ-3 : ಪ್ರಕಾಶ್ ರಾಜ್ ಟ್ರೋಲ್ ಆಯ್ತು, ಇದೀಗ ಅಹಿಂಸಾ ಚೇತನ್ ಸರದಿ – ಚೇತನ್ ಮಾಡಿದ ಅವಾಂತರವೇನು?
- ಮನರಂಜನೆ
- August 24, 2023
- No Comment
- 75
ನ್ಯೂಸ್ ಆ್ಯರೋ : ಚಂದ್ರಯಾನ-3 ಬಗ್ಗೆ ಹಗುರವಾಗಿ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಹಾಕಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್ ಗೆ ನೆಟ್ಟಿಗರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಳ್ಳುತ್ತಿದ್ದರೆ ಇನ್ನೊಬ್ಬ ನಟ ಅಹಿಂಸಾ ಚೇತನ್ ಕೂಡ ವ್ಯಂಗ್ಯವಾಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಚೇತನ್ ಹೇಳಿದ್ದೇನು?
ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣವನ್ನು ನೋಡಲು ನನಗೆ ಸಂತೋಷವಾಗಿದೆ. ಈ ಯಶಸ್ಸಿನ ಕೀರ್ತಿ/ಗುರುತು ಯಾರಿಗೆ ಸಲ್ಲುತ್ತದೆ? ನಮ್ಮ ವಿಜ್ಞಾನಿಗಳಿಗೆ ಅಥವಾ ಲಾರ್ಡ್ ತಿರುಪತಿಗೆ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಚೇತನ್ ಎಕ್ಸ್ ನಲ್ಲಿ ಮಾಡಿರುವ ಈ ಪೋಸ್ಟಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಹಲವರು ಚೇತನ್ ವಿರುದ್ಧ ಕಿಡಿ ಕಾರಿದ್ದಾರೆ. ಇಷ್ಟು ಸಣ್ಣ ವಿಷಯ ಗೊತ್ತಿಲ್ಲವೇನು ಮೂರ್ಖ? ತಿರುಪತಿ ತಿಮ್ಮಪ್ಪನ ಭಕ್ತರಾದ ಇಸ್ರೋ ವಿಜ್ಞಾನಿಗಳಿಗೆ ಎಂದು ಒಬ್ಬರು ಹೇಳಿದ್ದಾರೆ. ಇಬ್ಬರಿಗೂ ಸಲ್ಲುತ್ತದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ಪ್ರಕಾಶ್ ರಾಜ್ ನಂತೆ ಚೇತನ್ ಅನ್ನೂ ಬೆಂಡೆತ್ತಲಾಗುತ್ತಿದೆ.
ಇಸ್ರೋ ಜುಲೈ 14ರಂದು ಚಂದ್ರಯಾನ-3 ನೌಕೆಯನ್ನು ಉಡಾವಣೆ ಮಾಡಿತ್ತು. ಅದಕ್ಕೂ ಮೊದಲು ಚಂದ್ರಯಾನ-3 ಯಶಸ್ಸಿಗಾಗಿ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ನಿನ್ನೆ (ಆಗಸ್ಟ್ 23) ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿದಿದೆ.