ಟಾಲಿವುಡ್ ನಟ ಚಿರಂಜೀವಿ ಆಸ್ತಿ ಸತ್ಯ ಬಯಲು – ಮೆಗಾಸ್ಟಾರ್ ಬಳಿಯಿದೆ 2 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ..

ಟಾಲಿವುಡ್ ನಟ ಚಿರಂಜೀವಿ ಆಸ್ತಿ ಸತ್ಯ ಬಯಲು – ಮೆಗಾಸ್ಟಾರ್ ಬಳಿಯಿದೆ 2 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ..

ನ್ಯೂಸ್ ಆ್ಯರೋ‌ : ಹೈದರಾಬಾದ್ ನ ಕೋಕಪೇಟ್ ಪ್ರದೇಶದಲ್ಲಿ ಭೂಮಿ ಹರಾಜು ಹಾಕಲು ಸರಕಾರ ಮುಂದಾಗಿದೆ. ಹರಾಜು ಪ್ರತಿಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ಎಕ್ರೆಗೆ 100 ಕೋಟಿ ರೂ.ವರೆಗೆ ಕೂಗಲಾಗಿದ್ದು, ಅದೇ ಏರಿಯಾದಲ್ಲಿರುವ ನಟ ಚಿರಂಜೀವಿ ಆಸ್ತಿಯ ಬಗ್ಗೆ ಚರ್ಚೆ ಆರಂಭವಾಗಿದೆ.

20 ಎಕ್ರೆ

ಕೋಕಾಪೇಟ್ ನಲ್ಲಿ ಚಿರಂಜೀವಿ ಹಲವು ವರ್ಷಗಳ ಹಿಂದೆ ಜಮೀನು ಖರೀದಿಸಿದ್ದರು. ಇದು ಅಂದಾಜು 20 ಎಕ್ರೆ ಹೊಂದಿದೆ ಎನ್ನಲಾಗಿದೆ. ಈ ಲೆಕ್ಕದಲ್ಲಿ ಈಗ ಅವರ ಆಸ್ತಿಯ ಮೌಲ್ಯ 2,000 ಕೋಟಿ ರೂ. ಎನ್ನುವ ಲೆಕ್ಕಾಚಾರವಿದೆ.

ಚಿರಂಜೀವಿ ಕೋಕಾಪೇಟ್ ನಲ್ಲಿ 2 ಎಕ್ರೆ ಜಾಗವನ್ನು ತಂಗಿಯರಿಗೆ ಉಡುಗೊರೆಯಾಗಿ ನೀಡಿದ್ದರು. 2 ವರ್ಷಗಳ ಹಿಂದೆ ರಕ್ಷಾ ಬಂಧನ್ ಹಿನ್ನಲೆಯಲ್ಲಿ ಸಹೋದರಿಯರಾದ ವಿಜಯ ದುರ್ಗಾ, ಮಾಧವಿಗೆ ತಲಾ ಒಂದು ಎಕ್ರೆ ಜಾಗವನ್ನು ನೀಡಿದ್ದರು. ಚಿರಂಜೀವಿ ಅವರ ಪತ್ನಿ ಸುರೇಖಾ ಮುಂದೆ ನಿಂತು ರಿಜಿಸ್ಟ್ರೇಷನ್ ಮಾಡಿಸಿದ್ದರು. ಅಂದರೆ ಅದರ ಮೌಲ್ಯ 200 ಕೋಟಿ ರೂ. ಎನ್ನಲಾಗುತ್ತಿದೆ.

100ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಚಿರಂಜೀವಿ ಕೆಲವು ವರ್ಷಗಳ ಹಿಂದೆ ರಾಜಕೀಯ ಅಖಾಡಕ್ಕೆ ಧುಮುಕಿ ಪ್ರಜಾರಾಜ್ಯಂ ಪಕ್ಷ ಕಟ್ಟಿದ್ದರು. ಆದರೆ ಅಲ್ಲಿ ಯಶಸ್ಸು ಲಭಿಸಿದ್ದು ಚಿತ್ರರಂಗಕ್ಕೆ ಮರಳಿದ್ದಾರೆ. ಸದ್ಯ ಚಿರಂಜೀವಿ ನಟನೆಯ ‘ಭೋಳಾ ಶಂಕರ್’ ತೆರೆಗೆ ಬರಲು ಸಿದ್ದವಾಗಿದೆ. ತಮನ್ನಾ, ಕೀರ್ತಿ ಸುರೇಶ್ ಮತ್ತಿತರರು ನಟಿಸಿರುವ ಈ ಚಿತ್ರ ಆಗಸ್ಟ್ 11ರಂದು ಬಿಡುಗಡೆಯಾಗಲಿದೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *