ಬಾಕ್ಸ್ ಆಫೀಸ್ ಲೂಟಿ ಮಾಡಿದ ರಜನಿಕಾಂತ್ – ಎರಡೇ ದಿನಕ್ಕೆ 100 ಕೋಟಿ ರೂ. ಗಳಿಕೆ ದಾಟಿದ ‘ಜೈಲರ್’

ಬಾಕ್ಸ್ ಆಫೀಸ್ ಲೂಟಿ ಮಾಡಿದ ರಜನಿಕಾಂತ್ – ಎರಡೇ ದಿನಕ್ಕೆ 100 ಕೋಟಿ ರೂ. ಗಳಿಕೆ ದಾಟಿದ ‘ಜೈಲರ್’

ನ್ಯೂಸ್ ಆ್ಯರೋ‌ : ಬಾಕ್ಸ್ ಆಫೀಸ್ ನಲ್ಲಿ ಮತ್ತೊಮ್ಮೆ ರಜನಿಕಾಂತ್ ಮ್ಯಾಜಿಕ್ ಸೃಷ್ಟಿಯಾಗಿದೆ. ಗುರುವಾರ ಬಿಡುಗಡೆಗೊಂಡ ‘ಜೈಲರ್’ ಚಿತ್ರ ದಾಖಲೆಯ ಗಳಿಕೆ ಕಾಣುವ ಮೂಲಕ ತಲೈವಾ ಹವಾ ಇನ್ನೂ ಮುಂದುವರಿದಿದೆ ಎನ್ನುವುದನ್ನು ಸಾರಿ ಹೇಳಿದೆ. ವಿಶ್ವಾದ್ಯಂತ ಬಿಡುಗಡೆಗೊಂಡ ಚಿತ್ರ ಸಾಧಾರಣ ಎಂದು ವಿಮರ್ಶಕರು ಹೇಳಿದ್ದರೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

2 ದಿನಗಳ ಗಳಿಕೆ ಎಷ್ಟು?

ಎರಡೇ ದಿನಗಳಲ್ಲಿ ‘ಜೈಲರ್’ 100 ಕೋಟಿ ರೂ. ಗಡಿ ದಾಟಿದೆ. ಮೊದಲ ದಿನ ಭಾರತದಲ್ಲಿ 52 ಕೋಟಿ ರೂ. ಗಳಿಸಿದ್ದ ಚಿತ್ರ ವಿಶ್ವಾದ್ಯಂತ 80 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಎರಡನೇ ದಿನವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಸುಲಭವಾಗಿಯೇ ಗಳಿಕೆ 100 ಕೋಟಿ ರೂ. ದಾಟಿದೆ ಎನ್ನಲಾಗಿದೆ. ಅಧಿಕೃತ ಮಾಹಿತಿ ಇನ್ನಷ್ಟೆ ಹೊರ ಬರಬೇಕಿದೆ.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಲಿವುಡ್ ಪ್ರವೇಶಿಸಿದ್ದಾರೆ. ನರಸಿಂಹ ಪಾತ್ರದ ಮೂಲಕ ಶಿವಣ್ಣ ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ.

ಇನ್ನು ಬಹುತಾರಾಗಣದ ಜೈಲರ್ ಚಿತ್ರದಲ್ಲಿ ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ಜಾಕಿಶ್ರಾಫ್, ತಮನ್ನಾ, ರಮ್ಯಾ ಕೃಷ್ಣ, ಸುನಿಲ್, ಯೋಗಿ ಬಾಬು ಮತ್ತಿತರರು ಮುಖ್ಯ ಪಾತ್ರದಲ್ಲಿ ಅಬಿನಯಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *